ಅಲ್ಲು ಅರ್ಜುನ್​ ಚಿತ್ರದಲ್ಲಿ ಸಂಜಯ್ ದತ್; ಕೆಜಿಎಫ್​ ಸೂತ್ರ ಅನುಸರಿಸುತ್ತಿದೆಯಾ ಪುಷ್ಪ-2

Pushpa 2
Published on

ಹೈದರಾಬಾದ್: ಟಾಲಿವುಡ್​ನ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ, ಸುಕುಮಾರ್​ ನಿರ್ದೇಶನದ ಬಹು ನಿರೀಕ್ಷಿತ ಪುಷ್ಪ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಈವರೆಗೆ ಸಿನಿಮಾದ ಬಿಡುಗಡೆ ದಿನಾಂಕ, ಫಸ್ಟ್​ ಲುಕ್​ ಹಾಗೂ ಟೀಸರ್​ ಚಿತ್ರ ಹೆಚ್ಚು ಸದ್ದು ಮಾಡಿತ್ತು. ಇದೀಗ ಚಿತ್ರದ ಬಗೆಗಿನ ಮೇಜರ್​ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಗರಿಗೆದರಿದೆ.

ಪುಷ್ಪ-2 ಚಿತ್ರದ ಪಾತ್ರವರ್ಗ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೊಸ ಕಲಾವಿದರು ಎಂಟ್ರಿ ಕೊಡುತ್ತಿದ್ದಾರೆ. ಇದೀಗ ಕೇಳಿ ಬಂದಿರುವ ಹೊಸ ಮಾಹಿತಿ ಪ್ರಕಾರ ಬಾಲಿವುಡ್​ನ ಖ್ಯಾತ ನಟ ಸಂಜಯ್​ ದತ್​ ಪುಷ್ಪ-2 ಚಿತ್ರತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ಪುಷ್ಠಿ ನೀಡುವಂತೆ ಹಲವಾರು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Pushpa 2

ಮೊದಲಿನಿಂದಲೂ ಪುಷ್ಪ ಮತ್ತು ಕೆಜಿಎಫ್​ ತಂಡದ ನಡುವೆ ಹೋಲಿಕೆ ಮತ್ತು ಸಾಮ್ಯತೆ ಕಾಣಿಸುತ್ತಿದೆ. ಕೆಜಿಎಫ್​ ಗೆದ್ದ ಬಳಿಕ ಅದರ ಮುಂದಿನ ಭಾಗದಲ್ಲಿ ಬಾಲಿವುಡ್​​ನ ಕಲಾವಿದರನ್ನು ಸೇರಿಸಿಕೊಳ್ಳಲಾಗಿತ್ತು. ರವೀನಾ ಟಂಡನ್​, ಸಂಜಯ್ ದತ್​ ಅವರ ಆಗಮನದಿಂದ ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ಮೆರುಗು ಹೆಚ್ಚಿತು. ಈಗ ಪುಷ್ಪ 2 ಚಿತ್ರತಂಡ ಕೂಡ ಅದೇ ಸೂತ್ರವನ್ನು ಅನುಸರಿಸಲಿದೆಯಾ ಎಂಬ ಅನುಮಾನ ಮೂಡಲು ಶುರುವಾಗಿದೆ.

ಪುಷ್ಪ-2 ಚಿತ್ರದಲ್ಲಿ ಸಂಜಯ್​ ದತ್​ ನಟಿಸಲಿದ್ದಾರೆ ಎಂದು ಸುದ್ದಿಯನ್ನು ಚಿತ್ರತಂಡ ಈವರೆಗೆ ಖಚಿತಪಡಿಸಿಲ್ಲ ಅಥವಾ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ಈ ಸಿನಿಮಾ ಮೇಲಿನ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಗೆಬಗೆಯ ಗಾಸಿಪ್​ಗಳು ಟಾಲಿವುಡ್​ ಅಂಗಳದಲ್ಲಿ ಹರಿದಾಡಲು ಶುರುವಾಗಿದೆ. ಆರೆ ಯಾವುದನ್ನು ನಂಬಬೇಕು, ಯಾವುದನ್ನು ಬಿಡುವುದು ಎಂಬ ಗೊಂದಲ ಅಭಿಮಾನಿಗಳಲ್ಲಿ ಸಹಜವಾಗಿ ಮೂಡಲು ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net