

ನವದೆಹಲಿ: ಯುನಯಟೆಡ್ ಕಮರ್ಷಿಯಲ್ ಬ್ಯಾಂಕ್ಗೆ (UCO) ಸಂಬಂಧಿಸಿದಂತೆ ನಡೆದಿದೆ ಎನ್ನಲಾದ 820 ಕೋಟಿ ರೂ. ಮೊತ್ತದ ಸಂಶಯಾಸ್ಪದ ವಹಿವಾಟಿಗೆ ಸಂಬಂಧಿಸಿದಂತೆ ರಾಜಸ್ಥಾನ ಮತ್ತು ಮಹಾರಾಷ್ಟ್ರದ ಏಳು ನಗರಗಳ ಒಟ್ಟು 67ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಕೇಂದ್ರಿಯಾ ತನಿಖಾ ದಳ (CBI) ದಾಳಿ ಮಾಡಿ ಶೋಧ ಕಾರ್ಯ ನಡೆಸುತ್ತಿದೆ.
ಕಳೆದ ವರ್ಷ, ನವೆಂಬರ್ 10-13 ರ ನಡುವೆ 8,53,049 ಐಎಂಪಿಎಸ್ (ತಕ್ಷಣದ ಪಾವತಿ ವ್ಯವಸ್ಥೆ) ವಹಿವಾಟುಗಳು ನಡೆದಿವೆ, ಇದರಲ್ಲಿ 41,000 ಕ್ಕೂ ಹೆಚ್ಚು ಯುಕೋ ಬ್ಯಾಂಕ್ ಖಾತೆದಾರರ ಖಾತೆಗಳಿಗೆ 820 ಕೋಟಿ ರೂಪಾಯಿಗಳನ್ನು ತಪ್ಪಾಗಿ ಹಣ ವರ್ಗಾವಣೆ ಮಾಡಲಾಗಿತ್ತು.
ರಾಜಸ್ಥಾನದ ಜೋಧ್ಪುರ, ಜೈಪುರ, ಜಲೋರ್, ನಾಗೌರ್, ಬಾರ್ಮರ್, ಫಲೋಡಿ ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ನಡೆಸಿತ್ತು. ದಾಳಿಯ ವೇಳೆ ಯುಕೊ ಬ್ಯಾಂಕ್ ಮತ್ತು ಐಡಿಎಫ್ಸಿಗೆ ಸಂಬಂಧಿಸಿದ ಸುಮಾರು 130 ದಾಖಲೆಗಳು, 40 ಮೊಬೈಲ್ ಫೋನ್ಗಳು, 2 ಹಾರ್ಡ್ ಡಿಸ್ಕ್ ಮತ್ತು 1 ಇಂಟರ್ನೆಟ್ ಡಾಂಗಲ್ಅನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಯುಕೋ ಬ್ಯಾಂಕ್ನ ಬ್ಯಾಂಕಿಂಗ್ ಆ್ಯಪ್ ನಿರ್ವಹಿಸುತ್ತಿರುವ ಸಂಸ್ಥೆಯ ಇಬ್ಬರು ಇಂಜಿನಿಯರ್ಗಳಾದ ಅವಿಶೇಕ್ ಶ್ರೀವಾಸ್ತವ ಮತ್ತು ಸುಪ್ರಿಯಾ ಮಲ್ಲಿಕ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ 2023ರ ಡಿಸೆಂಬರ್ನಲ್ಲಿ ಸಿಬಿಐ ಕಲ್ಕತ್ತಾ ಹಾಗೂ ಮಂಗಳೂರಿನಲ್ಲಿ ಶೋಧ ಕಾರ್ಯ ನಡೆಸಿತ್ತು.