

ಹೈದರಾಬಾದ್: ಇಲ್ಲಿನ ಸಂಧ್ಯಾ ಚಿತ್ರಮಂದಿದಲ್ಲಿ ಡಿ.4ರಂದು ಕಾಲ್ತುಳಿತ(Stampede Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ತೆಲಂಗಾಣ ಕಾಂಗ್ರೆಸ್ ನಾಯಕರು ನಟ ಅಲ್ಲು ಅರ್ಜುನ್ ಮೇಲೆ ಮುಗಿಬಿದ್ದ ಹಿನ್ನೆಲೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಟೀಕಿಸಿದ್ದಾರೆ.
ಕೆಲ ಕಾಂಗ್ರೆಸ್ ನಾಯಕರು ತೆಲುಗು ಚಿತ್ರರಂಗದ ಪ್ರತಿಷ್ಠೆಗೆ ಧಕ್ಕೆ ತರುವಂತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಕ್ಷದ ಅಧ್ಯಕ್ಷರು ಈ ಕೂಡಲೇ ಇಂತಹ ಹೇಳಿಕೆಗಳನ್ನು ತಡೆಯಿಡಿಯಬೇಕು ಎಂದು ಠಾಕೂರ್ ಒತ್ತಾಯಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಜನ್ಮದಿನ ಅಂಗವಾಗಿ ಇದೇ ಬುಧವಾರ(ಡಿ.25) ದಂದು ಹೈದರಾಬಾದ್ನ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.
''ಜಾಗತಿಕ ಸಿನಿಮೀಯ ವೇದಿಕೆಗಳಲ್ಲಿ ಭಾರತದ ಉಪಸ್ಥಿತಿಯನ್ನು ಹೆಚ್ಚುಸುವಲ್ಲಿ ದಕ್ಷಿಣ ಭಾರತೀಯ ಸಿನಿಮಾಗಳು ಅದರಲ್ಲಿ ತೆಲುಗು ಚಲನಚಿತ್ರಗಳು ಮಹತ್ವದ ಕೊಡುಗೆ ನೀಡಿವೆ ಎಂದು ಒತ್ತಿ ಹೇಳಿದ ಠಾಕೂರ್, ಕೆಲ ಕಾಂಗ್ರೆಸ್ ನಾಯಕರು ಮಾಡಿದ ನಕರಾತ್ಮಕ ಕಾಮೆಂಟ್ಗಳಿಂದ ಇದು ಸಿನಿಮಾ ಉದ್ಯಮದ ಸಾಧನೆಗಳನ್ನು ದರ್ಬಲಗೊಳಿಸಬಹುದು'' ಎಂದು ಕಳವಳ ವ್ಯಕ್ತಪಡಿಸಿದರು.
ದಕ್ಷಿಣ ಭಾರತದ ಚಿತ್ರೋದ್ಯಮ ಮತ್ತು ತೆಲುಗು ಸಿನಿಮಾಗಳು ಭಾರತ ಚಲನಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದೆ. ದುರದೃಷ್ಟವಶಾತ್ ಇಂತಗ ಆಧಾರರಹಿತ ಹೇಳಿಕೆಗಳು ಈ ಖ್ಯಾತಿಗೆ ಕಳಂಕ ತರುವ ಅಪಾಯವಿದೆ ಎಂದರು.
ಪ್ರಧಾನಿ ಮೋದಿ ಸರ್ಕಾರದ ಅಡಿಯಲ್ಲಿ ನಾನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವನಾಗಿದ್ದಾಗ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದ ಅವರು, ಕಾಂಗ್ರೆಸ್ ನಾಯಕರ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಟೀಕಿಸಿದರು ಅಲ್ಲದೆ, ಇದರಿಂದ ಕಲಾವಿದರ ಪ್ರತಿಷ್ಠೆಗೆ ಹಾನಿಯಾಗಬಹುದು ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್).