CM ಬಗ್ಗೆ ಮಾತನಾಡಿದರೆ ಇನ್ಮುಂದೆ ತೆಲಂಗಾಣದಲ್ಲಿ ನಿಮ್ಮ ಸಿನಿಮಾಗಳಿಗೆ ತಡೆ; ಅಲ್ಲು ಅರ್ಜುನ್​ಗೆ ಕಾಂಗ್ರೆಸ್​ ಶಾಸಕ ಧಮ್ಕಿ!

dk (28) (1)
Published on

ಹೈದರಾಬಾದ್: ನಮ್ಮ ಸಿಎಂ(CM) ರೇವಂತ್​ ರೆಡ್ಡಿ ಬಗ್ಗೆ ಟೀಕೆಗಳನ್ನು ಮಾಡುವುದು ನಿಲ್ಲಿಸದಿದ್ದರೆ ನಿಮ್ಮ ಮುಂಬರುವ ಸಿನಿಮಾಗಳನ್ನು ತೆಲಂಗಾಣದಲ್ಲಿ​ ಬಿಡುಗಡೆಗೊಳಿಸಲು ಬಿಡುವುದಿಲ್ಲ ಎಂದು ತೆಲಂಗಾಣ ಕಾಂಗ್ರೆಸ್​ ಶಾಸಕ ಭೂಪತಿ ರೆಡ್ಡಿ, ನಟ ಅಲ್ಲು ಅರ್ಜುನ್​ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಬುಧವಾರ ಸುದ್ದಿಗಾರ ಜತೆ ಮಾತನಾಡಿದ ಭೂಪತಿ ರೆಡ್ಡಿ, ಅಲ್ಲು ಅರ್ಜುನ್​ ಅವರು ನಟನೆ ಬಗ್ಗೆ ಗೌರವಿಸಬೇಕು. ತಮ್ಮ ವೃತ್ತಿ ಜೀವನದತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

''ಅಲ್ಲು ಅವರೇ, ನಿಮ್ಮ ಮೂಲ ಆಂಧ್ರಪ್ರದೇಶ, ನೀವು ಜೀವನೋಪಾಯಕ್ಕಾಗಿ ಇಲ್ಲಿಗೆ(ಹೈದರಾಬಾದ್​) ಬಂದಿದ್ದೀರಿ. ನಮ್ಮ ಸಿಎಂ ಬಗ್ಗೆ ಅಧಿಕವಾಗಿ ಮಾತನಾಡುವುದಾಗಲಿ, ಟೀಕೆ ಮಾಡುವುದಾಗಲಿ ಕೂಡಲೇ ನಿಲ್ಲಿಸಿ ಎಂದು ನಾನು ಶಾಸಕನಾಗಿ ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ'' ಎಂದಿದ್ದಾರೆ.

ತೆಲಂಗಾಣಕ್ಕೆ ನಿಮ್ಮ ಕೊಡುಗೆ ಏನು? ಎಂದು ನಾವು ಕೇಳಬೇಕಾಗುತ್ತದೆ. ನಮ್ಮ ಜನ ಮತ್ತು ನಾವು ನಿಮಗೆ ನೀಡಿದ ಗೌರವ ಉಳಿಸಿಕೊಳ್ಳಿ. ಇದೆಲ್ಲಾ ಇಲ್ಲಿಗೆ ಬಿಡಿ, ನಿಮ್ಮ ವ್ಯವಹಾರ ಮತ್ತು ವೃತ್ತಿಜೀವನದ ಕಡೆ ಗಮನಹರಿಸಿ ಎಂದು ಶಾಸಕ ಭೂಪತಿ ರೆಡ್ಡಿ ಸಲಹೆ ನೀಡಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ (ಡಿ.04ರಂದು ಸಂಧ್ಯಾ ಚಿತ್ರಮಂದಿರಲ್ಲಿ ನಡೆದ ಕಾಲ್ತುಳಿತ ಪ್ರಕರಣ) ಮಂಗಳವಾರ(ಡಿ.24) ನಟ ಅಲ್ಲು ಅರ್ಜುನ್‌(Allu Arjun) ಚಿಕ್ಕಡಪಲ್ಲಿ ಪೊಲೀಸ್‌ ಠಾಣೆಗೆ ವಿಚಾರಣೆಗೆ ಹಾಜರಾಗಿ ನಾಲ್ಕು ತಾಸು ವಿಚಾರಣೆ ಎದುರಿಸಿದ್ದಾರೆ.

ನಟ ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಚಿತ್ರಮಂದಿರ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆ ಡಿ.13ರಂದು ನಟನ್ನು ಬಂಧಿಸಲಾಗಿತ್ತು. ಅದೇ ದಿನ ತೆಲಂಗಾಣ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನಿ ಮಂಜೂರು ಮಾಡಿತ್ತು. ಡಿ.14ರಂದು ಬೆಳಗ್ಗೆ ಜೈಲಿನಿಂದ ಬಿಡುಗಡೆಗೊಂಡಿದ್ದರು,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net