ಟಾಲಿವುಡ್​ನ​ 'ಕಣ್ಣಪ್ಪ' ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ ಕನ್ನಡದ ಸ್ಟಾರ್​ ಹೀರೋ!

Untitled design - 2023-10-12T202644.268
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ನಟ ಮಂಚು ವಿಷ್ಣು ಅವರ ಕನಸಿನ ಪ್ರಾಜೆಕ್ಟ್​ 'ಕಣ್ಣಪ್ಪ' ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಿದ್ದು, ಸಿನಿಮಾದ ಬಗ್ಗೆ ಒಂದಷ್ಟು ಕುತೂಹಲಕಾರಿ ಸಂಗತಿಗಳು ಸದ್ಯ ಟಾಲಿವುಡ್​ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಮಧ್ಯೆ ಕನ್ನಡ ಚಿತ್ರರಂಗದ ಹಿರಿಯ ನಟ, ಸ್ಟಾರ್ ಹೀರೋ ಒಬ್ಬರ ಎಂಟ್ರಿಯಾಗಲಿದೆ ಎಂಬ ಸುದ್ದಿ ಇದೀಗ ಸಿನಿಪ್ರಿಯರ ಗಮನವನ್ನು ಸೆಳೆದಿದೆ.

ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರವು ಈಗ ಮತ್ತೊಮ್ಮೆ ಸುದ್ದಿ ಮಾಡುತ್ತಿದೆ. 'ಕಣ್ಣಪ್ಪ' ಚಿತ್ರದಲ್ಲಿ ಟಾಲಿವುಡ್​ನ ರೆಬೆಲ್ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಅಭಿನಯಿಸಲಿದ್ದಾರೆ ಎಂಬ ಸಂಗತಿ ಈ ಹಿಂದೆಯೇ ಸಿನಿಪ್ರೇಕ್ಷಕರಿಗೆ ತಿಳಿದಿತ್ತು. ಇದೀಗ ಚಿತ್ರದಲ್ಲಿ ಸ್ಯಾಂಡಲ್‌ವುಡ್​ನ ಸ್ಟಾರ್ ಹೀರೋ, ನಟ ಶಿವರಾಜ್‌ಕುಮಾರ್ ಅವರು ವಿಶೇಷ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಸದ್ಯ ತಮ್ಮ ಹೊಸ ಚಿತ್ರ 'ಗೋಸ್ಟ್'​ ರಿಲೀಸ್​ನ ಬ್ಯುಸಿಯಲ್ಲಿರುವ ಶಿವರಾಜ್​ಕುಮಾರ್​, 'ಕಣ್ಣಪ್ಪ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಆದ್ರೆ, ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಚಿತ್ರತಂಡ ಘೋಷಿಸಲಿರುವ ಅಧಿಕೃತ ಅಪ್ಡೇಟ್​ಗಾಗಿ ನಿರೀಕ್ಷಿಸಬೇಕಿದೆ.

ಚಿತ್ರದಲ್ಲಿ ಪ್ರಭಾಸ್, ಮೋಹನ್ ಲಾಲ್, ಶಿವರಾಜ್​ಕುಮಾರ್​, ನಯನತಾರಾ, ಮಧುಬಾಲಾ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವಾ ಎಂಟರ್‌ಟೈನ್‌ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net