ಕಾರಿನ ಹಿಂದೆ 'ಸರ್‌ಪಂಚ್‌ಜಿ' ಎಂದು ಬರೆಸಿದ ಚಾಲಕ; ದಂಡದ ಜತೆಗೆ ಪೊಲೀಸರು ಹೇಳಿದ್ದಿಷ್ಟು

Untitled design - 2023-10-12T194611.822
Published on

ಗ್ರೇಟರ್​ ನೋಯ್ಡಾ: ವ್ಯಕ್ತಿಯೊಬ್ಬ ತನ್ನ ಎಸ್‌ಯುವಿ ಕಾರಿನ ಹೆಸರಿನ ಹಿಂದೆ 'ಸರ್'​ ಮತ್ತು ಮುಂದೆ 'ಜಿ' ಎಂದು ಬರೆಸಿಕೊಂಡಿದ್ದು, ಈ ದೃಶ್ಯ ನಗರದ ಸಂಚಾರಿ ಪೊಲೀಸರ ಗಮನಕ್ಕೆ ಬಂದ ಕೂಡಲೇ ಪೊಲೀಸರು ದಂಡ ವಿಧಿಸಿದ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ವರದಿಯಾಗಿದೆ.

ತಮ್ಮ ಎಸ್‌ಯುವಿ ಟಾಟಾ ಪಂಚ್‌ ಕಾರಿನ ಹೆಸರಿಗೆ 'ಸರ್' ಮತ್ತು 'ಜಿ' ಎಂದು ಸೇರಿಸಿದ್ದಾನೆ. ಇದು 'ಸರ್​ಪಂಚ್​ಜಿ' ಎಂಬ ಅರ್ಥವನ್ನು ಕೊಟ್ಟಿದೆ. ವ್ಯಕ್ತಿಯ ಕಾರಿನ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದರ ಬೆನ್ನಲ್ಲೇ ಸಂಚಾರಿ ಪೊಲೀಸರು ಈ ಬಗ್ಗೆ ಗಮನಹರಿಸಿದ್ದು, ಚಲನ್​ ಮೂಲಕ ದಂಡ ವಿಧಿಸಿದ್ದಾರೆ.

ಇದರೊಟ್ಟಿಗೆ ಕಾರಿನ ಹಿಂಭಾಗದ ಬಲಭಾಗದಲ್ಲಿ 'ಗುರ್ಜರ್' ಎಂದು ಹಿಂದಿಯಲ್ಲಿ ಬರೆಸಲಾಗಿದೆ. ಈ ಪದವು ಜಾತಿಯನ್ನು ಬಿಂಬಿಸಿದೆ. ಎಸ್​ಯುವಿ ಕಾರಿನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಗ್ರೇಟರ್ ನೋಯ್ಡಾ ಟ್ರಾಫಿಕ್ ಪೊಲೀಸ್ ಇಲಾಖೆ ಈ ಕುರಿತಂತೆ ಕ್ರಮ ಕೈಗೊಂಡಿದೆ.

ಸಂದೀಪ್ ಭಾಟಿ ಎಂದು ಗುರುತಿಸಲಾದ ಕಾರು ಮಾಲೀಕನ ವಿರುದ್ಧ ಇದೀಗ 500 ರೂ.ಗಳ ಚಲನ್ ಜಾರಿಗೊಳಿಸಿದ್ದು, ಗಮನಾರ್ಹವಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಾತಿ ಆಧಾರಿತ ಮತ್ತು ಧರ್ಮವನ್ನು ಬಳಸದಂತೆ ಜನರಿಗೆ ಆದೇಶ ನೀಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net