ಸ್ಯಾಂಡಲ್​ವುಡ್​ನಲ್ಲಿ ವಿನೂತನ ಪ್ರಯತ್ನ; ಸೈ-ಫೈ ಚಿತ್ರದ 'ಸಖಿ' ಲಿರಿಕಲ್ ಹಾಡು ರಿಲೀಸ್​ ಮಾಡಿದ ಸ್ಟಾರ್​ ನಟಿಯರು!

Untitled design - 2023-10-12T190904.845
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇದೀಗ ಸಾಲು ಸಾಲು ಸಿನಿಮಾಗಳು ತೆರೆ ಕಾಣಲು ಸಜ್ಜಾಗಿದ್ದು, ಈ ಪೈಕಿ ಕೆಲವು ಚಿತ್ರಗಳು ಬಿಡುಗಡೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುವ ಮುಖೇನ ಸಿನಿಪ್ರಿಯರು ಮತ್ತು ನೆಟ್ಟಿಗರ ಗಮನವನ್ನು ಸೆಳೆಯುತ್ತಿದೆ. ಇದೀಗ ಹೊಸ ತಂಡವೊಂದು ರಚಿಸಿರುವ ಸೈನ್ಸ್​-ಫಿಕ್ಷನ್​ 'ಬ್ಲಿಂಕ್'​ ಸ್ಯಾಂಡಲ್​ವುಡ್​ನಲ್ಲಿ ಭಾರೀ ಭರವಸೆ ಮೂಡಿಸುತ್ತಿದೆ.

ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಚಿತ್ರದಲ್ಲಿ 'ದಿಯಾ' ಖ್ಯಾತಿಯ ನಟ ದೀಕ್ಷಿತ್​ ಶೆಟ್ಟಿ, ನಟಿ ಚೈತ್ರಾ ಜೆ.ಆಚಾರ್​, ಮಂದರಾ ಭಟ್ಲಳ್ಳಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಚಿತ್ರದ ಮೊದಲ ಸಾಂಗ್​ ‘ಆಗಂತುಕ’ ರಿಲೀಸ್​ ಮಾಡಿದ್ದ ಚಿತ್ರತಂಡ ಇಂದು ಎರಡನೇ ಹಾಡು 'ಸಖಿ'ಯ ಲಿರಿಕಲ್​ ಅನ್ನು ಅಧಿಕೃತವಾಗಿ ಜನನಿ ಪಿಕ್ಚರ್ಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಗೊಳಿಸಿದೆ.

'ಸಖಿ' ಲಿರಿಕಲ್ ಹಾಡಿನ ಬಿಡುಗಡೆಯನ್ನು ಬಹಳ ವಿಶೇಷ ಹಾಗೂ ವಿನೂತನವಾಗಿ ಮಾಡಿದ ಚಿತ್ರತಂಡ, ಪ್ರಪ್ರಥಮ ಬಾರಿಗೆ ಸ್ಯಾಂಡಲ್​ವುಡ್​ನ ಅನೇಕ ನಟಿಯರಿಂದ ರಿಲೀಸ್​ ಮಾಡಿಸಿದೆ. ಇದು ಹಲವರ ಗಮನ ಸೆಳೆದಿದ್ದು, ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕನ್ನಡ ಚಿತ್ರರಂಗದ ಯಾವ ನಟಿಯರು ಹಾಡಿನ ಬಿಡುಗಡೆಯಲ್ಲಿ ಪಾಲ್ಗೊಂಡಿದ್ದರು ಎಂಬ ವಿವರ ಈ ಕೆಳಕಂಡಂತಿದೆ.

ರುಕ್ಮಿಣಿ ವಸಂತ್, ಶಾನ್ವಿ ಶ್ರೀವಾತ್ಸವ್, ಸಂಯುಕ್ತ ಹೊರನಾಡು, ಖುಷಿ ರವಿ, ಅಂಜಲಿ ಅನೀಶ್, ಅರ್ಚನಾ ಕೊಟ್ಟಿಗೆ, ಅಂಕಿತಾ ಅಮರ್, ಸಿರಿ ಪ್ರಹ್ಲಾದ್, ಅಶ್ವಿತಾ ಹೆಗಡೆ, ನಿಧಿ ಹೆಗಡೆ, ತೇಜು ಬೆಳವಾಡಿ, ಅಮೃತ ಐಯ್ಯಂಗಾರ್, ಶ್ರುತಿ ಹರಿಹರನ್, ಶ್ವೇತಾ ಡಿಜೋಜಾ, ಸಂಜನಾ ದಾಸ್, ನಿಮಿಕಾ ರತ್ನಾಕರ್, ಅಶ್ವಿನಿ ಅಂಬರೀಶ್, ಯಶ ಶಿವಕುಮಾರ್, ವೆನ್ಯಾ ರೈ, ಅನೂಷಾ ಕೃಷ್ಣ, ಮೇದಿನಿ ಕೆಳಮನೆ, ಕಾಜಲ್ ಕುಂದರ್, ರಜನಿ, ಐಶ್ವರ್ಯಾ ರಂಗರಾಜನ್, ವರ್ಷಾ ಕುರಿಯನ್, ಶುಭಾ ಪುಂಜಾ ಸೇರಿದಂತೆ ನಿಶ್ವಿಕಾ ನಾಯ್ಡು 'ಸಖಿ' ಲಿರಿಕಲ್ ಹಾಡನ್ನು ಬಿಡುಗಡೆಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net