

ರಾಮನಗರ: ಮರಳು ದಂಧೆ ಮಾಡುವವರು ಕಾಂಗ್ರೆಸ್ ಪಕ್ಷದವರು. ಎಂಪಿ ಮತ್ತು ಅವನ ಚೇಲಾಗಳು ಮರಳು ದಂಧೆ ಮಾಡ್ತಾ ಇದ್ದಾರೆ. ಈ ದಂಧೆ ಮಾಡುಕೊಂಡು ಅಮಾಯಕರ ಜೀವದ ಜೊತೆ ಚೆಲ್ಲಾಟ ಆಡ್ತಾ ಇದ್ದಾರೆ ಇದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಇತ್ತೀಚಿಗೆ ಅರ್ಕಾವತಿ ನದಿಯಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ರಾಮನಗರ ತಾಲೂಕಿನ ಕೂನಗಲ್ ಗ್ರಾಮದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಎಚ್ಡಿಕೆ, ಅರ್ಕಾವತಿ ನದಿಯಲ್ಲಿ ಮರಳು ದಂಧೆಕೋರರು 15 ರಿಂದ 20 ಅಡಿ ಗುಂಡಿ ತೋಡಿದ್ದಾರೆ. ಕಳೆದ ಕಾಂಗ್ರೆಸ್ ಸರ್ಕಾರದ 5 ವರ್ಷದ ಅವಧಿಯಲ್ಲಿ ಈ ದಂಧೆ ನಡೆದಿದೆ ಎಂದು ಕಿಡಿಕಾರಿದರು.
ರ