ಸ್ಯಾಮ್​ಸಂಗ್​​ನಿಂದ ಎರಡು ಸ್ಮಾರ್ಟ್​ಫೋನ್​ ಬಿಡುಗಡೆ: ಒಂದು ಫೋಲ್ಡಿಂಗ್, ಇನ್ನೊಂದು ಫ್ಲಿಪ್..

samsung flip
Published on

ದೆಹಲಿ: ಸ್ಯಾಮ್ ಸಂಗ್ ಕಂಪನಿಯು ಎರಡು ಅತ್ಯಾಧುನಿಕ ಸ್ಮಾರ್ಟ್ ಫೋನ್​​ಗಳನ್ನು ಬಿಡುಗಡೆ ಮಾಡಿದ್ದು, ಇವುಗಳನ್ನು ನೋಡಿದ ಟೆಕ್ ಪ್ರಿಯರು ಹುಬ್ಬೇರಿಸಿದ್ದಾರೆ. ಕಂಪನಿಯು Samsung Galaxy Z Flip 5, Galaxy Z Fold 5ನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಇವುಗಳ ಬೆಲೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ: ಪಾಕಿಸ್ತಾನ, ಚೀನಾ, ಭಾರತ ಆಯ್ತು.. ಈಗ ಶ್ರೀಲಂಕಾದಿಂದ ಬಂದು ಯುವಕನನ್ನು ವರಿಸಿದ ಯುವತಿ

ಶಕ್ತಿಯುತ ಕಾರ್ಯಕ್ಷಮತೆಯೊಂದಿಗೆ ಬಂದಿರುವ ಈ ಸ್ಮಾರ್ಟ್‌ಫೋನ್​ಗಳು ಹಲವಾರು ವಿಶೇಷತೆಗಳನ್ನು ಹೊಂದಿವೆ. ಈ ಮಡಿಚಬಹುದಾದ ಫೋನ್​​ಗಳು ಅಭೂತಪೂರ್ವ ವಿನ್ಯಾಸವನ್ನು ಹೊಂದಿದ್ದು, OneUI 5.1.1 ಎಂಬ ವಿಶೇಷ Samsung ಇಂಟರ್‌ಫೇಸ್‌ನೊಂದಿಗೆ ಇತ್ತೀಚಿನ Android 13 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿವೆ. ಈ ಫೋನ್‌ನ ಫ್ರೇಮ್ ಬಲವಾದ ಆರ್ಮರ್ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ.

ಇದು ಎರಡು ಪರದೆಗಳನ್ನು ಹೊಂದಿರುವ ಈ ಫೋನ್​​ಗಳ ಫೋನ್‌ನ ಒಳಗಿನ ಮುಖ್ಯ ಪರದೆಯು 6.7 ಇಂಚುಗಳಷ್ಟು ಗಾತ್ರವನ್ನು ಹೊಂದಿದ್ದು, ಹೈ-ಡೆಫಿನಿಷನ್‌ನ ಜತೆಗೆ 120Hz ಅಡಾಪ್ಟಿವ್ ರಿಫ್ರೆಶ್ ದರ ಹೊಂದಿವೆ. ಹೊರಭಾಗದಲ್ಲಿ, 3.4 ಇಂಚುಗಳಷ್ಟು ಗಾತ್ರದ ಮತ್ತೊಂದು ಸಣ್ಣ ಪರದೆಯಿದೆ. ಎರಡೂ ಪರದೆಗಳನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಎಂಬ ಗಟ್ಟಿಯಾದ ಗಾಜಿನಿಂದ ರಕ್ಷಿಸಲಾಗಿದೆ.

Galaxy Z Flip 5 ಪ್ರಬಲವಾದ ಕಸ್ಟಮ್ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ನಿಂದ ಬೆಂಬಲಿತವಾಗಿದ್ದು, ಮೊಬೈಲ್ ಪ್ಲಾಟ್‌ಫಾರ್ಮ್‌ನಿಂದ ನಡೆಸಲ್ಪಡುತ್ತದೆ. ಫೋನ್ ಅತ್ಯುತ್ತಮ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದ್ದು, ಒಂದು ಕ್ಯಾಮೆರಾ ವಿಶಾಲವಾದ ನೋಟವನ್ನು ಸೆರೆಹಿಡಿಯುತ್ತದೆ, ಆದರೆ ಇನ್ನೊಂದು ಸಾಮಾನ್ಯ ರೀತಿಯ ಪೋಟೋಗಳಿಗೆ ಉತ್ತಮವಾಗಿದೆ. ಮುಂಭಾಗದಲ್ಲಿ, ಸೆಲ್ಫಿ ತೆಗೆದುಕೊಳ್ಳಲು ಮತ್ತು ವೀಡಿಯೊ ಕರೆ ಮಾಡಲು ಕ್ಯಾಮೆರಾ ವ್ಯವಸ್ಥೆ ಇದೆ.

ಈ ಸ್ಮಾರ್ಟ್​ ಫೋನ್​​ 256GB ಮತ್ತು 512GB ಎಂಬ ಮಾದರಿಗಳಲ್ಲಿ ಲಭ್ಯವಿರುವುದರ ಜತೆಗೆ ಫೋನ್ ಚಲನೆ, ದೃಷ್ಟಿಕೋನ ಮತ್ತು ಹೊಳಪನ್ನು ಪತ್ತೆಹಚ್ಚುವಂತಹ ಸೆನ್ಸಾರ್​​ಗಳನ್ನು ಹೊಂದಿದೆ. ಜತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಕೂಡ ಇದೆ. Galaxy Z Flip 5 ಪ್ರಬಲವಾದ 3,700mAh ಬ್ಯಾಟರಿಯನ್ನು ಹೊಂದಿದ್ದು, ಇದು 25W ವೇಗದ ಚಾರ್ಜಿಂಗ್​​ನ್ನು ಬೆಂಬಲಿಸುತ್ತದೆ. ಫೋನ್ ವೇಗದ ವೈರ್‌ಲೆಸ್ ಚಾರ್ಜಿಂಗ್ 2.0 ಮತ್ತು ವೈರ್‌ಲೆಸ್ ಪವರ್‌ಶೇರ್​​​ನ್ನು ಸಹ ಬೆಂಬಲಿಸುತ್ತದೆ.

ಇದು 2208 x 1768 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ದೊಡ್ಡ 7.6-ಇಂಚಿನ ಮುಖ್ಯ ಪರದೆಯನ್ನು ಹೊಂದಿದೆ. USA ನಲ್ಲಿ Galaxy Z Fold 5 ಬೆಲೆ 1,799 ಹಾಗೂ Galaxy Z Flip 5 ಬೆಲೆ 999ರಿಂದ ಪ್ರಾರಂಭವಾಗುತ್ತಿದ್ದು ಆವೃತ್ತಿಗಳ ಮೇಲೆ ದರವು ಭಿನ್ನವಾಗಿರುತ್ತದೆ ಎಂದು ಹೇಳಲಾಗಿದೆ. ಇವುಗಳ ಬೆಲೆಯನ್ನು ಸ್ಯಾಮ್‌ಸಂಗ್ ಇನ್ನೂ ಭಾರತದಲ್ಲಿ ಘೋಷಿಸಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್ ಸೈಟ್ ಪರಿಶೀಲಿಸುವುದು ಉತ್ತಮ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net