ಕಾರಂಜಾ ಜಲಾಶಯದ ಕಾಲುವೆಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ | Suicide

Untitled design - 2025-09-09T204637.977
Published on

ಭಾಲ್ಕಿ: ತಾಲೂಕಿನ ಮರೂರ ಹತ್ತಿರ ಹಾದುಹೋಗುವ ಕಾರಂಜಾ ಜಲಾಶಯದ ಕಾಲುವೆಗೆ ಹಾರಿ ಒಂದು ಕುಟುಂಬದ ನಾಲ್ವರು ಆತ್ಮಹತ್ಯೆ(Suicide) ಮಾಡಿಕೊಂಡಿದ್ದು, ಇಬ್ಬರು ಬದುಕುಳಿದ ಆಗಿದ ಘಟನೆ ಮಂಗಳವಾರ ನಡೆದಿದೆ.

ಬೀದರ್​ನ ಮೈಲೂರು ಬಡಾವಣೆಯ ಶಿವಮೂರ್ತಿ ಮಾರುತಿ (45), ಮಕ್ಕಳಾದ ಶ್ರೀಶಾಂತ್ ಶಿವಮೂರ್ತಿ (9), ರಿತಿಕ್ ಶಿವಮೂರ್ತಿ (7) ಹಾಗೂ ಏಳು ತಿಂಗಳ ರಾಕೇಶ್ ಶಿವಮೂರ್ತಿ ಸಾವಿಗೀಡಾಗಿದ್ದಾರೆ.

‘ಶಿವಮೂರ್ತಿ ಅವರ ಪತ್ನಿ ರಮಾಬಾಯಿ, ಪುತ್ರ ಶ್ರೀಕಾಂತ್ ಬಚಾವ್ ಆಗಿದ್ದಾರೆ. ಕೌಟುಂಬಿಕ ಕಲಹ ಹಾಗೂ ಸಹೋದರ ಆಸ್ತಿ ವ್ಯವಹಾರದ ಜಗಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಸಚಿವ ಈಶ್ವರ್​ ಖಂಡ್ರೆ ಭೇಟಿ

ಘಟನಾ ಸ್ಥಳಕ್ಕೆ ಸಚಿವ ಈಶ್ವರ್​ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಆತ್ಮಹತ್ಯೆಗೆ ಕಾರಣವಾದ ಹಿನ್ನೆಲೆ ಹಾಗೂ ಪ್ರಚೋದನೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು. ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net