ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ; ಸೌತ್​ ಬ್ಯೂಟಿ ಸಮಂತಾ ಹೀಗೆಳಿದ್ದೇಕೆ | Samantha Ruth Prabhu

Untitled design - 2024-11-05T174420.305
Published on

ಮುಂಬೈ: ನಟಿ ಸಮಂತಾ ರುತ್​ ಪ್ರಭು(Samantha Ruth Prabhu) ಕುರಿತು ವಿಶೇಷ ಪರಿಚಯದ ಅಗತ್ಯವಿಲ್ಲ. ದಕ್ಷಿಣ ಸಿನಿಮಾರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ ಉತ್ತರದಲ್ಲಿಯೂ ಅದ್ಭುತ ಅಭಿನಯದ ಮೂಲಕ ತಮ್ಮದೆ ಅಭಿಮಾನಿ ಬಳಗವನ್ನು ಹೊಂದಿರುವ ನಟಿ. ಸದ್ಯ ಸಮಂತಾ ರುತ್​ ಪ್ರಭು ವೆಬ್ ಸರಣಿ ಸಿಟಾಡೆಲ್ ಹನಿ ಬನ್ನಿ ಪ್ರಚಾರದಲ್ಲಿ ಬಿಸಿ ಇದ್ದಾರೆ.

ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜತೆ ಸಂವಾದ ಕೂಡ ನಡೆಸುತ್ತಿರುತ್ತಾರೆ. ಈ ಸಮಯದಲ್ಲಿ ಸಮಂತಾ ತಮ್ಮ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಸಮಂತಾ ಉತ್ತರಿಸಿದರು. ಅದರಲ್ಲಿ ಅಭಿಮಾನಿಯೊಬ್ಬರು ‘ಸಿಟಾಡೆಲ್‌ಗಾಗಿ ನೀವು ಎಷ್ಟು ಶ್ರಮಿಸಿದ್ದೀರಿ ಮತ್ತು ನಿಮ್ಮ ಪಾತ್ರ ಹೇಗಿರುತ್ತದೆ ಎಂದು ನಮಗೆ ಹೇಳಬಹುದೇ? ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ನಟಿ ಸಮಂತಾ, ನಾನು ಪ್ರತಿ ಪಾತ್ರದಲ್ಲಿ ನನಗೆ ಸವಾಲು ಹಾಕುತ್ತೇನೆ ಎಂದು ಭರವಸೆ ನೀಡಿದ್ದೆ. ಪ್ರತಿ ಸವಾಲು ಹಿಂದಿನದಕ್ಕಿಂತ ಹೆಚ್ಚು ಕಷ್ಟಕರವಾಗಿದೆ. ತನ್ನ ಪಾತ್ರಕ್ಕೆ ಅತ್ಯುತ್ತಮವಾದದ್ದನ್ನು ನೀಡಲು ನಿರ್ಧರಿಸಿದ್ದೇಗೆ ಎಂಬುದನ್ನು ವಿವರಿಸಿದ್ದಾರೆ.

ನಾನು ಈ ಹಿಂದೆ ಕೆಲವು ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ಥಿಂಗ್ಸ್ ನಿಜವಾಗಿಯೂ ಕೆಲಸ ಮಾಡಲಿಲ್ಲ, ನಾನು ವೈಫಲ್ಯವನ್ನು ಒಪ್ಪಿಕೊಳ್ಳುತ್ತೇನೆ. ನನ್ನ ಪಾತ್ರಗಳು ನಿರೀಕ್ಷೆಗಳನ್ನು ಪೂರೈಸದ ಸಂದರ್ಭಗಳಿವೆ. ಆದರೆ ಅದನ್ನು ಕಲಿಕೆಯ ಅನುಭವವಾಗಿ ವೀಕ್ಷಿಸಿದ್ದಾಗಿ ತಿಳಿಸಿದ್ದಾರೆ. ನಾನು ಹೆದರುವುದಿಲ್ಲ, ಕಳೆದ ಕೆಲವು ಚಿತ್ರಗಳಲ್ಲಿ ನಾನು ನನ್ನ ಕೈಲಾದಷ್ಟು ಮಾಡಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ ಎಂದರು.

ಇನ್ನು ಇದೇ ಸಮಯದಲ್ಲಿ ಮತ್ತೊಬ್ಬರ ಸಮಂತಾಗೆ ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಮಂತಾ, ಮತ್ತೊಂದು ತೂಕದ ಕಾಮೆಂಟ್. ನಾನು ನನ್ನ ತೂಕವನ್ನು ನೋಡಿದ್ದೇನೆ. ನೀವು ತಿಳಿಯಲೇಬೇಕು, ನನ್ನ ಸ್ಥಿತಿಗೆ (ಮಯೋಸಿಟಿಸ್) ಅಗತ್ಯವಿರುವ ವೈದ್ಯಕೀಯ ಸ್ಥಿತಿಯ ಕಾರಣ ಆಹಾರಕ್ರಮವನ್ನು ಅನುಸರಿಸುತ್ತಿದ್ದೇನೆ. ಅದು ನನ್ನನ್ನು ತೂಕವನ್ನು ಹೆಚ್ಚಿಸದಂತೆ ತಡೆಯುತ್ತದೆ, ನಿರ್ದಿಷ್ಟ ತೂಕದ ಬ್ರಾಕೆಟ್‌ನಲ್ಲಿ ಇರಿಸುತ್ತದೆ. ಕಾಣಿಸಿಕೊಳ್ಳುವ ಆಧಾರದ ಮೇಲೆ ಜಡ್ಜ್​​ ಮಾಡುವುದನ್ನು ನಿಲ್ಲಿಸಿ, ಅದು ಹಾಗೆಯೇ ಇರಲಿ... ಬದುಕಿ ಮತ್ತು ಬದುಕಲು ಬಿಡಿ.. ಗಯ್ಸ್​​​​.. ಇದು 2024 ಎಂದು ಹೇಳಿದರು.

ಸಿಟಾಡೆಲ್ ಹನಿ ಬನ್ನಿ ಸರಣಿಯು ನವೆಂಬರ್​ 7ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಸರಣಿಯಲ್ಲಿ ವರುಣ್ ಧವನ್ ಅವರ ಜತೆ ಮುಖ್ಯ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net