ಸಲಾರ್​ ಚಿತ್ರದ ಬಗ್ಗೆ ಹೊರಬಿತ್ತು ಹೊಸ ಅಪ್ಡೇಟ್​​​!

Untitled design - 2023-08-14T102901.490
Published on

ಆಂಧ್ರಪ್ರದೇಶ: ಪ್ಯಾನ್​ ಇಂಡಿಯನ್​ ಸ್ಟಾರ್​, ಟಾಲಿವುಡ್​ನ ಡಾರ್ಲಿಂಗ್​ ಪ್ರಭಾಸ್​ ಮತ್ತು ಕೆಜಿಎಫ್​​ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್​ನಲ್ಲಿ ತೆರೆಯ ಮೇಲೆ ಹಾಜರಾಗಲು ಸಜ್ಜಾಗಿರುವ ಬಹುನಿರೀಕ್ಷಿತ 'ಸಲಾರ್ 1'​ ಚಿತ್ರದ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಲಭಿಸಿದೆ.

ವಿಜಯ್​ ಕಿರಂಗದೂರು ನಿರ್ಮಾಣದ 'ಸಲಾರ್​ 1' ಚಿತ್ರದ ಟೀಸರ್​ ಕಳೆದು ತಿಂಗಳು ಬಿಡುಗಡೆಗೊಂಡು ದಾಖಲೆಯನ್ನು ನಿರ್ಮಿಸಿತು. ತದನಂತರ ಚಿತ್ರದ ಯಾವುದೇ ಮಾಹಿತಿ ಕೂಡ ಹೊರಬಂದಿಲ್ಲ. ಈ ಬಗ್ಗೆ ಫ್ಯಾನ್ಸ್​ ಬೇಸರ ವ್ಯಕ್ತಪಡಿಸಿದ್ದು, ಸಲಾರ್​ ಟ್ರೇಲರ್ ರಿಲೀಸ್​ ಯಾವಾಗ? ಎಂಬ ಹಲವು ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿದ್ದಾರೆ. ಇದಕ್ಕೆ ಇದೀಗ ಹೊಸದೊಂದು ಅಪ್ಡೇಟ್​ ಲಭಿಸಿದೆ.

ಟೀಸರ್​ ನಂತರ ಇದೀಗ ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸುವ ಬಗ್ಗೆ ಆಗಸ್ಟ್​ 15, ಸ್ವಾತಂತ್ರ್ಯ ದಿನಾಚರಣೆಯಂದು ಚಿತ್ರತಂಡ ಮಾಹಿತಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಚಿತ್ರದ ತಯಾರಕರು ಸಾಂಗ್​ ಬಗ್ಗೆ ಘೋಷಣೆ ಮಾಡಿದ ನಂತರ ಆಗಸ್ಟ್ 20, 2023 ರಂದು ಯೂಟ್ಯೂಬ್​ನಲ್ಲಿ ರಿಲೀಸ್​ ಆಗಲಿದೆ. ಈ ಬಗ್ಗೆ ಚಿತ್ರತಂಡದಿಂದ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಚಿತ್ರವು ಸೆಪ್ಟೆಂಬರ್ 28, 2023 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗಿದೆ.

ಸಲಾರ್ ಚಿತ್ರದಲ್ಲಿ ಪ್ರಭಾಸ್​-ಶ್ರುತಿ ಹಾಸನ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್, ಈಶ್ವರಿ ರಾವ್, ಮೀನಾಕ್ಷಿ ಚೌಧರಿ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್​ನಡಿ ಚಿತ್ರ ತಯಾರಾಗಿದ್ದು, ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net