

ಮಂಡ್ಯ: ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಘದ ಅಧ್ಯಕ್ಷ(ಎಂಡಿಸಿಡಿಒ) ಬಿ.ಲೋಕೇಶ್ ಪುನರಾಯ್ಕೆಯಾದರು.
ನಗರದ ಖಾಸಗಿ ಹೋಟೆಲ್ ಆಯೋಜಿಸಿದ್ದ ನೂತನ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅದರಂತೆ ಉಪಾಧ್ಯಕ್ಷರಾಗಿ ರಾಜಣ್ಣ ಹಾಗೂ ಸುರೇಶ್ ಕಾರಂತ್, ಕಾರ್ಯದರ್ಶಿ ಕೆ.ಎಲ್.ರಾಜಶೇಖರ್, ಸಹ ಕಾರ್ಯದರ್ಶಿಯಾಗಿ ಕೆ.ಮಹೇಶ್ ಹಾಗೂ ಎಂ.ಡಿ.ಸುರೇಶ್, ಸಂಘಟನಾ ಕಾರ್ಯದರ್ಶಿ ಜಿ.ಎನ್.ಕೃಷ್ಣೇಗೌಡ, ಖಜಾಂಚಿಯಾಗಿ ಮುನಿ ಸಿದ್ದೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಂತೆಯೇ ಸಹ ನಿರ್ದೇಶಕರಾಗಿ ಎಂ.ಪ್ರದೀಪ್ಕುಮಾರ್, ಎಚ್.ಎಸ್.ಗಿರೀಶ್, ಮುದಾಸಿರ್ಖಾನ್, ಧರಣೇಶ್, ಗೌರವ ಸಲಹೆಗಾರರಾಗಿ ಕೆ.ಪ್ರಭಾಕರ್, ಮಾಧ್ಯಮ ಕಾರ್ಯದರ್ಶಿಯಾಗಿ ಮಂಜುನಾಥ್ ಕೌಡ್ಲೆ ಆಯ್ಕೆಯಾದರು.
ಬಿ.ಲೋಕೇಶ್ ಮಾತನಾಡಿ, ಕೇವಲ ಅಧಿಕಾರ ನನ್ನ ಉದ್ದೇಶ ಅಲ್ಲ. ಸಂಸ್ಥೆ ಎಂದೆಂದಿಗೂ ಸುಭದ್ರ ಹಾಗೂ ಮಾದರಿಯಾಗಿರಬೇಕು. ವೃತ್ತಿ ಬಾಂದವರಿಗೆ ಯಾವ ಸಮಸ್ಯೆಗಳು ಉಂಟಾಗಬಾರದು ಎಂದರು.