ನಾನು ಅಲ್ಲು ಅರ್ಜುನ್ ಅವರ ದೊಡ್ಡ ಅಭಿಮಾನಿ: ಸಾಕ್ಷಿ ಸಿಂಗ್​ ಧೋನಿ

Untitled design - 2023-07-25T132000.056
Published on

ತಮಿಳುನಾಡು: ಧೋನಿ ಎಂಟರ್​​ಟೈನ್​​ಮೆಂಟ್​ ನಿರ್ಮಾಣ ಸಂಸ್ಥೆಯಡಿ ಹೊರಹೊಮ್ಮುತ್ತಿರುವ ಮೊದಲ ಚಿತ್ರ 'ಲೆಟ್ಸ್ ಗೆಟ್​ ಮ್ಯಾರೀಡ್'​​ ಇದೀಗ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಮಹೇಂದ್ರ ಸಿಂಗ್​ ಧೋನಿ ಅವರ ಚಿತ್ರ ಇದೀಗ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಇತ್ತೀಚಿಗೆ ನಡೆದ ಪ್ರೆಸ್​​ ಮೀಟ್​​ನಲ್ಲಿ ಭಾಗಿಯಾಗಿದ್ದ ಕ್ಯಾಪ್ಟನ್​ ಕೂಲ್​ ಧೋನಿ ಮತ್ತು ಸಾಕ್ಷಿ ಸಿಂಗ್​, ಕೆಲ ಸಮಯ ಮಾಧ್ಯಮದವರೊಟ್ಟಿಗೆ ಸಂವಾದ ನಡೆಸಿದರು. ಈ ವೇಳೆ ಸುದ್ದಿಗಾರರ ಒಂದು ಪ್ರಶ್ನೆಗೆ ಉತ್ತರಿಸಿದ ಎಂಎಸ್​​ಡಿ ಪತ್ನಿ, "ನಾನು ಅಲ್ಲು ಅರ್ಜುನ್ ಅವರ ದೊಡ್ಡ ಅಭಿಮಾನಿ. ಯೂಟ್ಯೂಬ್‌ನಲ್ಲಿ ಅವರ ಎಲ್ಲಾ ಚಲನಚಿತ್ರಗಳನ್ನು ವೀಕ್ಷಿಸಿದ್ದೇನೆ" ಎಂದು ಸಂತಸದಿಂದ ಹೇಳಿದರು. ಸಾಕ್ಷಿ ಅವರ ಈ ಮಾತನ್ನು ಕೇಳಿದ ಅಲ್ಲು ಅರ್ಜುನ್​ ಅಭಿಮಾನಿ ಬಳಗ ಇದೀಗ ಭಾರೀ ಖುಷಿಯನ್ನು ವ್ಯಕ್ತಪಡಿಸಿದೆ.

ಎಂ.ಎಸ್.​​ ಧೋನಿ ಅವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಲೆಟ್ಸ್ ಗೆಟ್​ ಮ್ಯಾರೀಡ್'​​ ಚಿತ್ರವನ್ನು ರಮೇಶ್ ತಮಿಳಮಣಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ನದಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಈಗಾಗಲೇ ನಿಗದಿಪಡಿಸಿರುವಂತೆ ಸಿನಿಮಾ ಜುಲೈ 28, 2023 ರಂದು ಬಿಡುಗಡೆಯಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net