ಫ್ರಿಡ್ಜ್ ಗತಿ ನಿಮಗೂ ಬರಬಹುದು! ಸ್ವರಾ ಭಾಸ್ಕರ್ ವಿರುದ್ಧ ಕಿಡಿಕಾರಿದ ಸಾಧ್ವಿ ಪ್ರಾಚಿ

Sadhvi Prachi and Swara Bhasker Photo
Published on

ನವದೆಹಲಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕಳೆದ ಕೆಲ ದಿನಗಳ ಹಿಂದೆ ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಜತೆಗೆ ವಿವಾಹವಾಗಿದ್ದರು. ಇದು ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ವೇದಿಕೆಯೊಂದರಲ್ಲಿ ವಿಶ್ವ ಹಿಂದು ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಮಾತನಾಡುತ್ತಾ, ಸ್ವರಾ ಭಾಸ್ಕರ್​ಗೆ ಟಾಂಗ್ ಕೊಟ್ಟಿದ್ದಾರೆ. ಯಾವುದಕ್ಕೂ ಒಮ್ಮೆ ಮನೆಯ ಫ್ರಿಡ್ಜ್​ನ್ನು ನೋಡಿ ಬಿಡಿ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆಕೆಯ ಪ್ರಿಯಕರ ಆಫ್ತಾಬ್ ಪೂನಾವಾಲಾ ಶ್ರದ್ಧಾಳ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಮನೆಯ ಫ್ರಿಡ್ಜ್​ನಲ್ಲಿಟ್ಟಿದ್ದ. ಸ್ವರಾ ಭಾಸ್ಕರ್, ಫಹಾದ್​ನನ್ನು ಮದುವೆಯಾಗುವ ಮೊದಲು ಈ ಪ್ರಕರಣವನ್ನು ನೆನಪಿಸಿಕೊಳ್ಳಬೇಕಾಗಿತ್ತು. ಇದು ಆಕೆಯ ವೈಯಕ್ತಿಕ ನಿರ್ಧಾರ. ಆದರೆ ಶ್ರದ್ಧಾಗೆ ಆದಂತೆ ಸ್ವರಾಗೂ ಇದೇ ಗತಿ ಆಗಬಾರದು ಎಂದೇನಿಲ್ಲ ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ. ಸ್ವರಾ ಭಾಸ್ಕರ್ ಹಿಂದು ಹುಡುಗಿಯಾಗಿದ್ದು ಮುಸ್ಲಿಂನನ್ನು ಮದುವೆ ಆಗಿದ್ದರಿಂದ ಸಹಜವಾಗಿಯೇ ಚರ್ಚೆಗೆ ಕಾರಣವಾಗಿತ್ತು.

ಸಾಧ್ವಿ ಪ್ರಾಚಿ ಮಾತನಾಡುತ್ತಾ,ಸ್ವರಾ ಭಾಸ್ಕರ್ ಹಿಂದುತ್ವ ವಿರೋಧಿ ಎಂಬುದು ಈ ಮೊದಲೇ ನನ್ನ ಗಮನಕ್ಕೆ ಬಂದಿತ್ತು. ಇದೀಗ ಇಸ್ಲಾಂ ಧರ್ಮಕ್ಕೆ ಸೇರಿದಾತನೊಂದಿಗೆ ಮದುವೆ ಆಗುವ ಮೂಲಕ ನನ್ನ ಅನುಮಾನ ನಿಜವಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net