More

    ದೇವಾಲಯಕ್ಕೆ ಮಾಂಸದ ಹಾರ ತಂದುಕೊಟ್ಟ ಕಿಡಿಗೇಡಿಗಳು!

    ದೇವನಹಳ್ಳಿ: ಇಬ್ಬರು ಖದೀಮರು ಇತಿಹಾಸ ಪ್ರಸಿದ್ಧ ಕನಸವಾಡಿಯ ಶನಿಮಹಾತ್ಮ ದೇವಾಲಯಕ್ಕೆ ಮಾಂಸದ ಹಾರ ತಂದುಕೊಟ್ಟು ಮೂರ್ತಿಯನ್ನು ವಿರೂಪಗೊಳಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಮಾಂಸದ ಹಾರ ಗರ್ಭಗುಡಿಯನ್ನು ಸೇರುವ ಮುನ್ನವೇ ಅಸಲಿಯತ್ತು ಗೊತ್ತಾಗಿದೆ.

    ದೇವಾಲಯಕ್ಕೆ ಬಂದ ಯುವಕರಿಬ್ಬರು ಹೂವಿನ ಹಾರದ ಮಧ್ಯೆ ಬರುವ ಪ್ಲಾಸ್ಟಿಕ್ ಪೇಪರ್ ಒಳಭಾಗದಲ್ಲಿ ಮಾಂಸವಿಟ್ಟಿದ್ದಾರೆ. ಕಿಡಿಗೇಡಿಗಳಿಬ್ಬರು ಭಕ್ತರ ಸೋಗಿನಲ್ಲಿ ಬಂದು ದೇವಾಲಯದ ಸಿಬ್ಬಂದಿಗಳಿಗೆ ತಂದಿರುವಂತಹ ಹಾರಗಳನ್ನು ನೀಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
    ಇದನ್ನೂ ಓದಿ: VIDEO| ಠಾಣೆಯಲ್ಲೇ ಮಹಿಳಾ ಸಿಬ್ಬಂದಿಯ ಸೀಮಂತ ಕಾರ್ಯ ನೆರವೇರಿಸಿದ ನಾಗಮಂಗಲ ಟೌನ್ ಪೊಲೀಸರು

    ದೇವಸ್ಥಾನದ ಸಿಬ್ಬಂದಿ ಕಿಡಿಗೇಡಿಗಳು ತಂದಿದ್ದ ಹಾರವನ್ನು ಗರ್ಭಗುಡಿಯ ಒಳಗಡೆ ತೆಗೆದುಕೊಂಡು ಹೋಗುವ ವೇಳೆ ಹಾರದಲ್ಲಿ ಬಚ್ಚಿಟ್ಟಿದ್ದ ಮಾಂಸದ ತುಂಡು ಕೆಳಕ್ಕೆ ಬಿದ್ದಿದೆ. ಒಂದು ಕ್ಷಣ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ಹಾರಗಳನ್ನು ಹೊರಗೆಸೆದು ದೇವಸ್ಥಾನವನ್ನು ಶುಚಿಗೊಳಿಸಿದ್ದಾರೆ.

    ದೇವಾಲಯಕ್ಕೆ ಮಾಂಸದ ಹಾರ ತಂದುಕೊಟ್ಟ ಕಿಡಿಗೇಡಿಗಳು!

    ಇದೀಗ ಅಪರಿಚಿತ ಯುವಕರಿಬ್ಬರ ಕೃತ್ಯಕ್ಕ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಸದ್ಯ ದೇವಸ್ಥಾನದ ಆಡಳಿತ ಮಂಡಳಿ ದೊಡ್ಡಬೆಳವಂಗಲ‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೇವರ ಮಹಿಮೆಯಿಂದ ಗರ್ಭಗುಡಿ ಪ್ರವೇಶಕ್ಕೂ ಮುನ್ನವೇ ಹಾರದ ಅಸಲಿಯತ್ತು ಬೆಳಕಿಗೆ ಬಂದಿದೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೇವಸ್ಥಾನದ ಆಡಳಿತ ಮಂಡಳಿ ಇನ್ನು ಭಕ್ತರು ಪೇಪರ್ ಒಳಗೊಂಡ ಹಾರಗಳನ್ನು ತರಬಾರದು ಎಂದು ಸುತ್ತೋಲೆ ಹೊರಡಿಸಿದೆ. ಸದ್ಯ ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts