More

    ಭೀಮಾತೀರದಲ್ಲಿ ಹಾಡಹಗಲೇ ಶಿಕ್ಷಕಿಯ ಭೀಕರ ಹತ್ಯೆ; ಬೆಚ್ಚಿ ಬಿದ್ದ ಜನತೆ

    ವಿಜಯಪುರ: ಭೀಮಾತೀರದಲ್ಲಿ ಹಾಡಹಗಲೇ ಶಾಲಾ ಶಿಕ್ಷಕಿಯ ಹತ್ಯೆ ನಡೆದಿದ್ದು, ಘಟನೆಯಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ದಿಲಶಾದ್ ಹವಾಲ್ದಾರ್(31) ಹತ್ಯೆಗೀಡಾದ ಶಿಕ್ಷಕಿ.

    ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಅಂಜುಮನ್ ಕಾಲೇಜು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ಬಂದ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದರಿಂದ ಸ್ಥಳದಲ್ಲೆ ಶಿಕ್ಷಕಿ ದಿಲಶಾದ್ ಹವಾಲ್ದಾರ್ ಮೃತಪಟ್ಟಿದ್ದಾರೆ. ದುಷ್ಕರ್ಮಿಗಳ ದಾಳಿಯ ವೇಳೆ ಶಿಕ್ಷಕಿಯ ಪುತ್ರನ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಪರಾರಿಯಾಗಿದ್ದಾರೆ.

    ಇದನ್ನೂ ಓದಿ:  ಧರ್ಮಾಧಾರಿತ ರಾಜಕೀಯ ಬಿಟ್ಟು ಬಿಡಿ… ಅಭಿವೃದ್ಧಿ ಕಾರ್ಯಗಳ ಮೇಲೆ ಚರ್ಚೆ ಮಾಡೋಣ ಬನ್ನಿ!

    ಘಟನಾ ಸ್ಥಳಕ್ಕೆ ಇಂಡಿ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಹಂತಕರಿಗೆ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts