More

    ಮೈಸೂರಿನಲ್ಲಿ ಕೋರ್ಟ್​ಗೆ ಹಾಜರಾದ ರಾಖಿ ಸಾವಂತ್; ಆದಿಲ್​ ಖಾನ್​​ನನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು

    ಮೈಸೂರು: ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟಿ ರಾಖಿ ಸಾವಂತ್ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಪತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಅವರನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ ಎಂದು ಹೇಳಿದ್ದಾಳೆ.

    ನನಗೆ ನ್ಯಾಯ ಬೇಕು. ಆದಿಲ್‌ ಖಾನ್​ನಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗಬಾರದು. ಹೀಗಾಗಿ ನ್ಯಾಯಾಧೀಶರ ಮುಂದೆ ಬಂದು ಹಾಜರಾಗಿದ್ದೇನೆ. ಆದಿಲ್‌ ಖಾನ್‌ ನನ್ನೊಂದಿಗೆ ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿ ನನ್ನ ಬಳಿ ಇದೆ. ಇಂದು ಬೆಳಗ್ಗೆ ಆದಿಲ್ ಖಾನ್ ತಂದೆಯೊಂದಿಗೆ ಮಾತನಾಡಿದ್ದೇನೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾಳೆ.

    ಇದನ್ನೂ ಓದಿ: ಬಾಯ್​​ಫ್ರೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ 19ರ ಯುವತಿ; ಇದಕ್ಕಾಗಿ ಮಾಡಿದ್ದು ಮಾತ್ರ ಹೇಯ ಕೃತ್ಯ!

    ಹಿಂದು ಎಂಬ ಕಾರಣಕ್ಕೆ ಆದಿಲ್ ಖಾನ್ ನನ್ನನ್ನು ಸ್ವೀಕಾರ ಮಾಡುತ್ತಿಲ್ಲ. ಹೀಗಾದರೆ ನಾನು ಏನು ಮಾಡಲಿ? ಆದಿಲ್ ನನ್ನಿಂದ 1.65 ಕೋಟಿ ರೂ. ಹಣ ಪಡೆದಿದ್ದಾನೆ‌. ಈವರೆಗೆ ಒಂದೇ ಒಂದು ರೂಪಾಯಿಯನ್ನೂ ಆತ ಹಿಂತಿರುಗಿಸಿಲ್ಲ. ಅಂದು ಮೈಸೂರಿನ ಜನ ಸರಿ ಇಲ್ಲ. ಹೀಗಾಗಿ ಮುಂಬೈಗೆ ಬರುತ್ತೇನೆ ಎಂದು ನನ್ನಲ್ಲಿ ಹೇಳಿದ್ದ. ಆ ನಂತರ ಮುಂಬೈನಲ್ಲಿ ನನ್ನ ಮೇಲೆ ಸಾಕಷ್ಟು ಬಾರಿ ಹಲ್ಲೆ ಮಾಡಿದ್ದಾನೆ. ಮೈಸೂರಿನ ನ್ಯಾಯಾಲಯದ ಮೇಲೆ ವಿಶ್ವಾಸವಿದ್ದ ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳುತ್ತಾ, ರಾಖಿ ಸಾವಂತ್ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.

    ಪತ್ನಿ ರಾಖಿ ಸಾವಂತ್‌ಗೆ ವರದಕ್ಷಿಣಿ ಕಿರುಕುಳ ನೀಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದ ಆದಿಲ್‌ ಖಾನ್ ಮೇಲೆ, ಇರಾನ್ ದೇಶದಿಂದ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಿದ್ದ ವಿದ್ಯಾ ರ್ಥಿನಿ ಮೇಲೆ ಅತ್ಯಾಚಾರ, ಬೆದರಿಕೆ, ವಂಚನೆ ಮಾಡಿದ ಆರೋಪದಡಿ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆದಿಲ್ ಖಾನ್​ನನ್ನು ವಿವಿ ಪುರಂ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts