

ತೋಳದ ಮಾತನ್ನು ನಂಬಿದ ಸಾಧು ಮಹಾತ್ಮ ಚೀಲದ ಬಾಯಿ ತೆಗೆದ. ಕೃತಘ್ನಗೇಡಿ ತೋಳವು ಆ ಕ್ಷಣದಲ್ಲಿ ಆತನನ್ನೇ ಮುರಿದು ತಿನ್ನುವ ಪ್ರಯತ್ನಕ್ಕೆ ಕೈಹಾಕಿತು. ಸಾಧು ಹೇಳಿದ: ‘ನಿಲ್ಲು! ನೀನು ಮಾತು ಕೊಟ್ಟಿದ್ದೀಯಲ್ಲವೇ? ಈ ಗಿಡವನ್ನಾದರೂ ಕೇಳು, ಸಾಕ್ಷಿ ಹೇಳಲಿ’ ಎಂದ. ಗಿಡವು ಹೇಳಿತು-‘ಅಪ್ಪಾ! ಏನು ಹೇಳಲಿ? ನನ್ನ ಹಣ್ಣು ತಿಂದು ನನಗೇ ಕಲ್ಲು ಒಗೆದು ಹೋಗುತ್ತಾರೆೆ ಜನರು. ಅವರೆಲ್ಲ ಕೃತಘ್ನಗೇಡಿಗಳೇ ಆಗಿದ್ದಾರೆ’ ಎಂದಿತು. ಅದೇ ಹೊತ್ತಿಗೆ ಆ ಕಡೆಯಿಂದ ಒಂದು ಎತ್ತು ಬಂದಿತು. ‘ನೀನಾದರೂ ಹೇಳು, ಉಪಕಾರ ಮಾಡಿದವರಿಗೆ ಅಪಕಾರ ಮಾಡುವುದು ಯೋಗ್ಯವೇ?’ ಎಂದು ಸಾಧು ಪ್ರಶ್ನಿಸಿದ.
ಆಗ ಆ ಎತ್ತು ‘ಸಾಧು ಮಹಾತ್ಮನೇ, ಏನು ಹೇಳಲಿ ನಾನು? ನನ್ನನ್ನು ಮುಪ್ಪಾಗುವ ತನಕ ದುಡಿಸಿಕೊಂಡು ಈ ಮುಪ್ಪಾವಸ್ಥೆಯಲ್ಲಿ ಹೊರಹಾಕಿದ್ದಾರೆ. ಕಟುಕರ ಕೈ ತಪ್ಪಿಸಿಕೊಂಡು ನಾನು ಇಲ್ಲಿಯವರೆಗೆ ಬಂದಿದ್ದೇನೆ’ ಎಂದಿತು. ನಂತರ ಅಲ್ಲಿಗೆ ಒಬ್ಬ ಮನುಷ್ಯ ಬಂದ. ಸಾಧು ಮಹಾತ್ಮನಿಂದ ನಡೆದ ಕಥೆಯನ್ನೆಲ್ಲ ಕೇಳಿದ. ತೋಳ ಇಬ್ಬರು ನರರ ಮಾಂಸ ಆಹಾರವಾಗುತ್ತಲ್ಲ ಎಂದು ಸಂತೋಷಗೊಂಡಿತು. ಆ ಯಜಮಾನ ಕೇಳಿದ: ‘ತೋಳವೇ ಈ ಸಣ್ಣ ಚೀಲದಲ್ಲಿ ಅದೇಗೆ ನೀನು ಮಲಗಿದ್ದೀ, ಒಮ್ಮೆ ಮಲಗಿ ತೋರಿಸು’ ಎಂದಕ್ಷಣವೇ, ಅದು ಸಾಧುವಿನ ಸಹಾಯದಿಂದ ಚೀಲದ ಒಳಸೇರಿ ‘ಹೀಗೆ ಕುಳಿತಿದ್ದೇ ನೋಡಿ’ ಎಂದಿತು.
ತಕ್ಷಣವೇ ಆ ಚೀಲದ ಬಾಯಿಯನ್ನು ಭದ್ರಗೊಳಿಸಿ ಕಟ್ಟಿಬಿಟ್ಟರು. ತೋಳ ಸಿಕ್ಕಿಹಾಕಿಕೊಂಡಿತು. ‘ಕೃತಜ್ಞತೆ ಇಲ್ಲದ ಕೃತಘ್ನಗೇಡಿಯಾದ ನಿನಗೆ ಇದೇ ತಕ್ಕ ಶಿಕ್ಷೆ’ ಎಂದು ಹೇಳುತ್ತಾ ಸಾಧು ಹಾಗೂ ಆ ಯಜಮಾನ ಮುಂದೆ ಸಾಗಿದರು. ತೋಳ ಚೀಲದೊಳಗೆ ಬಂಧಿಯಾಗಿ, ಒದ್ದಾಡಿ ಸತ್ತು ಹೋಯಿತು. ಆ ತೋಳದ ಹಾಗೆ ಈ ಪ್ರಪಂಚದಲ್ಲಿ ಬಹಳ ಜನ ಕೃತಘ್ನಗೇಡಿಗಳೇ ಆಗಿದ್ದಾರೆ. ಆದರೆ ನೆನಪಿಡಿ, ಉಪಕರಿಸಿದವರ ಬಗ್ಗೆ ಕೃತಘ್ನರಾಗಬಾರದು, ಕೃತಜ್ಞರಾಗಿರಬೇಕು.