

ರೋಮ್: ಮಣ್ಣು ರಕ್ಷಣೆ ಸಲುವಾಗಿ ಈಶ ಫೌಂಡೇಷನ್ನ ಸದ್ಗುರು ಕೈಗೊಂಡಿರುವ ಮಣ್ಣು ರಕ್ಷಿಸಿ ಅಭಿಯಾನ ಲಂಡನ್ನಲ್ಲಿ ಆರಂಭಗೊಂಡಿದ್ದು, ಇದೀಗ ಐರೋಪ್ಯ ರಾಷ್ಟ್ರಗಳಾದ ಆಸ್ಟ್ರಿಯಾ, ಸ್ಲೊವೇನಿಯಾ ಮತ್ತು ಇಟಲಿಯಲ್ಲೂ ಪ್ರತಿಧ್ವನಿಸಿದೆ.
ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಮಾ.21ರಂದು ಲಂಡನ್ನಿಂದ ಏಕಾಂಗಿಯಾಗಿ ಬೈಕ್ ಪ್ರಯಾಣ ಹೊರಟಿರುವ ಸದ್ಗುರು, 27 ರಾಷ್ಟ್ರಗಳಲ್ಲಿ ನೂರು ದಿನಗಳೊಳಗೆ ಒಟ್ಟು 30 ಸಾವಿರ ಕಿ.ಮೀ. ಸಂಚರಿಸುವ ಗುರಿ ಇರಿಸಿಕೊಂಡಿದ್ದು, ಸದ್ಯ ರೋಮ್ ತಲುಪಿದ್ದಾರೆ.