ವಿವಾದಿತ ಓ ಮೈ ಗಾಡ್​-2 ಸಿನಿಮಾ ವೀಕ್ಷಿಸಿದ ಸದ್ಗುರು; ವಿಮರ್ಶೆ ಕೇಳಿ ಖುಷ್​ ಆದ ಚಿತ್ರತಂಡ

OMG Akshay Kumar
Published on

ಮುಂಬೈ: ಅಕ್ಷಯ್​ ಕುಮಾರ್​, ಪಂಕಜ್​ ತ್ರಿಪಾಠಿ ನಟನೆಯ ಬಹು ನಿರೀಕ್ಷಿt ಚಿತ್ರ ಓ​ ಮೈ ಗಾಡ್​-2 ಸಿನಿಮಾವನ್ನು ಸದ್ಗುರು ಜಗ್ಹಿ ವಾಸುದೇವ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿವಾದಿತ ಮತ್ತು ಸಲಿಂಗ ಕಾಮದ ಕುರಿತಾದ ಸಿನಿಮಾವನ್ನು ಸದ್ಗುರು ವೀಕ್ಷಿಸಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ.

ಇತ್ತೀಚಿಗೆ ಸಿನಿಮಾದ ಕುರಿತು ಅನೇಕ ವಿವಾದಗಳು ಭುಗಿಲೆದ್ದ ಹಿನ್ನಲೆಯಲ್ಲಿ ನಟ ಅಕ್ಷಯ್​​ ಕುಮಾರ್​ ಸದ್ಗುರು ಜಗ್ಗಿ ವಾಸುದೇವ ಅವರಿಗಾಗಿ ಕೊಯಂಬತ್ತೂರಿನಲ್ಲಿರುವ ಇಶಾ ಫೌಂಡೇಶನ್​ನಲ್ಲಿ ವಿಶೇಷ ಪ್ರದರ್ಶವನ್ನು ಏರ್ಪಡಿಸಿದ್ದರು. ಅಮಿತ್​ ರೈ ನಿರ್ದೇಶನದ ಬಹುನಿರೀಕ್ಷಿತ OMG-2 ಇದೇ ಆಗಸ್ಟ್​ 11ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

ಚಿತ್ರ ವೀಕ್ಷಿಸಿದ ಬಳಿಕ ಸದ್ಗುರು OMG-2 ಸಿನಿಮಾವನ್ನು ಹಾಡಿ ಹೊಗಳಿದ್ದರು. ಮಹಿಳೆಯರನ್ನು ಘನತೆಯಿಂದ ಕಾಣುವಂತಹ, ಅವರ ಸುರಕ್ಷತೆಯನ್ನು ಬಯಸುವಂತಹ ಸಮಾಜ ಕಟ್ಟಲು ನಾವು ಹೊರಟಿದ್ದೇವೆ. ಇತ್ತೀಚಿನ ದಿನಗಳಲ್ಲಿ ತಮ್ಮ ದೈಹಿಕ ಅಗತ್ಯತೆಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಶಿಕ್ಷಣ ನೀಡುವುದು ಬಹಳ ಮುಖ್ಯವಾಗಿದೆ. ಅಂತಹ ಶಿಕ್ಷಣವನ್ನು ಈ ಚಿತ್ರದಲ್ಲಿ ನೀಡಲಾಗಿದೆ, ಚಿತ್ರಕ್ಕೆ A ಸರ್ಟಿಫಿಕೆಟ್​ ನೀಡಿರುವ ಕುರಿತು ಆಕ್ಷೇಪ ಸದ್ಗುರು ಆಕ್ಷೇಪಿಸಿ ಟ್ವೀಟ್​ ಮಾಡಿದ್ದರು.

Sadhguru Tweet
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net