VIDEO| ಬಿಜೆಪಿಯವರು ದ್ರೋಹಿಗಳು ಭಾರತ ಮಾತೆಯನ್ನು ಕೊಂದವರು; ಸಂಸತ್​ನಲ್ಲಿ ರಾಹುಲ್​ ಗಾಂಧಿ ಗುಡುಗು

Rahul Gandhi
Published on

ನವದೆಹಲಿ: ಬಿಜೆಪಿಯವರು ಮಣಿಪುರದಲ್ಲಿ ಭಾರತ ಮಾತೆಯನ್ನೂ ಹತ್ಯೆ ಮಾಡಿದ್ದರು. ಈಗ ಹರಿಯಾಣಕ್ಕೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಣಿಪುರ-ಹರಿಯಾಣದಲ್ಲಿ ಸಂಭವಿಸಿದ ಘರ್ಷಣೆ ಕುರಿತು ಮಾತನಾಡಿದ ರಾಹುಲ್​ ಬಿಜೆಪಿಯವರು ಭಾರತ ಮಾತೆಯ ರಕ್ಷಕರಲ್ಲ, ಹಂತಕರು ಎಂದು ಕಿಡಿಕಾರಿದ್ದಾರೆ.

ಭಾರತ ಒಂದು ಧ್ವನಿ. ಮಣಿಪುರದಲ್ಲಿ ನೀವು ಈಗಾಗಲೇ ಭಾರತ ಮಾತೆಯ ಧ್ವನಿಯನ್ನೂ ಕೊಂದಿದ್ದೀರಿ. ನನ್ನ ತಾಯಿ ಇಲ್ಲಿ ಕುಳಿತಿದ್ದಾರೆ. ನೀವು ದೇಶದ್ರೋಹಿಗಳು ನನ್ನ ಇನ್ನೊಬ್ಬ ತಾಯಿ ಭಾರತ ಮಾತೆಯನ್ನು ಮಣಿಪುರದಲ್ಲಿ ಕೊಂದಿದ್ದೀರ. ಆದ್ದರಿಂದ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಗಲಭೆ ಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೂ ಭೇಟಿ ನೀಡಿಲ್ಲ. ಏಕೆಂದರೆ ಅವರು ಅದನ್ನು ಭಾರತದ ಭಾಗವೆಂದು ಪರಿಗಣಿಸಿಲ್ಲ. ನೀವು(ಬಿಜೆಪಿ) ಮಣಿಪುರವನ್ನು ದೇಶದಿಂದ ವಿಭಜಿಸಿದ್ದೀರಾ. ನೀವು ಮಣಿಪುರಕ್ಕೆ ಸೇನೆಯನ್ನು ಕಳಿಸುವ ಮೂಲಕ ಗಲಭೆಯನ್ನು ಹತ್ತೋಟಿಗೆ ತರಬಹುದು. ಆದರೆ, ಇದುವರೆಗೂ ಆ ಕೆಲಸ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ರಾವಣನನ್ನೂ ರಾಮ ಕೊಲ್ಲಲಿಲ್ಲ. ಆದರೆ, ರಾವಣ ಅವನ ದುರಹಂಕಾರದಿಂದ ಕೊಲಲ್ಪಟ್ಟನು. ನೀವು ಮಣಿಪುರದಲ್ಲಿ ಬೆಂಕಿ ಹಚ್ಚಿ, ಹರಿಯಾಣದಲ್ಲೂ ಸಹ ಅದೇ ಕೆಲಸವನ್ನೂ ಮಾಡಿದ್ದೀರಾ. ಇಡೀ ದೇಶವನ್ನು ಸುಡುವಲ್ಲಿ ಬಿಜೆಪಿಯವರು ನಿರತರಾಗಿದ್ದಾರೆ ಎಂದು ರಾಹುಲ್​ ಗಾಂಧಿ ಲೋಕಸಭೆಯಲ್ಲಿ ಮಾತನಾಡುವ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net