ಲವ್ವಿ-ಡವ್ವಿ ವದಂತಿಗಳಿಗೆ ಕಿವಿಗೊಡದ ಸಾರಾ, ಓದಿನಲ್ಲಿ ಸಾಧನೆ; ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ 'ಕ್ರಿಕೆಟ್ ದೇವರು'

WhatsApp-Image-2024-05-25-at-8.42.40-AM
Published on

ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ, 'ಕ್ರಿಕೆಟ್ ದೇವರು' ಎಂದೇ ಪ್ರೀತಿ, ಅಭಿಮಾನದಿಂದ ಕರೆಯಲ್ಪಡುವ 'ಮಾಸ್ಟರ್​ ಬ್ಲಾಸ್ಟರ್'​ ಸಚಿನ್ ತೆಂಡೂಲ್ಕರ್​ ಇದೀಗ ಹೆಮ್ಮೆಯ ವಿಷಯವೊಂದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವುದು ಎಲ್ಲರ ಗಮನಸೆಳೆದಿದೆ. ತಮ್ಮ ಪ್ರೀತಿಯ ಪುತ್ರಿ ಸಾರಾ ತೆಂಡೂಲ್ಕರ್​ ಸ್ನಾತಕೋತ್ತರ ಪದವಿ ಪೂರೈಸಿದ್ದು, ನಮನ್ನು ಹೆಮ್ಮೆ ಪಡುವಂತೆ ಮಾಡಿದ್ದಾಳೆ ಎಂದು ಸಚಿನ್ ಅತೀವ ಸಂತಸದಿಂದ ಹೇಳಿಕೊಂಡಿದ್ದಾರೆ.

ಕೇವಲ ಕ್ರಿಕೆಟ್ ಸ್ಟೇಡಿಯಂಗೆ ಆಗಮಿಸಿ ಮ್ಯಾಚ್ ನೋಡಿದ್ರೂ, ಹೊರಗಡೆ ಹೋಟೆಲ್​ನಲ್ಲಿ ಊಟ ಸವಿದರೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದ್ದ ಸಾರಾ, ಒಂದಲ್ಲ ಒಂದು ವಿಚಾರಗಳಿಂದ ನೆಟ್ಟಿಗರ ಲೇವಡಿಗೆ ಗುರಿಯಾಗುತ್ತಿದ್ದರು. ಟೀಂ ಇಂಡಿಯಾದ ಹೆಸರಾಂತ ಕ್ರಿಕೆಟಿಗ ಶುಭಮನ್​ ಗಿಲ್​ ಜತೆಗೆ ಸಾರಾ ಕದ್ದುಮುಚ್ಚಿ ಡೇಟಿಂಗ್ ಮಾಡುತ್ತಿದ್ದಾರೆ, ಇವರಿಬ್ಬರು ಶೀಘ್ರವೇ ಮದುವೆ ಕೂಡ ಆಗಲಿದ್ದಾರೆ ಎಂದು ವದಂತಿಗಳನ್ನು ಹಬ್ಬಿಸಲಾಗಿತ್ತು. ಆದ್ರೆ, ಇದ್ಯಾವುದಕ್ಕೂ ಕಿವಿಗೊಡದ ಸಾರಾ, ಇದೀಗ ಡಿಸ್ಟಿಂಕ್ಷನ್​ನಲ್ಲಿ ತಮ್ಮ ಮಾಸ್ಟರ್ಸ್​​ ಅನ್ನು ಮುಗಿಸಿಕೊಂಡಿದ್ದಾರೆ.

ಇನ್ನು ಮಗಳ ಸಾಧನೆಯನ್ನು ಕೊಂಡಾಡಿದ ಕ್ರಿಕೆಟ್ ದೇವರು, "ಪುತ್ರಿ ಸಾರಾ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪೋಷಕರಾಗಿ, ಈ ಸ್ಥಾನಕ್ಕೆ ಬರಲು ನೀನು ವರ್ಷಗಳಿಂದ ಪಟ್ಟ ಶ್ರಮ ನೋಡಿದ ನಮಗೆ ತುಂಬ ಹೆಮ್ಮೆಯಾಗಿದೆ. ಇದು ಅಷ್ಟು ಸುಲಭವಲ್ಲ. ಭವಿಷ್ಯಕ್ಕಾಗಿ ನಿನ್ನೆಲ್ಲಾ ಕನಸುಗಳು ಸಾಕಾರಗೊಳ್ಳಲಿ" ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪುತ್ರಿ ಸಾರಾ ಮತ್ತು ಪತ್ನಿ ಅಂಜಲಿ ಜತೆಗಿರುವ ಫೋಟೋ ಜತೆಗೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net