Sabarimale : ಅಯ್ಯಪ್ಪಸ್ವಾಮಿ ಪ್ರಸಾದದಲ್ಲೂ ಕಲಬೆರಕೆ..6.65 ಲಕ್ಷ ಕಂಟೈನರ್ ಪ್ರಸಾದ ಗೊಬ್ಬರವಾಯ್ತು! ನಡೆದಿದ್ದೇನು?

shabarimale
Published on

ಶಬರಿಮಲೆ: ತಿರುಪತಿ ತಿಮ್ಮಪ್ಪ ದೇಗುಲದ ಲಡ್ಡು ಪ್ರಸಾದದ ವಿಚಾರ ಮಾಸುವ ಮುನ್ನವೇ ಇದೀಗ ದೇಶದ ಮತ್ತೊಂದು ಪ್ರಮುಖ ದೇವಸ್ಥಾನ ಶಬರಿಮಲೆ(Sabarimale)ಯ ಪ್ರಸಾದದಲ್ಲಿ ಕಲಬೆರಕೆ ನಡೆದಿದ್ದು, ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ ಬೆರೆಸಲಾಗಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಅಗತ್ಯಕ್ಕಿಂತ ಹೆಚ್ಚು ಕ್ರಿಮಿನಾಶಕ ಬಳಸಿದ 6.65 ಲಕ್ಷ ಕಂಟೈನರ್ ಗಳಲ್ಲಿನ ಪ್ರಸಾದವನ್ನು ಕಳೆದ ವರ್ಷದಿಂದ ಬಳಕೆ ಮಾಡದೆ ನಿಲ್ಲಿಸಲಾಗಿದೆ. ಪ್ರಸಾದದಲ್ಲಿ ಬಳಸುವ ಏಲಕ್ಕಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕದ ಅಂಶ ಕಂಡುಬಂದಿದೆ. ಹೀಗಾಗಿಯೇ ಈಗ ಪ್ರಸಾದದ ತಯಾರಿಕೆಯಲ್ಲಿ ಬಳಸುತ್ತಿದ್ದ ಕೀಟನಾಶಕ ಅಂಶ ಹೆಚ್ಚಾಗಿದ್ದ ಏಲಕ್ಕಿ ಬಳಕೆಯನ್ನು ನಿಲ್ಲಿಸಲಾಗಿದೆ.

ಈ ಪ್ರಸಾದಗಳಿಗೆ ಸಂಬಂಧಿಸಿದಂತೆ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಟಿಡಿಬಿ ಈ ಪ್ರಸಾದಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಟೆಂಡರ್ ಆಹ್ವಾನಿಸಿದೆ. ಇಂಡಿಯನ್ ಸೆಂಟ್ರಿಫ್ಯೂಜ್ ಇಂಜಿನಿಯರಿಂಗ್ ಸಲ್ಯೂಷನ್ಸ್ ಟೆಂಡರ್ ಪಡೆದಿದ್ದು, ಕಲುಷಿತ ಪ್ರಸಾದವನ್ನು ಗೊಬ್ಬರವನ್ನಾಗಿ ಪರಿವರ್ತಿಸುವುದಾಗಿ ಟಿಡಿಬಿ ಅಧ್ಯಕ್ಷ ಪ್ರಶಾಂತ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net