

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿ ಇರುವ ಸಿನಿ ತಾರೆಯರ ಪೈಕಿ ರಾಧಿಕಾ ಪಂಡಿತ್ ಕೂಡ ಒಬ್ಬರು. ಯಶ್ ಜತೆಗಿನ ತಮ್ಮ ಫೋಟೋ ಹಾಗೂ ಪುಟ್ಟಪುಟ್ಟ ಇಬ್ಬರು ಮಕ್ಕಳ ವಿಡಿಯೋ, ಫೋಟೋಗಳನ್ನು ಸದಾ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ ರಾಧಿಕಾ.
ಮದುವೆ ಬಳಿಕ ಸಿನಿಮಾದಿಂದ ದೂರ ಇದ್ದು, ಮಕ್ಕಳನ್ನು ನೋಡಿಕೊಳ್ಳುವುದಲ್ಲಿ ಬಿಜಿ ಇರುವ ರಾಧಿಕಾ, ಅವರ ವಿಡಿಯೋ, ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ.
ಇದೀಗ ದೊಡ್ಡ ಮಗಳು ಐರಾ ತಮ್ಮ ಯಥರ್ವ್‌ನಿಗೆ ತಿಂಡಿ ತಿನ್ನಿಸುತ್ತಿರುವ ಮುದ್ದಾದ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಈ ಮಕ್ಕಳ ಅಂದಚೆಂದಕ್ಕೆ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ. ಈ ವಿಡಿಯೋದಲ್ಲಿ ಐರಾ ತನ್ನ ಪ್ಲೇಟ್‌ನಲ್ಲಿ ಇರುವ ತಿಂಡಿ ತಿನ್ನುತ್ತಿದ್ದಾಳೆ. ಪಕ್ಕದಲ್ಲಿಯೇ ತಮ್ಮ ಕುಳಿತಿದ್ದಾನೆ. ಅವನ ಬಾಯಿಗೆ ತಿಂಡಿ ಹಾಕಲು ನೋಡಿದಾಗ ರಾಧಿಕಾ ಅದನ್ನು ತಡೆಯುತ್ತಾರೆ. ಆದರೂ ಮತ್ತೊಮ್ಮೆ ಐರಾ ಹೀಗೆಯೇ ಮಾಡುತ್ತಾರೆ.
ಈ ಮುದ್ದಾದ ವಿಡಿಯೋ ಸಕತ್ ವೈರಲ್ ಆಗಿದೆ. ಅಂದಹಾಗೆ ಇದೀಗ ಐರಾಗೆ ಮೂರು ವರ್ಷ ತುಂಬಿದೆ. ಯಥರ್ವ್‌ಗೆ ಎರಡು ವರ್ಷ.
ಇಲ್ಲಿದೆ ನೋಡಿ ಕ್ಯೂಟ್ ವಿಡಿಯೋ: