ಆಫ್ರಿಕಾದಿಂದ ಹಿಂದಿರುಗಿದ್ದ ನಟ ಅರ್ಜುನ್‌ ಸರ್ಜಾಗೆ ಕೋವಿಡ್‌: ‘ರಾಮ ಭಕ್ತ ಹನುಮಾನ್​ ಕಿ ಜೈ’ ಎಂದು ಪೋಸ್ಟ್‌...

arjun sarja
Published on

ಚೆನ್ನೈ (ತಮಿಳುನಾಡು): ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ಅವರಿಗೆ ಕರೊನಾ ಸೋಂಕು ಬಾಧಿಸಿದೆ. ತಮಗೆ ಕೋವಿಡ್‌ ದೃಢಪಟ್ಟಿರುವ ಬಗ್ಗೆ 59 ವರ್ಷದ ನಟ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.

‘ನನಗೆ ಕೋವಿಡ್​ ತಗುಲಿದೆ. ಐಸೋಲೇಷನ್‌ನಲ್ಲಿ ಇದ್ದೇನೆ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ಸಂಪರ್ಕದಲ್ಲಿರುವ ಪ್ರತಿಯೊಬ್ಬರೂ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದಾರೆ.

‘ನಾನು ಚೆನ್ನಾಗಿದ್ದೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್ ಧರಿಸಲು ಮರೆಯಬೇಡಿ. ರಾಮ ಭಕ್ತ.. ಹನುಮಾನ್​ ಕಿ ಜೈ" ಎಂದು ಅವರು ಬರೆದುಕೊಂಡಿದ್ದಾರೆ.

'ಸರ್ವೈವರ್ ತಮಿಳು' ಎಂಬ ರಿಯಾಲಿಟಿ ಷೋ ಖಾಸಗಿ ಟಿವಿಯಲ್ಲಿ ನಡೆಯುತ್ತಿದ್ದು, ಅದನ್ನು ಅರ್ಜುನ್‌ ಸರ್ಜಾ ನಡೆಸಿಕೊಡುತ್ತಿದ್ದಾರೆ. ಇದರ ಶೂಟಿಂಗ್‌ಗಾಗಿ ಈಚೆಗೆ ಆಫ್ರಿಕನ್ ದ್ವೀಪಗಳಲ್ಲಿ ಸಂಚರಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಕೋವಿಡ್‌ ಕಾಣಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net