ಕಂಕುಳಿನ ಕೂದಲಿನಿಂದ ಕೋಟಿ ಕೋಟಿ ರೂ. ಗಳಿಸ್ತಾಳೆ ಈಕೆ- ಬೆವರೇ ಈಕೆಯ ಆದಾಯದ ಮೂಲವಂತೆ!

fenilla
Published on

ಲಂಡನ್​​: ರೂಪದರ್ಶಿಗಳು, ನಟ-ನಟಿಯರಿಗೆ ಲಕ್ಷ, ಕೋಟಿ ಅಭಿಮಾನಿಗಳು ಇರುತ್ತಾರೆ. ಕೆಲವರ ಅಭಿಮಾನವಂತೂ ಅತಿರೇಕಕ್ಕೆ ಹೋಗುತ್ತದೆ. ತಮ್ಮ ಇಷ್ಟದ ತಾರೆಯರು ಏನು ಮಾಡಿದರೂ ಅವರಿಗೆ ಇಷ್ಟ. ಅವರನ್ನು ಅನುಸರಿಸುವುದು ಎಂದರೆ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಖುಷಿ. ಅವರು ಉಟ್ಟ ಬಟ್ಟೆ ಅಥವಾ ಬಳಸಿದ ವಸ್ತುಗಳನ್ನು ದೇವರ ಪ್ರಸಾದ ಎಂಬಂತೆ ಕಣ್ಣಿಗೆ ಒತ್ತಿಕೊಂಡು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ.

ಈ ಚಿತ್ರದಲ್ಲಿ ಕಾಣಿಸುತ್ತಿರುವ ಖ್ಯಾತ ರೂಪದರ್ಶಿಯದ್ದೂ ಇದೇ ಮಾತು. ಲಂಡನ್​ನ ಈ ಸುಂದರಿಯ ಹೆಸರು ಫೆನೆಲ್ಲಾ ಫಾಕ್ಸ್. ಈಕೆಗೂ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಈ ಅಭಿಮಾನಿಗಳ ಪೈಕಿ ಹಲವರಿಗೆ ಈಕೆಯ ಬೆವರಿನ ವಾಸನೆ ಎಂದರೆ ತುಂಬಾ ಇಷ್ಟವಂತೆ! ಬೆವರು ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ಮೂಗು ಮುಚ್ಚಿಕೊಳ್ಳುತ್ತಾರೆ. ಆದರೆ ಫೆನೆಲ್ಲಾಳ ಬೆವರು ಆಕೆಯ ಅಭಿಮಾನಿಗಳಿಗೆ ಸುಗಂಧದ ಪರಿಮಳವನ್ನು ಸೂಸುತ್ತದೆಯಂತೆ!

ಇದನ್ನೇ ತನ್ನ ಆದಾಯದ ಮೂಲ ಮಾಡಿಕೊಂಡಿರುವ ಈ ರೂಪದರ್ಶಿ ಬೆವರನ್ನು ಮಾರಿ ಹಣ ಗಳಿಸುತ್ತಿದ್ದಾಳೆ. ಕಂಕುಳಿನ ಕೂದಲು ಹೆಚ್ಚಿದಂತೆ ಬೆವರಿನ ದುರ್ನಾತ ಹೆಚ್ಚುವುದು ಸಾಮಾನ್ಯ. ಅದರಲ್ಲಿಯೂ ನಟಿಯರು, ರೂಪದರ್ಶಿಯರಂತೂ ಸದಾ ಶುಚಿಯಾಗಿಯೇ ಇರಬೇಕು. ಆದರೆ ಫೆನೆಲ್ಲಾ ಫಾಕ್ಸ್ ಇದಕ್ಕೆ ವಿರುದ್ಧವಾಗಿದ್ದಾಳೆ. ಏಕೆಂದರೆ, ಈಕೆ ತನ್ನ ಕಂಕುಳನ್ನು ಎಂದಿಗೂ ಶೇವ್​ ಮಾಡುತ್ತಿಲ್ಲ. ಅಷ್ಟೇ ಅಲ್ಲದೇ, ಕಂಕುಳಿಗೆ ಯಾವುದೇ ರೀತಿಯ ಪರ್ಫ್ಯೂಮ್ ಆಗಲಿ, ಡಿಯೋ ಆಗಲಿ ಬಳಸುತ್ತಿಲ್ಲ. ಇದಕ್ಕೆ ಕಾರಣ ಹೆಚ್ಚು ಬೆವರು ಬಂದರೆ ಈಕೆಯ ಗಳಿಕೆ ಹೆಚ್ಚುತ್ತದೆ ಎನ್ನುವುದು!

ನನ್ನ ನೈಸರ್ಗಿಕ ಬೆವರಿನ ವಾಸನೆಯನ್ನು ಅಭಿಮಾನಿಗಳು ಇಷ್ಟಪಡುತ್ತಾರೆ ಎಂದಿರುವ ಈಕೆ, ಕಳೆದ ವರ್ಷ ಬೆವರನ್ನು ಮಾರಿ ಗಳಿಸಿದ್ದು ಬರೋಬ್ಬರಿ 300,000 ಡಾಲರ್​. ಭಾರತದ ರೂಪಾಯಿ ಮಟ್ಟಿಗೆ ಹೇಳುವುದಾದರೆ, ಸುಮಾರು 2.88 ಕೋಟಿ ರೂಪಾಯಿ. ಬೆವರನ್ನು ಸಂಗ್ರಹಿಸಿ ಅದನ್ನು ಅಭಿಮಾನಿಗಳಿಗೆ ಮಾರುತ್ತಿರುವುದಾಗಿ ಈಕೆ ಹೇಳಿಕೊಂಡಿದ್ದಾಳೆ.

ಐದು ವರ್ಷಗಳ ಹಿಂದೆ ನನ್ನ ಬೆವರಿನ ಮಹಿಮೆ ನನ್ನ ಅರಿವಿಗೆ ಬಂದಿತು. ನನ್ನ ಅಭಿಮಾನಿಗಳು ನನ್ನ ಬೆವರಿನ ಪರಿಮಳಕ್ಕಾಗಿ ಹಾತೊರೆಯುತ್ತಿದ್ದರು. ಆದ್ದರಿಂದ ನಾನು ಕಂಕುಳಿನ ಕೂದಲನ್ನು ಬೆಳೆಸಲು ಪ್ರಾರಂಭಿಸಿ ಡಿಯೋಡರೆಂಟ್ ತ್ಯಜಿಸಿದೆ. ನಾನು ನನ್ನ ಕಂಕುಳಿನ ನೈಸರ್ಗಿಕ ವಾಸನೆಯನ್ನು ಪ್ರೀತಿಸುತ್ತೇನೆ. ಹೆಚ್ಚು ಜನರು ತಮ್ಮ ನೈಸರ್ಗಿಕ ವಾಸನೆಯನ್ನು ಅಸ್ವಾಭಾವಿಕ ಪರಿಮಳಗಳೊಂದಿಗೆ ಮರೆಮಾಚಲು ಪ್ರಯತ್ನಿಸುತ್ತಾರೆ. ನಮ್ಮ ಸೇಹದ ಸುವಾಸನೆ ನಾವು ಇಷ್ಟಪಡಬೇಕು ಎನ್ನುತ್ತಾಳೆ ಫೆನೆಲ್ಲಾ ಫಾಕ್ಸ್.

ನನ್ನ ಬಹಳಷ್ಟು ಅಭಿಮಾನಿಗಳು ನನ್ನ ಕಂಕುಳಿನ ಕೂದಲು ಉದ್ದ ಮತ್ತು ಬೆವರುವ ಕಲ್ಪನೆಯನ್ನು ಇಷ್ಟಪಡುತ್ತಾರೆ. ಅವರು ನನ್ನ ಬೆವರುವಿಕೆಯನ್ನು ನೋಡಲು ಇಷ್ಟಪಡುತ್ತಾರೆ. ಜಿಮ್‌ನಲ್ಲಿ ನಾನು ಬೆವರುತ್ತಿರುವಾಗ ತುಂಬಾ ಆಕರ್ಷಕವಾಗಿ ಕಾಣುತ್ತೇನೆ ಎಂದು ಅವರು ಹೇಳುತ್ತಾರೆ. ನಾನು ನನ್ನ ಕಂಕುಳಿನ ಕೂದಲನ್ನು ತೆಗೆದರೆ ನನ್ನ ಬಹಳಷ್ಟು ಅಭಿಮಾನಿಗಳು ನನ್ನ ಮೇಲೆ ಸಿಟ್ಟಾಗುತ್ತಾರೆ. ಆದ್ದರಿಂದ ಹೆಚ್ಚು ಬೆವರುತ್ತೇನೆ, ಅದನ್ನು ಮಾರಿ ಹಣ ಗಳಿಸುತ್ತಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net