

ಉತ್ತರ: ಯಾವುದೇ ವಿಲ್ ನೋಂದಣಿ ಆಗಬೇಕು ಎಂದು ಕಾನೂನಿನಲ್ಲಿ ಇಲ್ಲ. ಆದರೆ ನೋಂದಣಿ ಆಗಿದ್ದರೆ ಒಳ್ಳೆಯದು ಅಷ್ಟೆ. ನೋಂದಣಿ ಆಗಿರುವ ವಿಲ್ ಸಿಂಧುತ್ವದ ಬಗ್ಗೆ ತಕರಾರು ಬಂದಾಗ, ವಿಲ್ ನೋಂದಾಯಿತವಾಗಿದೆ ಎನ್ನುವ ಅಂಶ ಸ್ವಲ್ಪ ಮಟ್ಟಿಗೆ , ವಿಲ್‍ನ ಸಿಂಧುತ್ವವನ್ನು ಸಾಬೀತು ಪಡಿಸುವಲ್ಲಿ ಸಹಾಯ ಮಾಡುತ್ತದೆ . ವಿಲ್ ಬಿಳಿಯ ಕಾಗದದ ಮೇಲೆ ಇದ್ದರೂ ಚಿಂತೆಯಿಲ್ಲ. ಆದರೆ ಯಾವುದೇ ವಿಲ್‍ಗೆ ಕಡ್ಡಾಯವಾಗಿ ಇಬ್ಬರು ಸಾಕ್ಷಿಗಳು ಇರಲೇ ಬೇಕು. ಬಿಕ್ಲಂದಾರರು , ಅಂದರೆ ಯಾರು ವಿಲ್ ಬರೆದಿರುತ್ತಾರೋ ಅವರ ಸಹಿಯೂ ಇರಬೇಕು.
ನಿಮ್ಮ ವಿಷಯದಲ್ಲಿ ಸಾಕ್ಷಿಗಳು ಇಲ್ಲದೇ ಇರುವುದರಿಂದ ವಿಲ್ ಸಿಂಧುತ್ವವನ್ನು ಸಾಬೀತುಪಡಿಸುವುದು ಕಾನೂನಿನ ಚೌಕಟ್ಟಿನಲ್ಲಿ ಕಷ್ಟವಿದೆ. ನೀವೂ ನಿಮ್ಮ ಸಹೋದರರೂ ಕೂತು ಮಾತಾಡಿ ಸಮಸ್ಯೆಯನ್ನು ಮಧ್ಯಸ್ಥಿಕೆಯಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು. ನೀವು ನಿಮ್ಮ ತಂದೆ ತಾಯಿರನ್ನು ನೋಡಿಕೊಂಡಿದ್ದರಿಂದ ನಿಮ್ಮ ಸಹೋದರರು ನಿಮಗೆ ಹಚ್ಚಿನ ಭಾಗ ಕೊಡಲು ಒಪ್ಪಬಹುದು. ಇಲ್ಲದೇ ಹೋದರೆ ಕಾನೂನಿನಂತೆ ಮೂವರು ಮಕ್ಕಳಿಗೂ ತಲಾ ಮೂರನೇ ಒಂದು ಸಮಪಾಲು ಬರುತ್ತದೆ. ತಂದೆ ತಾಯಿಯನ್ನು ಸಾಕಿದ ಮಾತ್ರಕ್ಕೆ ಆಸ್ತಿಯಲ್ಲಿ ಹೆಚ್ಚಿನ ಭಾಗ ಬರುವುದಿಲ್ಲ.