ಮೇಕೆ ಸಸ್ಯಾಹಾರಿಯೋ, ಮಾಂಸಾಹಾರಿಯೊ? ಇದೆಂಥ ಪ್ರಶ್ನೆ ಅನ್ನೋ ಮುನ್ನ ಈ ವಿಡಿಯೋ ನೋಡಿ...!

goat
Published on

ಮೇಕೆ ಸಸ್ಯಾಹಾರಿಯೋ, ಮಾಂಸಾಹಾರಿಯೋ ಎಂದು ಚಿಕ್ಕಮಕ್ಕಳನ್ನು ಪ್ರಶ್ನಿಸಿದರೂ ಥಟ್‌ ಅಂತ ಸಸ್ಯಾಹಾರಿ ಎನ್ನುತ್ತಾರೆ. ಏಕೆಂದರೆ ಚಿಕ್ಕಂದಿನಿಂದಲೂ ಇಲ್ಲಿಯವರೆಗೂ ಅದನ್ನೇ ನೋಡಿಕೊಂಡು, ಓದಿಕೊಂಡು, ಕೇಳಿಕೊಂಡು ಬಂದಿದ್ದೇವೆ.

ಆದರೆ ಇಲ್ಲೊಂದು ವೈರಲ್‌ ವಿಡಿಯೋ ನೋಡಿದರೆ ಮಾತ್ರ ಎಲ್ಲರ ಲೆಕ್ಕಾಚಾರ ಉಲ್ಟಾ ಆಗುವುದು ಗ್ಯಾರೆಂಟಿ. ಏಕೆಂದರೆ ಇಲ್ಲೊಂದು ಮೇಕೆ ಮೀನನ್ನು ತಿನ್ನುತ್ತಿದೆ. ಹಸಿಹಸಿ ಮೀನನ್ನು ಚಕಚಕ ತಿನ್ನುವ ಮೇಕೆಯ ವಿಡಿಯೋ ವೈರಲ್‌ ಆಗಿದ್ದು, ನೋಡುಗರನ್ನು ವಿಸ್ಮಿತರನ್ನಾಗಿ ಮಾಡಿದೆ.

ಬುಟ್ಟಿಯೊಂದರಲ್ಲಿ ಇರುವ ಮೀನುಗಳನ್ನು ತೆಗೆದುಕೊಂಡು ಮೇಕೆಯೊಂದು ಮೆಲ್ಲುತ್ತಿರುವುದನ್ನು ವಿಡಿಯೋ ಇದಾಗಿದೆ. ಈ ಮೇಕೆಯ ವಿಡಿಯೋವನ್ನು ಇನ್‌ಸ್ಟಾಗ್ರಾಂ ಹಾಗೂ ಟ್ವೀಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ ಲಿಂಕ್‌:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net