ಯೋಜನಾ ಸಂಯೋಜಕರಾಗಿ: ಆರಂಭಿಕ 61 ಸಾವಿರ ರೂ. ವೇತನ ಪಡೆಯಿರಿ

udyoga
Published on

ವಿದ್ಯುತ್ ಕ್ಷೇತ್ರದ ವಿವಿಧ ಘಟಕಗಳಿಗೆ ಹಣಕಾಸಿನ ನೆರವು ನೀಡುವ ಪವರ್ ಫೈನಾನ್ಸ್ ಕಾರ್ಪೋರೇಷನ್​ ಲಿಮಿಟೆಡ್ (ಪಿಎಫ್​ಸಿ) ಭಾರತ ಸರ್ಕಾರದಿಂದ ಅತ್ಯುತ್ತಮ ಗ್ರೇಡ್ ಪಡೆದಿದೆ. ಇಂತಹ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿದವರಿಗೆ ಇಲ್ಲಿದೆ ಅವಕಾಶ. 41 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಇಂಟಿಗ್ರೇಟೆಡ್ ಪವರ್ ಡೆವಲಪ್‍ಮೆಂಟ್ ಸ್ಕೀಮ್ (ಐಪಿಡಿಎಸ್) ಅನುಷ್ಠಾನದ ಹೊಣೆಯನ್ನು ಪಿಎಫ್​ಸಿಗೆ ನೀಡಲಾಗಿದೆ.

ಇದಕ್ಕಾಗಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳನ್ನು ದೇಶದ ಯಾವ ಭಾಗದಲ್ಲಿ ಬೇಕಾದರೂ ನೇಮಕ ಮಾಡಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಪ್ರಾಂತ್ಯವಾರು ಆದ್ಯತೆ ನೀಡಿ ಅರ್ಜಿ ಭರ್ತಿಮಾಡಬೇಕು. ಹುದ್ದೆಗಳು 2 ವರ್ಷದ ಅವಧಿಗೆ ಒಳಪಟ್ಟಿದ್ದು, ಅವಶ್ಯಕತೆಗೆ ಅನುಗುಣವಾಗಿ ಗರಿಷ್ಠ 4 ವರ್ಷ ವಿಸ್ತರಿಸಬಹುದು.

ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ 10 ಸ್ಥಾನ, ಪರಿಶಿಷ್ಟ ಜಾತಿಗೆ 7, ಪರಿಶಿಷ್ಟ ಪಂಗಡಕ್ಕೆ 4, ಇತರ ಹಿಂದುಳಿದ ವರ್ಗಕ್ಕೆ 13, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ 4, ಅಂಗವಿಕಲ ಅಭ್ಯರ್ಥಿಗಳಿಗೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ, ವೃತ್ತಿ ಅನುಭವ, ಶೇಕಡವಾರು ಅಂಕಗಳಲ್ಲಿ ವಿನಾಯಿತಿ/ಸಡಿಲಿಕೆ ಇರುತ್ತದೆ.

ಹುದ್ದೆ, ಸಂಖ್ಯೆ ವಿವರ

* ಪ್ರಾಜೆಕ್ಟ್ ಕೊಆರ್ಡಿನೇಟರ್ - 34

* ಕನ್ಸಲ್ಟಂಟ್ ಟೆಕ್ನಿಕಲ್-ಐ - 6

* ಕನ್ಸಲ್ಟಂಟ್ ಟೆಕ್ನಿಕಲ್-ಐಐ - 1

ವಿದ್ಯಾರ್ಹತೆ: ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಐಟಿ/ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ, ಬಿ.ಟೆಕ್/ ಎಂಸಿಎ ಪದವಿ. ಹುದ್ದೆಗೆ ಅನುಗುಣವಾಗಿ ವೃತ್ತಿ ಅನುಭವ ಹೊಂದಿರಬೇಕು.

ವಯೋಮಿತಿ: 18.1.2021ಕ್ಕೆ ಕನಿಷ್ಠ 21 ವರ್ಷ. ಗರಿಷ್ಠ 45 ವರ್ಷ.

ವಿಶೇಷ ಸೂಚನೆ: ಅಭ್ಯರ್ಥಿಗಳ ದಾಖಲೆಗಳು ಹಿಂದಿ/ ಇಂಗ್ಲಿಷ್ ಭಾಷೆಯಲ್ಲಿಲ್ಲದಿದ್ದರೆ ಅಭ್ಯರ್ಥಿಗಳು ಸ್ವ- ಪ್ರಾಮಾಣಿಕೃತ ಅನುವಾದಿತ ಪ್ರತಿಯನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ದೈಹಿಕ ದೃಢತೆಯ ಪ್ರಮಾಣಪತ್ರ ಸಲ್ಲಿಸಬೇಕಿದೆ. ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ರಾಜ್ಯದಿಂದಲೇ ಕಾರ್ಯನಿರ್ವಹಿಸುವ ಸಲುವಾಗಿ ತಮ್ಮ ಬಳಿ ಫೋನ್, ಕಂಪ್ಯೂಟರ್/ಲ್ಯಾಪ್‍ಟಾಪ್, ಇಂಟರ್‍ನೆಟ್ ಸೌಲಭ್ಯ ಹೊಂದಿರಬೇಕು.

ವೇತನ: 1 ರಿಂದ 5 ವರ್ಷ ವೃತ್ತಿ ಅನುಭವ ಹೊಂದಿದ್ದರೆ ಮಾಸಿಕ 61,000 ರೂ., 5ವರ್ಷಕ್ಕಿಂತ ಹೆಚ್ಚು ವೃತ್ತಿ ಅನುಭವ ಹೊಂದಿದ್ದರೆ ಮಾಸಿಕ 68,000 ರೂ. ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 18.1.2021

ಅಧಿಸೂಚನೆಗೆ: https://bit.ly/38UCD4C

ಮಾಹಿತಿಗೆ: http://www.pfcindia.com

ಹೆಚ್ಚಿನ ಉದ್ಯೋಗದ ಮಾಹಿತಿಗೆ ಈ ಲಿಂಕ್​ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net