More

    ವಿವಿಧ ಪದವಿ, ಸ್ನಾತಕೋತ್ತರ ಪದವೀಧರರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ಜಿಲ್ಲೆಗಳಲ್ಲಿ ಖಾಲಿ ಇರುವ ತಾತ್ಕಾಲಿಕ 30 ಹುದ್ದೆಗಳಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ದೂರ ಶಿಕ್ಷಣದ ಮೂಲಕ ಪಡೆದಿದ್ದರೆ ಅಂಥವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಕಿರುಪಟ್ಟಿ ಮಾಡಲಾದ ಅಭ್ಯರ್ಥಿಗಳಿಗೆ ದೂರವಾಣಿ ಮುಖಾಂತರ ಸಂದರ್ಶನ ದಿನಾಂಕ ತಿಳಿಸಲಾಗುವುದು. ಸಂದರ್ಶನವು ಕೇಂದ್ರ ಕಚೇರಿ ಅಥವಾ ಆಯಾ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ವೀಡಿಯೋ ಸಂವಾದದ ಮೂಲಕ ನಡೆಸಲಾಗುವುದು. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು.

    ಹುದ್ದೆ ಸಂಖ್ಯೆ ವಿವರ
    * ರಾಜ್ಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕರು – 1
    * ಸ್ಟೇಟ್ ಡಬ್ಲ್ಯುಕ್ಯುಎಂಎಸ್ ಕನ್ಸಲ್ಟಂಟ್ – 2
    * ಸಪೋರ್ಟ್​ ಇಂಜಿನಿಯರ್ – 20
    * ಸಿಸ್ಟಮ್ ಅಡ್ಮಿನ್ – 1
    – ಜಿಲ್ಲಾ ಪಂಚಾಯಿತಿ ಕಚೇರಿ – ಜಲ ಜೀವನ ಮಿಷನ್
    * ಜಿಲ್ಲಾ ಯೋಜನಾ ವ್ಯವಸ್ಥಾಪಕ – 1
    – ಜಿಲ್ಲಾ ಪಂಚಾಯಿತಿ ಕಚೇರಿ – ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)
    * ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು (ಐಇಸಿ) – 1
    * ನೈರ್ಮಲ್ಯ ಹಾಗೂ ಶುಚಿತ್ವ ಸಮಾಲೋಚಕರು – 1
    * ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು – 1
    * ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಮಾಲೋಚಕರು – 1
    * ಮಾನವ ಸಂಪನ್ಮೂಲ ಅಭಿವೃದ್ಧಿ – 1

    ವಿದ್ಯಾರ್ಹತೆ: ಬಿಇ, ರೂರಲ್ ಡೆವಲಪ್‍ಮೆಂಟ್, ಸೋಷಿಯಲ್ ಸೈನ್ಸ್, ಮ್ಯಾನೇಜ್‍ಮೆಂಟ್, ಸೋಷಿಯಲ್ ವರ್ಕ್, ಮಾಸ್ ಕಮ್ಯುನಿಕೇಷನ್, ಜರ್ನಲಿಸಂ, ಪಬ್ಲಿಕ್ ಹೆಲ್ತ್, ಇಂಜಿನಿಯರಿಂಗ್ ಕೆಮಿಸ್ಟ್ರಿ, ಬಯೋಕೆಮಿಸ್ಟ್ರಿ, ಎನ್ವಿರಾನ್‍ಮೆಂಟಲ್ ಸೈನ್ಸ್‍ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ, ಎಂಸಿಎ, ಎಂಎಸ್ಸಿ ಜತೆ ವೃತ್ತಿ ಅನುಭವ ಅವಶ್ಯ.

    ವಯೋಮಿತಿ: 23.12.2020ಕ್ಕೆ ಗರಿಷ್ಠ 45 ವರ್ಷ.

    ವೇತನ: ಹುದ್ದೆಗೆ ಅನುಗುಣವಾಗಿ ಮಾಸಿಕ 22,000 ರೂ.ನಿಂದ 50,000 ರೂ. ವರೆಗೆ ಇದೆ.

    ಗುತ್ತಿಗೆ / ಹೊರಗುತ್ತಿಗೆ ಅವಧಿ: ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕ ಹುದ್ದೆಗಳಾಗಿದ್ದು, ಒಂದು ವರ್ಷದ ಅವಧಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಅವಧಿ ನವೀಕರಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನ: 11.1.2021

    ಅರ್ಜಿ ಸಲ್ಲಿಕೆ ವಿಳಾಸ: ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆಎಚ್‍ಬಿ ಕಟ್ಟಡ, ಕಾವೇರಿ ಭವನ, ಕೆಜಿ ರಸ್ತೆ, ಬೆಂಗಳೂರು-5600009
    ಅಧಿಸೂಚನೆಗೆ: https://bit.ly/3mJLZF6
    ಮಾಹಿತಿಗೆ: https://rdpr.karnataka.gov.in

    ಹೆಚ್ಚಿನ ಉದ್ಯೋಗದ ಮಾಹಿತಿಗೆ ಈ ಲಿಂಕ್​ ಕ್ಲಿಕ್ಕಿಸಿ

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಡಿಪ್ಲೋಮಾ, ಐಟಿಐ ಪದವೀಧರರಿಗೆ ದೇಶಾದ್ಯಂತ ಹಲವು ಹುದ್ದೆಗಳು ಖಾಲಿ

    ನಿರುದ್ಯೋಗಿಗಳಿಗೆ ಬಂಪರ್‌ ಅವಕಾಶ: ಅಂಚೆ ಇಲಾಖೆಯಲ್ಲಿದೆ 2443 ಹುದ್ದೆ- ಕರ್ನಾಟಕದಲ್ಲಿ ಕೆಲಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts