More

    ಡಿಪ್ಲೋಮಾ, ಐಟಿಐ ಪದವೀಧರರಿಗೆ ದೇಶಾದ್ಯಂತ ಹಲವು ಹುದ್ದೆಗಳು ಖಾಲಿ

    ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ನ (ಐಒಸಿಎಲ್) ವಿವಿಧ ಪ್ರಾದೇಶಿಕ ಕಚೇರಿಗಳ ಪೈಪ್‍ಲೈನ್ ವಿಭಾಗಗಳ 47  ಟೆಕ್ನಿಕಲ್ ಅಟೆಂಡೆಂಟ್ ಮತ್ತು ಇಂಜಿನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಅಸ್ಸಾಂ, ಬಿಹಾರ್, ಜಾರ್ಖಂಡ್, ಹರಿಯಾಣ, ಪಂಜಾಬ್, ಹಿಮಾಚಲಪ್ರದೇಶ, ಛತ್ತೀಸ್‍ಗಢ, ಒಡಿಶಾ, ಗುಜರಾತ್ ಹಾಗೂ ರಾಜಸ್ಥಾನಗಳ ಪ್ರಾದೇಶಿಕ ಕಚೇರಿಗಳಲ್ಲಿ ಉದ್ಯೋಗಾವಕಾಗಳಿವೆ. ಈ ಸ್ಥಳಗಳಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 31, ಎಸ್ಸಿಗೆ 7, ಎಸ್‍ಟಿಗೆ 4, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 4, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 1 ಅಂಗವಿಕಲರಿಗೆ 1, ಮಾಜಿ ಸೈನಿಕರಿಗೆ 4 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಹುದ್ದೆ ವಿವರ
    * ಇಂಜಿನಿಯರಿಂಗ್ ಅಸಿಸ್ಟೆಂಟ್
    – ಮೆಕ್ಯಾನಿಕಲ್
    – ಎಲೆಕ್ಟ್ರಿಕಲ್
    – ಟ್ರಾನ್ಸ್‌ಪೋರ್ಟೇಷನ್ ಆ್ಯಂಡ್ ಇನ್‍ಸ್ಟಾಲೇಷನ್
    – ಆಪರೇಷನ್ಸ್
    * ಟೆಕ್ನಿಕಲ್ ಅಟೆಂಡೆಂಟ್
    – ಎಲೆಕ್ಟ್ರಿಷಿಯನ್
    – ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್
    – ಫಿಟ್ಟರ್
    – ಇನ್‍ಸ್ಟ್ರುಮೆಂಟ್ ಮೆಕ್ಯಾನಿಕ್
    – ಮೆಷಿನಿಸ್ಟ್/ ಮೆಷಿನಿಸ್ಟ್ (ಗ್ರೈಂಡರ್)
    – ಮೆಕ್ಯಾನಿಕ್ ಕಂ ಆಪರೇಟರ್ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಸಿಸ್ಟಂ
    – ಟರ್ನರ್
    – ವೈರ್‍ಮೆನ್
    – ಡ್ರಾಟ್ಸ್‍ಮನ್ (ಮೆಕ್ಯಾನಿಕಲ್)
    – ಮೆಕ್ಯಾನಿಕ್ (ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್, ರೆಫ್ರಿಜರೇಟರ್ ಆ್ಯಂಡ್ ಏರ್‍ಕಂಡಿಷನರ್, ಡಿಸೇಲ್)
    – ಇನ್ಫೋರ್ಮೇಷನ್‌ ಟೆಕ್ನಾಲಜಿ ಆ್ಯಂಡ್ ಇಎಸ್‍ಎಂ

    ಶೈಕ್ಷಣಿಕ ಅರ್ಹತೆ: 3 ವರ್ಷಗಳ ಪೂರ್ಣಾವಧಿಯ ಡಿಪ್ಲೋಮಾ/ 2 ವರ್ಷಗಳ ಐಟಿಐ ನಂತರ ಒಂದು ವರ್ಷದ ಡಿಪ್ಲೋಮಾ, ಹುದ್ದೆಗೆ ಅನುಗುಣವಾಗಿ ಇಂಜಿನಿಯರಿಂಗ್ ಪದವಿ, ಎಸ್ಸೆಸ್ಸೆಲ್ಸಿ ನಂತರ ಹುದ್ದೆಗೆ ಅನುಗುಣವಾಗಿ ಐಟಿಐ ಕೋರ್ಸ್. ಕನಿಷ್ಠ ಶೇ.55 ಅಂಕ ಗಳಿಸಿರಬೇಕು.

    ವಯೋಮಿತಿ: 22.12.2020ಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 26ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ವೇತನ: ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗೆ ಮಾಸಿಕ 25,000 ರೂ.ನಿಂದ ಹಾಗೂ ಟೆಕ್ನಿಕಲ್ ಅಟೆಂಡೆಂಟ್‍ಗೆ ಮಾಸಿಕ 23,000 ರೂ.ನಿಂದ ವೇತನ ಇದ್ದು, ಡಿಎ, ಮನೆ ಬಾಡಿಗೆ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

    ಅರ್ಜಿ ಶುಲ್ಕ: ಎಸ್‍ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಗೆ 100 ರೂ. ಶುಲ್ಕ.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕೌಶಲ/ ಪ್ರಾವಿಣ್ಯತೆ/ ಭೌತಿಕ ಪರೀಕ್ಷೆ (ಎಸ್‍ಪಿಪಿಟಿ) ನಡೆಸಿ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇ.40 ಅಂಕ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳು ಶೇ.30 ಅಂಕ ಪಡೆಯಬೇಕು. ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ 14.02.2021.

    ಅರ್ಜಿ ಸಲ್ಲಿಸಲು ಕೊನೇ ದಿನ: 15.1.2021

    ಮಾಹಿತಿಗೆ: http://bit.ly/37P4WlF

    ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ.

    ವಿವಿಧ ಪದವೀಧರರಿಗೆ ಐಡಿಬಿಐ ಬ್ಯಾಂಕ್‌ನಲ್ಲಿವೆ 134 ಹುದ್ದೆಗಳು

    ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇವೆ ಫೈರ್ ಇಂಜಿನಿಯರ್ ಹುದ್ದೆಗಳು

    ನೌಕಾಪಡೆಯಲ್ಲಿ ನೌಕರಿಯ ಕನಸೀಗ ನನಸು- 210 ಹುದ್ದೆಗಳು ಖಾಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts