More

  ಸಾಹಿತ್ಯ ಸೃಷ್ಟಿಗೆ ಪ್ರಾಚೀನ ಕಾವ್ಯಗಳು ಪ್ರೇರಣೆ

  ಯಲ್ಲಾಪುರ: ಕಾವ್ಯ ಅಥವಾ ಸಾಹಿತ್ಯದ ಸಂಗತಿ ಮೂಲಕ ದೇಶವನ್ನು ಒಗ್ಗೂಡಿಸುವ ಕೆಲಸ ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

  ತಾಲೂಕಿನ ಮಂಚಿಕೇರಿಯ ಸಮಾಜ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕ, ಕಲಾವಿದ ಜಿ.ಟಿ. ಭಟ್ಟ ಬೊಮ್ಮನಹಳ್ಳಿ ಅವರ ಎಂಬತ್ತರ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಹಳೆಯ ಕಾವ್ಯ ಸಂಗತಿ ಬಳಸಿಕೊಂಡು ಹೊಸ ಮಾರ್ಗ ಬರೆದವರಿದ್ದಾರೆ. ಪ್ರಾಚೀನ ಕಾವ್ಯಗಳು ಸಾಹಿತ್ಯ ಸೃಷ್ಟಿಸಲು ಪ್ರೇರಣೆಯಾಗಿವೆ. ಇಂತಹ ಸಂಗತಿಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ನೆಲೆಯಲ್ಲಿ ಊರನ್ನು ಕಟ್ಟುವ ಪ್ರಯತ್ನವನ್ನು ಜಿ.ಟಿ. ಭಟ್ಟ ಮಾಡಿರುವುದು ಗಮನಾರ್ಹ ಎಂದರು.

  ’ಬೊಮ್ಮನಳ್ಳಿ ಜಂಗಮ’ ಅಭಿನಂದನಾ ಗ್ರಂಥವನ್ನು ಸಾಹಿತಿ ಜಯಂತ ಕಾಯ್ಕಿಣಿ ಬಿಡುಗಡೆ ಮಾಡಿದರು.
  ಬೆಂಗಳೂರು ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಅಹಲ್ಯಾ, ನಾಟಕ ರಂಗಭೂಮಿಯ ಕಲಾವಿದ ಚಿದಂಬರರಾವ್ ಜಂಬೆ, ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಭಾಗವಹಿಸಿದ್ದರು.

  ಜಿ.ಟಿ.ಭಟ್ಟ ಬೊಮ್ಮನಹಳ್ಳಿ ದಂಪತಿಯನ್ನು ಗೌರವಿಸಿ, ಅಭಿನಂದಿಸಲಾಯಿತು. ಹಾಸಣಗಿ ಸೊಸೈಟಿ ಅಧ್ಯಕ್ಷ ಆರ್.ಎನ್. ಹೆಗಡೆ ಗೊರ್ಸಗದ್ದೆ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನಾ ಸಮಿತಿಯ ಸಂಚಾಲಕ ಜಿ.ಎನ್. ಶಾಸ್ತ್ರೀ ಸ್ವಾಗತಿಸಿದರು. ರಂಗಕರ್ಮಿ ರಾಮಕೃಷ್ಣ ಭಟ್ಟ ದುಂಢಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟಕಿ ಜ್ಯೋತಿ ಭಟ್ಟ ನಿರ್ವಹಿಸಿದರು. ವಿಶ್ವನಾಥ ಭಾವನಕೊಪ್ಪ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts