More

    ಪಿಯುಸಿ ಪಾಸ್​ ಆಗಿರುವಿರಾ? ಹಾಗಿದ್ದರೆ ಬೆಂಗಳೂರಿನಲ್ಲಿ ಐಸಿಎಂಆರ್​ನಲ್ಲಿವೆ ಉದ್ಯೋಗ

    ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್‍ನ (ಐಸಿಎಂಆರ್) ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್​ಫಾರ್ಮೆಟಿಕ್​ ಆ್ಯಂಡ್ ರಿಸರ್ಚ್‍ನ (ಎನ್‍ಸಿಡಿಐಆರ್) ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಆರಂಭಿಸುತ್ತಿರುವ ಹೊಸ ಯೋಜನೆಗಳಿಗೆ ಅವಶ್ಯ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಐಸಿಎಂಆರ್- ಎನ್‍ಸಿಡಿಐಆರ್​ನ ಬೆಂಗಳೂರಿನ ಪ್ರಾದೇಶಿಕ ಕೇಂದ್ರದಲ್ಲಿ ಆಸ್ಪತ್ರೆ ಆಧಾರಿತ ಕ್ಯಾನ್ಸರ್ ನೋಂದಣಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕಾಗಿ ವಿವಿಧ ಹುದ್ದೆಗಳನ್ನು ಸೃಷ್ಟಿಸಲಾಗಿದ್ದು, ಇದಕ್ಕಾಗಿ ಕಂಪ್ಯೂಟರ್ ಜ್ಞಾನ ಹೊಂದಿರುವ, ಡೇಟಾ ಎಂಟ್ರಿ ತಿಳಿದಿರುವವರು ಅರ್ಜಿ ಸಲ್ಲಿಸಬಹುದು. ಜತೆಗೆ, ಮೂವರು ವೈದ್ಯಾಧಿಕಾರಿಗಳನ್ನು ಪ್ರಾಜೆಕ್ಟ್ ಸೈಂಟಿಸ್ಟ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಾಮಾನ್ಯ ವರ್ಗಕ್ಕೆ 6, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 2 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಹುದ್ದೆ, ಸಂಖ್ಯೆ ವಿವರ
    * ಕಂಪ್ಯೂಟರ್ ಪ್ರೋಗ್ರಾಮರ್ (ಗ್ರೇಡ್ ಬಿ) – 1
    * ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ) – 2
    * ಪ್ರಾಜೆಕ್ಟ್ ಅಸಿಸ್ಟೆಂಟ್ – 1
    * ಪ್ರಾಜೆಕ್ಟ್ ಸೈಂಟಿಸ್ಟ್ ಡಿ (ಸ್ಟಾೃಟಿಸ್ಟಿಕ್ಸ್) – 1
    * ಪ್ರಾಜೆಕ್ಟ ಸೈಂಟಿಸ್ಟ್ ಬಿ (ಮೆಡಿಕಲ್) – 3

    ಶೈಕ್ಷಣಿಕ ಅರ್ಹತೆ:
    ಪಿಯುಸಿ, ಬಿಇ, ಬಿ.ಟೆಕ್ – ಕಂಪ್ಯೂಟರ್ ಅಪ್ಲಿಕೇಷನ್/ ಇನ್ಫಾರ್ಮೇಷನ್ ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್, ಲೈಫ್​ ಸೈನ್ಸ್, ಸ್ಟ್ಯಾಟಿಸ್ಟಿಕ್ಸ್/ ಬಯೋಸ್ಟ್ಯಾಟಿಸ್ಟಿಕ್ಸ್/ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಎಂಬಿಬಿಎಸ್ ಜತೆ ಒಂದು ವರ್ಷದ ಸಂಶೋಧನಾ ಅನುಭವ ಅವಶ್ಯ. ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಕಂಪ್ಯೂಟರ್ ಸ್ಪೀಡ್ ಪರೀಕ್ಷೆ ನಡೆಸಲಾಗುವುದು.

    ವಯೋಮಿತಿ:
    ಹುದ್ದೆಗೆ ಅನುಗುಣವಾಗಿ ಗರಿಷ್ಠ 25 ವರ್ಷದಿಂದ 35 ವರ್ಷ. ಮೀಸಲಾತಿ ಅಭ್ಯರ್ಥಿಗಳ ವಯೋ ಸಡಿಲಿಕೆ ಸೇರಿಸಿ ಗರಿಷ್ಠ ವಯೋಮಿತಿ ಹೇಳಲಾಗಿದೆ.

    ವೇತನ:
    ಡೇಟಾ ಎಂಟ್ರಿ ಆಪರೇಟರ್​ಗೆ 17,000 ರೂ., ಪ್ರಾಜೆಕ್ಟ್ ಅಸಿಸ್ಟೆಂಟ್‍ಗೆ 31,000 ರೂ., ಕಂಪ್ಯೂಟರ್ ಪ್ರೋಗ್ರಾಮರ್​ಗೆ 32,500 ರೂ., ಪ್ರಾಜೆಕ್ಟ್ ಸೈಂಟಿಸ್ಟ್‍ಗಳಿಗೆ 61,000 – 70,000 ರೂ. ವರೆಗೆ ಗೌರವ ಧನ ನಿಗದಿ ಮಾಡಲಾಗಿದೆ.

    ಹುದ್ದೆಯ ವಿವರ:
    ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಟೈಪಿಂಗ್, ಡೇಟಾ ನಿರ್ವಹಣೆ ಮಾಡುವುದನ್ನು ತಿಳಿದಿರಬೇಕು. ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುವ, ಇತರ ಕೇಂದ್ರಗಳ ಜತೆ ಉತ್ತಮ ಸಂವಹನ ಮಾಡುವ, ಮಾನಿಟರಿಂಗ್, ಕೋ-ಆರ್ಡಿನೇಟಿಂಗ್, ಯೋಜನೆಗೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸುವ ಕೌಶಲ ಹೊಂದಿರಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 7.1.2021
    ಅಧಿಸೂಚನೆಗೆ: https://bit.ly/38XROtR
    ಮಾಹಿತಿಗೆ: http://www.ncdirindia.org

    ಹೆಚ್ಚಿನ ಉದ್ಯೋಗದ ಮಾಹಿತಿಗೆ ಈ ಲಿಂಕ್​ ಕ್ಲಿಕ್ಕಿಸಿ

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಡಿಪ್ಲೋಮಾ, ಐಟಿಐ ಪದವೀಧರರಿಗೆ ದೇಶಾದ್ಯಂತ ಹಲವು ಹುದ್ದೆಗಳು ಖಾಲಿ

    ನಿರುದ್ಯೋಗಿಗಳಿಗೆ ಬಂಪರ್‌ ಅವಕಾಶ: ಅಂಚೆ ಇಲಾಖೆಯಲ್ಲಿದೆ 2443 ಹುದ್ದೆ- ಕರ್ನಾಟಕದಲ್ಲಿ ಕೆಲಸ

    ವಿವಿಧ ಪದವಿ, ಸ್ನಾತಕೋತ್ತರ ಪದವೀಧರರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts