ಯುರೇನಿಯಂ ಸಂಸ್ಥೆಯಲ್ಲಿ ಮೈನಿಂಗ್‌ಮೇಟ್‌​ ಉದ್ಯೋಗಕ್ಕೆ ಆಹ್ವಾನ: 51 ಹುದ್ದೆಗಳಿಗೆ ಅರ್ಜಿ

udyoga- uranium
Published on

ಯುರೇನಿಯಂ ಕಾರ್ಪೋರೇಷನ್​ ಆಫ್‌ ಇಂಡಿಯಾ ಲಿಮಿಟೆಡ್​ (ಯುಸಿಐಎಲ್​) ಒಂದು ಸಾರ್ವಜನಿಕ ಉದ್ಯಮ ವಲಯವಾಗಿದ್ದು, ಪರಮಾಣು ಇಂಧನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಜಾರ್ಖಂಡ್​ನ ಘಟಕದಲ್ಲಿ ಮೈನಿಂಗ್​ ಮೇಟ್​ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಒಟ್ಟು ಹುದ್ದೆಗಳು: 51

ಯುಸಿಐಎಲ್​ನ ಮೈನಿಂಗ್​ ಮೇಟ್​ ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ, ಸಂಸ್ಥೆಯ ಅವಶ್ಯಕತೆ ಅನುಸಾರ ಅವಧಿ ವಿಸ್ತರಿಸಲಾಗುವುದು. ಅಭ್ಯರ್ಥಿಗಳು ದೈಹಿಕವಾಗಿ ಫಿಟ್​ ಇರಬೇಕು ಎಂದು ಸೂಚಿಸಲಾಗಿದೆ. ಹುದ್ದೆಗಳಲ್ಲಿ ಸರ್ಕಾರದ ನಿಯಮದನ್ವಯ ಮೀಸಲಾತಿ ಅನ್ವಯಿಸುತ್ತದೆ.

ವಿದ್ಯಾರ್ಹತೆ: ಇಂಟರ್​ಮೀಡಿಯೇಟ್​ ಜತೆ ಡಿಜಿಎಂಎಸ್​ನಿಂದ ನೀಡಲ್ಪಟ್ಟ ಕಾಂಪಿಟೆನ್ಸಿ ಫಾರ್​ ಮೆಟಲಿೆರಸ್​ ಮೈನ್ಸ್​ನಲ್ಲಿ ಮೈನಿಂಗ್​ ಮೇಟ್​ ಪ್ರಮಾಣಪತ್ರ ಪಡೆದಿರಬೇಕು. ಪ್ರಮಾಣ ಪತ್ರ ಪಡೆದ ನಂತರ ಅಂಡರ್​ಗ್ರೌಂಡ್​ ಮೆಟಲ್​ ಮೈನ್ಸ್​ನಲ್ಲಿ ಮೈನಿಂಗ್​ ಮೇಟ್​ ಆಗಿ ಕೆಲಸ ಮಾಡಿರುವ ಕನಿಷ್ಠ ಒಂದು ವರ್ಷದ ವೃತ್ತಿ ಅನುಭವ ಹೊಂದಿರಬೇಕು. ಅಭ್ಯರ್ಥಿಗಳಿಗೆ ಹಿಂದಿ/ ಸ್ಥಳಿಯ ಭಾಷೆ ತಿಳಿದಿರಬೇಕು.

ವಯೋಮಿತಿ: 30.4.2021ಕ್ಕೆ ಅನ್ವಯವಾಗುವಂತೆ ಸಾಮಾನ್ಯ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಎಸ್ಸಿ, ಎಸ್ಟಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ: ಮಾಸಿಕ 34,785 ರೂ. ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾಗುವುದು. ನಂತರ ಈ ಅಭ್ಯರ್ಥಿಗಳನ್ನು ಟ್ರೇಡ್​ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

ಸೂಚನೆ: ವೃತ್ತಿ ಅನುಭವ ಪ್ರಮಾಣಪತ್ರವನ್ನು ಸಂಬಂಧಪಟ್ಟ ಗಣಿ ವ್ಯವಸ್ಥಾಪಕರಿಂದ ಸರಿಯಾಗಿ ಪ್ರಮಾಣೀಕರಿಸಿ ಪಡೆದು ಸಲ್ಲಿಸತಕ್ಕದ್ದು. ಆಸಕ್ತ ಅಭ್ಯರ್ಥಿಗಳು ತಮ್ಮ ದೂರವಾಣಿ ಸಂಖ್ಯೆ, ಇಮೇಲ್​ ಐಡಿ, ಪ್ರಸ್ತುತ ವಿಳಾಸ, ಜಾತಿ ಪ್ರಮಾಣಪತ್ರ, ಶೈಕ್ಷಣಿಕ ದಾಖಲೆಗಳ ಪತ್ರಿ ಹಾಗೂ ಭಾವಚಿತ್ರವನ್ನು ಸ್ಪೀಡ್​ ಪೋಸ್ಟ್​ ಅಥವಾ ಕೊರಿಯರ್​ ಮೂಲಕ ಕಚೇರಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 10.6.2021

ಅರ್ಜಿಸಲ್ಲಿಕೆ ವಿಳಾಸ: General Manager(I/P&IRs/CP), Uranium Corporation of India Limited, PO : Jaduguda Mines, Dist: East Singhbhum, Jharkhand - 832 102

ಅಧಿಸೂಚನೆಗೆ: https://bit.ly/2TaCJRa

ಮಾಹಿತಿಗೆ: http://www.ucil.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net