ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ- ಆನ್‌ಲೈನ್‌ನಲ್ಲಿ ಸಂದರ್ಶನ: 45 ಸಾವಿರ ರೂ. ಸಂಬಳ

udyoga- pradeshi
Published on

ಭೋಪಾಲ್​ನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಆನ್​ಲೈನ್​ ಸಂದರ್ಶನ ಮೂಲಕ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು ಯೋಜನೆ ಆಧಾರಿತವಾಗಿದ್ದು, ಹುದ್ದೆಗಳಿಗೆ ಅನುಗುಣವಾಗಿ 11 ತಿಂಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ಒಟ್ಟು ಹುದ್ದೆಗಳು: 7

ಹುದ್ದೆ ವಿವರ

* ಕನ್ಸಲ್ಟಂಟ್​ - 1

ಯಾವುದೇ ಪದವಿ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ, ಅಕಾಡೆಮಿಕ್​, ಅಡ್ಮಿನಿಸ್ಟ್ರೆಷನ್​ ವೃತ್ತಿ ಅನುಭವ ಅವಶ್ಯವಿದ್ದು, 1.5.2021ಕ್ಕೆ ಗರಿಷ್ಠ 65ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಾಸಿಕ 45,000 ರೂ. ವೇತನ ಇದೆ.

* ಸಿಸ್ಟಮ್​ ಅನಾಲಿಸ್ಟ್​ - 1

ಕಂಪ್ಯೂಟರ್​ ಅಪ್ಲಿಕೇಷನ್ಸ್​, ಕಂಪ್ಯೂಟರ್​ ಸೈನ್ಸ್​, ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ/ ಬಿಇ, ಬಿಟೆಕ್​ ಮಾಡಿದ್ದು, 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 40,000ರೂ. ವೇತನ ನಿಗದಿಪಡಿಸಲಾಗಿದೆ. ಮೈಕ್ರೋಸಾಫ್ಟ್‌​ ಟೆಕ್ನಾಲಜಿಯಲ್ಲಿ ಜನರಲ್​, ನೆಟ್​ಕೋರ್​, ಎಂವಿಸಿ, ಎಂಟಿಟಿ ಫ್ರೇಮ್​ವರ್ಕ್​, ವೆಬ್​ಎಪಿಐ ಇತರ ವಿಷಯಗಳಲ್ಲಿ ಅನುಭವ ಇರಬೇಕು.

* ಪ್ರೋಗ್ರಾಮರ್​ - 3

ಕಂಪ್ಯೂಟರ್​ ಅಪ್ಲಿಕೇಷನ್ಸ್​, ಕಂಪ್ಯೂಟರ್​ ಸೈನ್ಸ್​, ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ/ ಬಿಇ, ಬಿಟೆಕ್​ ಮಾಡಿದ್ದು, 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 35,000ರೂ. ವೇತನ ನಿಗದಿಪಡಿಸಲಾಗಿದೆ. ಕಂಪ್ಯೂಟರ್​ ಜ್ಞಾನ ಅವಶ್ಯ.

* ಕಂಪ್ಯೂಟರ್​ ಅಸಿಸ್ಟೆಂಟ್​ - 2

ಬಿಸಿಎ, ಎಂಸಿಎ, ಬಿಇ ಅಧ್ಯಯನ ಮಾಡಿರುವ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರಾಗಿದ್ದು, ಎಂಎಸ್ಸಿ ಆಫೀಸ್​, ಆರ್​ಡಿಬಿಎಂಎಸ್​, ಗ್ರಾಫಿಕ್​ ಪ್ಯಾಕೇಜ್​ ಜ್ಞಾನ ಇರಬೇಕು. ಹಿಂದಿ, ಇಂಗ್ಲಿಷ್​ ಟೈಪಿಂಗ್​ ತಿಳಿದಿರಬೇಕು. ಮಾಸಿಕ 25,000 ರೂ. ವೇತನ ಇದೆ.

ಸಂದರ್ಶನಕ್ಕೆ ಹಾಜರಾಗುವ ದಿನಾಂಕ: 26.5.2021 (ಬೆಳಗ್ಗೆ 10 ಗಂಟೆಯಿಂದ)

ಅಧಿಸೂಚನೆಗೆ: https://bit.ly/33WwwL2

ಮಾಹಿತಿಗೆ: http://riebhopal.nic.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net