

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾನಲ್ಲಿ (ಎಸ್ಎಐ) ಅಸಿಸ್ಟೆಂಟ್ ಕೋಚ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯಥಿರ್ಗಳಿಂದ ಅಜಿರ್ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಒಟ್ಟು ಹುದ್ದೆಗಳು: 220
ಎಸ್ಎಐನಲ್ಲಿ ನೇಮಕ ಮಾಡಿಕೊಳ್ಳಲಾಗುವ ಅಸಿಸ್ಟೆಂಟ್ ಕೋಚ್ ಹುದ್ದೆಯು ಆರಂಭದಲ್ಲಿ 4 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಪ್ರತಿವರ್ಷದ ಅಭ್ಯಥಿರ್ಯ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು.
ಯಾವ ವಿಭಾಗಗಳಲ್ಲಿ ಹುದ್ದೆ?
*ಅರ್ಚರಿ - 13 * ಅಥ್ಲೆಟಿಕ್ಸ್ - 20 * ಬಾಕ್ಸಿಂಗ್ - 13 *ಹಾಕಿ - 13 *ಶೂಟಿಂಗ್ - 3 * ವೇಟ್ಲಿಫ್ಟಿಂಗ್ - 13 * ಕುಸ್ತಿ& 13 * ಸೈಕ್ಲಿಂಗ್ - 13 * ಫೆನ್ಸಿಂಗ್ - 13 * ಜೂಡೋ - 13 * ರೋಯಿಂಗ್ - 13 * ಸ್ವಿಮ್ಮಿಂಗ್ - 7 * ಟೇಬಲ್ ಟೆನಿಸ್ - 7 * ಬಾಸ್ಕೆಟ್ ಬಾಲ್ - 6 * ಫುಟ್ಬಾಲ್- & 10 * ಜಿಮ್ನಾಸ್ಟಿಕ್ಸ್ - 6 * ಹ್ಯಾಂಡ್ಬಾಲ್ - 3 * ಕಬಡ್ಡಿ ಮತ್ತು ಖೋ&ಖೋ - 7 * ಕರಾಟೆ - 4 * ಕಯಾಕಿಂಗ್ ಆ್ಯಂಡ್ ಕನೋಯಿಂಗ್ - 6 * ಸೆಪಕ್ ಟಕ್ರಾ - 5 * ಸ್ಟಾ್ಬಾಲ್ - 1 * ಟೆಕ್ವಾಂಡೋ - 6 * ವಾಲಿಬಾಲ್ - 6 ಹಾಗೂ ವುಶು ವಿಭಾಗದಲ್ಲಿ 6 ಹುದ್ದೆಗಳಿವೆ.
ವಿದ್ಯಾರ್ಹತೆ: ಎಸ್ಎಐ, ಎನ್ಎನ್ಐಎಸ್ ಅಥವಾ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೋಚಿಂಗ್ನಲ್ಲಿ ಡಿಪ್ಲೊಮಾ ಮಾಡಿರಬೇಕು. ಒಲಿಂಪಿಕ್/ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಅಥವಾ ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಅಭ್ಯಥಿಗಳು ಅರ್ಹರು.
ವಯೋಮಿತಿ: ಅಜಿರ್ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 40 ವರ್ಷ.
ವೇತನ: ಮಾಸಿಕ 41,420 ರೂ. ನಿಂದ 1,12,400 ರೂ. ವೇತನ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಶಾರ್ಟ್ಲಿಸ್ಟ್ ಮಾಡಲಾದ ಅಭ್ಯಥಿರ್ಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನ ದಿನಾಂಕ, ಸ್ಥಳ, ಸಮಯವನ್ನು ಎಸ್ಎಐ ವೆಬ್ಸೈಟ್ನಲ್ಲಿ ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 20.5.2021
ಅಧಿಸೂಚನೆಗೆ: https://bit.ly/3tC7koh
ಮಾಹಿತಿಗೆ: https://sportsauthorityofindia.nic.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/