ವಿವಿಧ ಪದವೀಧರರಿಗೆ ಸ್ಟೇಟ್​ ಬ್ಯಾಂಕ್​ ಆಫ್‌ ಇಂಡಿಯಾದಲ್ಲಿದೆ 18 ಹುದ್ದೆಗಳು

SBI
ಸಾಂದರ್ಭಿಕ ಚಿತ್ರ
Published on

ಸ್ಟೇಟ್​ ಬ್ಯಾಂಕ್​ ಆ್​ ಇಂಡಿಯಾದಲ್ಲಿ ಸ್ಪೆಷಲಿಸ್ಟ್​ ಕೇಡರ್​ ಆಫೀಸರ್​ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಶೈಕ್ಷಣಿಕ ಪ್ರಮಾಣಪತ್ರ, ವಯೋ ಪ್ರಮಾಣಪತ್ರ, ಗುರುತಿನ ಪತ್ರ ಹಾಗೂ ಇತರ ಅಗತ್ಯ ದಾಖಲೆಗಳನ್ನು ಆನ್​ಲೈನ್​ ಅರ್ಜಿ ಜತೆ ಸಲ್ಲಿಸಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಕಚೇರಿಗೆ ದಾಖಲೆಗಳನ್ನು ಕಳುಹಿಸುವ ಅವಶ್ಯಕತೆ ಇಲ್ಲ ಎಂದು ಸೂಚಿಸಲಾಗಿದೆ. ನೇಮಕ ಮಾಡಿಕೊಳ್ಳಲಾಗುತ್ತಿರುವ 18 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಆಭ್ಯಥಿರ್ಗೆ 11 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 1, ಇತರ ಹಿಂದುಳಿದ ವರ್ಗಕ್ಕೆ 3, ಎಸ್ಸಿಗೆ 3 ಸ್ಥಾನ ಮೀಸಲಿರಿಸಿದ್ದು, ತಲಾ ಒಂದೊಂದು ಹುದ್ದೆಯಲ್ಲಿ ಒಂದೊಂದು ಸ್ಥಾನವನ್ನು ಅಂಗವಿಕಲ ಅಭ್ಯರ್ಥಿಗೆ ಕಾಯ್ದಿರಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಬ್ಯಾಂಕ್​ನ ಯಾವುದೇ ಕಾಪೋರ್ರೇಟ್​ ಕೇಂದ್ರ ಅಥವಾ ಬ್ಯಾಂಕ್​ನ ಅವಶ್ಯಕತೆಗೆ ಅನುಗುಣವಾಗಿ ನೇಮಕ ಮಾಡಲಾಗುವುದು.
ಒಟ್ಟು ಹುದ್ದೆಗಳು: 18

ಹುದ್ದೆ ವಿವರ
* ಡೆಪ್ಯುಟಿ ಮ್ಯಾನೇಜರ್​ (ಅಗ್ರಿ ಸ್ಪೆಷಲಿಸ್ಟ್​) - 10
* ರಿಲೇಷನ್​ಷಿಪ್​ ಮ್ಯಾನೇಜರ್​ (ಒಎಂಪಿ) - 6
* ಪ್ರಾಡಕ್ಟ್​ ಮ್ಯಾನೇಜರ್​ (ಒಎಂಪಿ) - 2

ವಯೋಮಿತಿ: ಎಲ್ಲ ಹುದ್ದೆಗೂ 1.7.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ಶೈಕ್ಷಣಿಕ ಅರ್ಹತೆ: ಕಂಪ್ಯೂಟರ್​ ಸೈನ್ಸ್​/ ಐಟಿ/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ನಲ್ಲಿ ಬಿಇ/ ಬಿ.ಟೆಕ್​ ಜತೆ ರೂರಲ್​ ಮ್ಯಾನೇಜ್​ಮೆಂಟ್​/ ಅಗ್ರಿ ಬಿಜಿನೆಸ್​/ ಅಗ್ರಿಕಲ್ಚರ್​ನಲ್ಲಿ ಎಂಬಿಎ/ ಪಿಜಿಡಿಎಂ ಅನ್ನು ಪೂರ್ಣ ಅವಧಿಯಲ್ಲಿ ಅಧ್ಯಯನ ಮಾಡಿರಬೇಕು. ಅಲ್ಪಾವಧಿ, ದೂರಶಿಕ್ಷಣದ ಪದವಿಗೆ ಮಾನ್ಯತೆ ಇಲ್ಲ ಎಂದು ಸೂಚಿಸಲಾಗಿದೆ. ಹುದ್ದೆಗೆ ಅನುಗುಣವಾಗಿ ವೃತ್ತಿ ಅನುಭವ ಕೇಳಲಾಗಿದೆ. ಕಂಪ್ಯೂಟರ್​ ಜ್ಞಾನ, ಉತ್ತಮ ಸಂವಹನ ಕೌಶಲ್ಯ, ನಾಯಕತ್ವದ ಗುಣ, ಉತ್ತಮ ಸಂಬಂಧ ಬೆಳೆಸುವ ಕೌಶಲ, ವ್ಯವಹಾರ ಹಾಗೂ ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳುವ ಕೌಶಲ ಅಗತ್ಯ ಎಂದು ತಿಳಿಸಲಾಗಿದೆ.

ವೇತನ: ಡೆಪ್ಯುಟಿ ಮ್ಯಾನೇಜರ್​ಗೆ ಮಾಸಿಕ 48,170- 69,810 ರೂ. ಹಾಗೂ ಉಳಿದ ಹುದ್ದೆಗೆ ಮಾಸಿಕ 63,840- 78,230 ರೂ. ವೇತನ ಜತೆ ಡಿಎ, ಎಚ್​ಆರ್​ಎ, ಸಿಸಿಎ, ಪಿಎ್​, ಎಲ್​ಎ್​ಸಿ, ವೈದ್ಯಕಿಯ ಸೌಲಭ್ಯಗಳನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
ಅರ್ಜಿಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕ ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೇ ದಿನ: 2.9.2021
ಅಧಿಸೂಚನೆಗೆ: https://bit.ly/3mwvQ9s
ಮಾಹಿತಿಗೆ: sbi.co.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net