

ಕೇಂದ್ರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ನಲ್ಲಿ (ಎನ್ಐಒಎಸ್) ಹಲವು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹುದ್ದೆಗಳಿಗೆ ಅನುಗುಣವಾಗಿ ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಒಟ್ಟು ಹುದ್ದೆಗಳು: 112
ಹುದ್ದೆ ವಿವರ
- ಗ್ರೂಪ್ ಎ
* ಡೈರೆಕ್ಟರ್ (ಇವ್ಯಾಲುಯೇಷನ್) - 1
* ಜಾಯಿಂಟ್ ಡೈರೆಕ್ಟರ್ (ಮೀಡಿಯಾ) - 1
* ಡೆಪ್ಯುಟಿ ಡೈರೆಕ್ಟರ್ (ಅಕೌಂಟ್ಸ್) - 1
* ಅಸಿಸ್ಟೆಂಟ್ ಡೈರೆಕ್ಟರ್ (ಅಡ್ಮಿನಿಸ್ಟ್ರೆಷನ್) - 2
* ಅಕೌಂಟ್ಸ್ ಆಫೀಸರ್ - 1
* ಅಕಾಡೆಮಿಕ್ ಆಫೀಸರ್ - 17
* ರಿಸರ್ಚ್ ಆ್ಯಂಡ್ ಇವ್ಯಾಲುಯೇಷನ್ ಆಫೀಸರ್ - 1
- ಗ್ರೂಪ್ ಬಿ
* ಸೆಕ್ಷನ್ ಆಫೀಸರ್ - 7
* ಅಸಿಸ್ಟೆಂಟ್ ಇಂಜಿನಿಯರ್ (ಸಿವಿಲ್) - 1
* ಹಿಂದಿ ಆಫೀಸರ್ - 1
* ಅಸಿಸ್ಟೆಂಟ್ ಆಡಿಟ್ ಆಫೀಸರ್ - 1
* ಇಡಿಪಿ ಸೂಪರ್ವೈಸರ್ - 37
* ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) - 1
- ಗ್ರೂಪ್ ಸಿ
* ಅಸಿಸ್ಟೆಂಟ್ & 4
* ಸ್ಟೆನೋಗ್ರಾರ್ - 3
* ಜೂನಿಯರ್ ಅಸಿಸ್ಟೆಂಟ್ - 36
ವಿದ್ಯಾರ್ಹತೆ: ಪಿಯುಸಿ, ಪದವಿ, ಮಾಸ್ ಕಮ್ಯುನಿಕೇಷನ್, ಡಿೆನ್ಸ್ ಸ್ಟಡಿಸ್, ಇಂಗ್ಲಿಷ್, ಫೈನ್ ಆಟ್ಸ್, ಲಿಂಗ್ವಿಸ್ಟಿಕ್ಸ್, ಸೈಕಾಲಜಿ, ಸಂಸತ, ವಿಜ್ಞಾನ, ಸೋಷಿಯಲ್ ಸೈನ್ಸ್, ಸ್ಪೆಷಲ್ ಎಜುಕೇಷನ್, ಯೋಗ, ಸೆಕ್ಟ್ರೇಟರಿಯಲ್ ಪ್ರಾಕ್ಟೀಸ್, ಟೆಕ್ನಾಲಜಿ, ಕೃಷಿ, ಪ್ಯಾರಾ ಮೆಡಿಕಲ್ ಕೋರ್ಸ್, ಹೋಮ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಹುದ್ದೆಗೆ ಅನುಗುಣವಾಗಿ ವೃತ್ತಿ ಅನುಭವ ಕೇಳಲಾಗಿದೆ.
ವೇತನ: ಗ್ರೂಪ್ ಎ ಹುದ್ದೆಗಳಿಗೆ ಮಾಸಿಕ 56,100 - 2,15,900 ರೂ., ಗ್ರೂಪ್ ಬಿ ಹುದ್ದೆಗಳಿಗೆ ಮಾಸಿಕ 35,400- 1,42,400 ರೂ., ಗ್ರೂಪ್ ಸಿ ಹುದ್ದೆಗಳಿಗೆ 19,900- 81,100 ರೂ. ವೇತನ ಇದೆ.
ಅರ್ಜಿ ಶುಲ್ಕ: ಗ್ರೂಪ್ ಎ ಹುದ್ದೆಗಳಿಗೆ ಸಾಮಾನ್ಯ ವರ್ಗ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು 750 ರೂ., ಗ್ರೂಪ್ ಬಿ ಮತ್ತು ಸಿ ಹುದ್ದೆಗೆ 500 ರೂ., ಇತರ ಮೀಸಲಾತಿ ಅಭ್ಯರ್ಥಿಗಳು ಗ್ರೂಪ್ ಎ ಮತ್ತು ಬಿ ಗೆ 250 ರೂ., ಗ್ರೂಪ್ ಸಿ ಹುದ್ದೆಗೆ 150 ರೂ ಪಾವತಿಸತಕ್ಕದ್ದು.
ವಯೋಮಿತಿ: ಗರಿಷ್ಠ 27 ರಿಂದ 52 ವರ್ಷ ವಯೋಮಿತಿ ನಿಗದಿಯಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 10.10.2021
ಅಧೀಸೂಚನೆಗೆ: https://bit.ly/3AjFRed
ಮಾಹಿತಿಗೆ:http://nios.ac.in