More

    ವಿವಿಧ ಪದವೀಧರರಿಗೆ ಇಸ್ರೋದ ಉಪಗ್ರಹ ಕೇಂದ್ರದಿಂದ ಅರ್ಜಿ ಆಹ್ವಾನ- 18 ಹುದ್ದೆಗಳು ಖಾಲಿ

    ಉಪಗ್ರಹ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಇಸ್ರೋದ ಪ್ರಮುಖ ಕೇಂದ್ರವಾಗಿರುವ ಯು.ಆರ್​. ರಾವ್​ ಸ್ಯಾಟಲೈಟ್​ ಸೆಂಟರ್​ನ (ಯುಆರ್​ಎಸ್​ಸಿ) ಬೆಂಗಳೂರು ಕಚೇರಿಯಲ್ಲಿ ಜೂನಿಯರ್​ ರಿಸರ್ಚ್​ ಫೆಲೋ ಹಾಗೂ ರಿಸರ್ಚ್​ ಅಸೋಸಿಯೇಟ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಜೆಆರ್​ಎಫ್​ ಹುದ್ದೆಯು 2 ವರ್ಷದ ಅವಧಿಗೆ ಒಳಪಟ್ಟಿದ್ದು, ನಂತರ 5 ವರ್ಷದವರೆಗೆ ಅವಧಿ ವಿಸ್ತರಿಸಬಹುದಾಗಿದೆ. ಆರ್​ಎ ಹುದ್ದೆಯು 1 ವರ್ಷದ ಅವಧಿಗೆ ಒಳಪಟ್ಟಿದ್ದು, ನಂತರ ಗರಿಷ್ಠ 3 ವರ್ಷದವರೆಗೆ ಅವಧಿ ವಿಸ್ತರಿಸಬಹುದಾಗಿದೆ.

    ಹುದ್ದೆ ವಿವರ
    * ಜೂನಿಯರ್​ ರಿಸರ್ಚ್​ ಫೆಲೋ (ಜೆಆರ್​ಎಫ್‌​) – 16
    * ರಿಸರ್ಚ್​ ಅಸೋಸಿಯೇಟ್​ (ಆರ್​ಎ) – 2

    ಶೈಕ್ಷಣಿಕ ಅರ್ಹತೆ: ಜೆಆರ್​ಎಫ್‌​ಗೆ ನೆಟ್​ ಅಥವಾ ನೆಟ್​ ಸಮನಾದ ಪರೀಕ್ಷೆ ಉತ್ತೀರ್ಣರಾಗಿದ್ದು, ಫಿಜಿಕ್ಸ್​/ ಇಂಜಿನಿಯರಿಂಗ್​ ಫಿಜಿಕ್ಸ್​/ ಆಪ್ಟಿಕ್ಸ್​/ ಅಪ್ಲೆಡ್​ ಆಪ್ಟಿಕ್ಸ್​/ ಅಪ್ಲೆಡ್​ ಫಿಜಿಕ್ಸ್​/ ಸಾಲಿಡ್​ ಸ್ಟೇಟ್​ ಫಿಜಿಕ್ಸ್​, ಮೆಟಿರಿಯಲ್​ ಸೈನ್ಸ್​, ಆಸ್ಟ್ರೊ ಫಿಜಿಕ್ಸ್​/ ಪ್ಲಾನೆಟರಿ ಸೈನ್ಸ್​, ಕೆಮಿಸ್ಟ್ರಿಯಲ್ಲಿ ಎಂಎಸ್ಸಿ, ಎಲೆಕ್ಟ್ರಾನಿಕ್ಸ್​, ಕಂಪ್ಯೂಟರ್​ ಸೈನ್ಸ್​/ ಆಟಿರ್ಫಿಷಿಯಲ್​ ಇಂಟೆಲಿಜೆನ್ಸ್​, ಮಷಿನ್​ ಲರ್ನಿಂಗ್‌ ಡಾಟಾ ಅನಾಲಿಟಿಕ್ಸ್​, ಆಪ್ಟೊ-ಎಲೆಕ್ಟ್ರಾನಿಕ್ಸ್​/ ಇನ್​ಸ್ಟ್ರುಮೆಂಟೇಷನ್​ನಲ್ಲಿ ಎಂಇ/ ಎಂ.ಟೆಕ್​ ಮಾಡಿರಬೇಕು. ಆರ್​ಎ ಹುದ್ದೆಗೆ ಫಿಜಿಕ್ಸ್​/ ಆಪ್ಟಿಕ್ಸ್​/ ಅಪ್ಲೈಡ್​ ಆಪ್ಟಿಕ್ಸ್​/ ಆಪ್ಟೋ ಎಲೆಕ್ಟ್ರಾನಿಕ್ಸ್​, ಫಿಜಿಕ್ಸ್​/ ಸಾಲಿಡ್​ ಫಿಜಿಕ್ಸ್​ನಲ್ಲಿ ಪಿಎಚ್​.ಡಿ ಅಥವಾ ಎಂಇ/ ಎಂ.ಟೆಕ್​ ಮಾಡಿ 3 ವರ್ಷದ ವೃತ್ತಿ ಅನುಭವ ಇರುವವರು ಅರ್ಜಿಸಲ್ಲಿಸಬಹುದು.

    ವಯೋಮಿತಿ: 1.10.2021ಕ್ಕೆ ಅನ್ವಯವಾಗುವಂತೆ ಜೆಆರ್​ಎ್​ಗೆ ಗರಿಷ್ಠ 25 ವರ್ಷ, ಆರ್​ಎ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ಫೆಲೋಷಿಪ್​ : ಜೆಆರ್​ಎಫ್‌ಗೆ ಮಾಸಿಕ 31,000 ರೂ. ಹಾಗೂ ಆರ್​ಎಗೆ ಮಾಸಿಕ 47,000 ರೂ. ಫೆಲೋಷಿಪ್​ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ ಮೇಲ್​ ಮೂಲಕ ಸಂದರ್ಶನದ ದಿನಾಂಕ, ಆಹ್ವಾನ ಪತ್ರ ಕಳುಹಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 1.10.2021
    ಅಧಿಸೂಚನೆಗೆ: https://bit.ly/3hCdVLc
    ಮಾಹಿತಿಗೆ: http://www.isro.gov.in

    ಕ್ರೀಡಾಪಟುಗಳಿಗೆ ಗುಡ್‌ ನ್ಯೂಸ್‌: ಗಡಿ ಭದ್ರತಾ ಪಡೆಯಲ್ಲಿದೆ 269 ಹುದ್ದೆಗಳು

    ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಯುಪಿಎಸ್ಸಿಯಿಂದ ಅರ್ಜಿ ಆಹ್ವಾನ: 28 ಹುದ್ದೆಗಳು ಖಾಲಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts