More

    ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಯುಪಿಎಸ್ಸಿಯಿಂದ ಅರ್ಜಿ ಆಹ್ವಾನ: 28 ಹುದ್ದೆಗಳು ಖಾಲಿ

    ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಇಲಾಖೆಗಳ ಕೇಂದ್ರ ಕಚೇರಿ ಅಥವಾ ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ. ಅರ್ಜಿಸಲ್ಲಿಸುವಾಗ ಅಭ್ಯರ್ಥಿಗಳ ದಾಖಲೆ/ ಪ್ರಮಾಣಪತ್ರಗಳು ಹಿಂದಿ ಅಥವಾ ಇಂಗ್ಲಿಷ್​ ಹೊರತಾಗಿ ಬೇರೆ ಭಾಷೆಯಲ್ಲಿದ್ದರೆ ಆ ದಾಖಲೆಗಳಿಗೆ ಗೆಜೆಟೆಡ್​ ಅಧಿಕಾರಿ/ ನೋಟರಿ ದೃಢೀಕರಣ ಮಾಡಿದ ಪ್ರತಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 25 ರೂ. ಅರ್ಜಿಶುಲ್ಕ ಪಾವತಿಸಬೇಕು.

    ಹುದ್ದೆ ವಿವರ
    * ಪ್ರಾದೇಶಿಕ ನಿರ್ದೇಶಕ – 1
    * ಡೆಪ್ಯುಟಿ ಸೆಂಟ್ರಲ್​ ಇಂಟೆಲಿಜೆನ್ಸ್​ ಅಧಿಕಾರಿ (ಟೆಕ್ನಿಕಲ್​)- 10
    * ಸಹಾಯಕ ಪ್ರಾಧ್ಯಾಪಕ
    – ಕೆಮಿಸ್ಟ್ರಿ – 1
    – ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ – 1
    – ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​-2
    – ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಇನ್​ಸ್ಟ್ರುಮೆಂಟೇಷನ್​-1
    – ಮ್ಯಾಥಮೆಟಿಕ್ಸ್​ – 1
    – ಮ್ಯಾನು್ಯಾಕ್ಚರಿಂಗ್​ ಇಂಜಿನಿಯರಿಂಗ್​ – 1
    – ಮೆಕಾನಿಕಲ್​ ಇಂಜಿನಿಯರಿಂಗ್​ – 1
    * ಸೀನಿಯರ್​ ಸೈಂಟಿಫಿಕ್​ ಆಫೀಸರ್​ ಗ್ರೇಡ್​ -2 (ಎಲೆಕ್ಟ್ರಾನಿಕ್ಸ್​) – 3
    * ಜೂನಿಯರ್​ ರಿಸರ್ಚ್​ ಆಫೀಸರ್​ (ರಿಸರ್ಚ್​, ಸ್ಟಾ$ಟಿಸ್ಟಿಕ್ಸ್​ ಆ್ಯಂಡ್​ ಅನಲಿಸಿಸ್​) – 3
    * ಅಸಿಸ್ಟೆಂಟ್​ ಇಂಜಿನಿಯರ್​/ ಅಸಿಸ್ಟೆಂಟ್​ ಸರ್ವೇಯರ್​ (ವರ್ಕ್​ ಇಂಜಿನಿಯರಿಂಗ್​ ಅಸಿಸ್ಟಂಟ್​ ಸಿವಿಲ್​) – 3

    ಯಾವೆಲ್ಲ ಇಲಾಖೆಯಲ್ಲಿ ನೇಮಕಾತಿ?
    ಗಾಜಿಯಾಬಾದ್​ನಲ್ಲಿರುವ ರಾಷ್ಟ್ರೀಯ ಸಾವಯವ ಕೃಷಿ ಕೇಂದ್ರ, ಗುಪ್ತಚರ ದಳ, ನಾಗರಿಕ ಸಿಬ್ಬಂದಿ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನೌಕಾಪಡೆಯ ಸಮಗ್ರ ಕೇಂದ್ರ ಕಚೇರಿ, ಲೋಕೋಪಯೋಗಿ ಇಲಾಖೆ, ಕೇಂದ್ರ ಲೋಕಸೇವಾ ಆಯೋಗ, ರಕ್ಷಣಾ ಉತ್ಪಾದನೆ ಇಲಾಖೆಯ ಡೈರೆಕ್ಟೊರೇಟ್​ ಜನರಲ್​ ಕ್ವಾಲಿಟಿ ಅಶುರೆನ್ಸ್​ ಇಲಾಖೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

    ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ನಲ್ಲಿ ಬಿಇ/ಬಿ.ಟೆಕ್​/ ಬಿ.ಎಸ್ಸಿ, ಮೈಕ್ರೋಬಯಾಲಜಿ, ಸಸ್ಯಶಾಸ್ತ್ರ, ಕೃಷಿ, ಭೌತಶಾಸ್ತ್ರ, ಲೆಕ್ಕಶಾಸ್ತ್ರದಲ್ಲಿ ಎಂಎಸ್ಸಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.55 ಅಂಕ ಪಡೆದಿರಬೇಕು.

    ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30 ರಿಂದ 55 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 30.9.2021
    ಅಧಿಸೂಚನೆಗೆ: https://bit.ly/3A6e8O8
    ಮಾಹಿತಿಗೆ: http://www.upsc.gov.in

    ವಿವಿಧ ಪದವೀಧರರಿಗೆ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯಲ್ಲಿ ಭರಪೂರ ಉದ್ಯೋಗ- ಕೆಲವೇ ದಿನಗಳು ಬಾಕಿ

    ಪದವಿ ಯಾವುದೇ ಇರಲಿ- ಕೇಂದ್ರ ಸರ್ಕಾರದಲ್ಲಿದೆ 300 ಹುದ್ದೆ: 60 ಸಾವಿರ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts