

ಭೋಪಾಲ್ನಲ್ಲಿರುವ ಮೌಲಾನಾ ಆಜಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 107 ಸ್ಥಾನಗಳಿಗೆ ನೇಮಕಾತಿ ನಡೆಸಲಾಗುತ್ತಿದ್ದು, ಈ ಪೈಕಿ 27 ಬ್ಯಾಕ್ಲಾಗ್ ಹುದ್ದೆಗಳಾಗಿವೆ. ಮೂರು ಹಂತದ ವೇತನ ಶ್ರೇಣಿಯನ್ನು ಒಳಗೊಂಡಿದ್ದು, ಆರಂಭಿಕ ಕನಿಷ್ಠ ವೇತನವೇ 70,900 ರೂ. ಗಳಾಗಿವೆ.
ಒಟ್ಟು 107
* ವೇತನ ಶ್ರೇಣಿ
ಸಹಾಯಕ ಪ್ರಾಧ್ಯಾಪಕ- ಗ್ರೇಡ್- ಐಐ ಹುದ್ದೆಯು ಗ್ರೂಪ್ ಎ ಲೆವೆಲ್ 10ರ ವೇತನ ಶ್ರೇಣಿಯದ್ದಾಗಿದ್ದು, ಆರಂಭಿಕ ವೇತನ 70,900 ರೂ. ಇರಲಿದೆ. ಲೆವಲ್ 11ರ ಹುದ್ದೆಗಳಿಗೆ 73,100 ರೂ. ಆರಂಭಿಕ ವೇತನವಾಗಿದೆ. ಅಂತೆಯೇ ಗ್ರೇಡ್- ಐ ಹುದ್ದೆಯು ಲೆವಲ್ 12 ವೇತನ ಶ್ರೇಣಿ ಹೊಂದಿದ್ದು, ಆರಂಭಿಕ 101500 ರೂ. ವೇತನ ನೀಡಲಾುತ್ತದೆ.
* ಹುದ್ದೆಗಳ ವರ್ಗೀಕರಣ
ಸಾಮಾನ್ಯ ವರ್ಗಕ್ಕೆ 32, ಒಬಿಸಿ-22, ಎಸ್13, ಎಸ್ಟಿ 6, ಆರ್ಥಿಕ ಹಿಂದುಳಿದ ವರ್ಗಕ್ಕೆ 7 ಹುದ್ದೆಗಳನ್ನು ಮೀಸಲಿಡಲಾಗಿದೆ. ಒಟ್ಟು 27 ಹುದ್ದೆಗಳನ್ನು ಬ್ಯಾಕ್ಲಾಗ್ ಹುದ್ದೆಗಳೆಂದು ವಗಿರ್ಕರಿಸಲಾಗಿದೆ. ಒಟ್ಟಾರೆ ಹುದ್ದೆಗಳಲ್ಲಿ 8 ಸ್ಥಾನಗಳನ್ನು ಅಂಗವಿಕಲರಿಗಾಗಿ ಮೀಸಲಿಡಲಾಗಿದೆ.
ಎಸ್ಸಿ, ಎಸ್ಟಿ ಹಾಗೂ ಮಹಿಳೆಯರಿಗೆ ಅರ್ಜಿ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ. ಉಳಿದವರಿಗೆ 1200 ರೂ. ನಿಗದಿಪಡಿಸಲಾಗಿದೆ. ಅನಿವಾಸಿ ಅಥವಾ ವಿದೇಶದಲ್ಲಿರುವ ಭಾರತೀಯರು 50 ಡಾಲರ್ ಪಾವತಿಸತಕ್ಕದ್ದು.
* ಯಾವ ವಿಭಾಗದಲ್ಲಿ ಅವಕಾಶ
ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯನಿಕೇಷನ್, ಮೆಟಿರಿಯಲ್ ಆ್ಯಂಡ್ ಮೆಟಲಜಿರ್ಕಲ್ ಇಂಜಿನಿಯರಿಂಗ್, ಕೆಮಿಕಲ್, ಕಂಪ್ಯೂಟರ್ ಸೈನ್ಸ್, ಗಣಿತ, ಫಿಸಿಕ್ಸ್, ಕೆಮಿಸ್ಟ್ರಿ, ಆಕಿಟೆಕ್ಟರ್ ಆ್ಯಂಡ್ ಪ್ಲಾನಿಂಗ್, ಮಾನವಿಕ ಮತ್ತು ಸಮಾಜ ವಿಜ್ಞಾನ, ಕೃತಕ ಬುದ್ಧಿಮತ್ತೆ, ಪ್ರಾಡಕ್ಟ್ ಡಿಸೈನ್, ಮ್ಯಾನೇಜ್ಮೆಂಟ್ ಸ್ಟಡಿಸ್, ವಾಟರ್ ಮ್ಯಾನೇಜ್ಮೆಂಟ್ ಹಾಗೂ ಸೋಲಾರ್ ಎನಜಿರ್ ವಿಭಾಗದಲ್ಲಿ ಹುದ್ದೆಗಳು ಖಾಲಿ ಇವೆ.
* ವಿದ್ಯಾರ್ಹತೆ
ಅಭ್ಯರ್ಥಿಗಳು ಆಯಾ ವಿಷಯದಲ್ಲಿ ಬಿಇ, ಬಿ.ಟೆಕ್, ಪದವಿ, ಎಂಇ, ಎಂಟೆಕ್, ಎಂಎಸ್, ಸ್ನಾತಕೋತ್ತರ ಪದವಿ ಪಡೆದಿರಬೇಕು. ಗಣಿತ, ಕೃತಕ ಬುದ್ಧಿಮತ್ತೆ, ಪ್ರಾಡಕ್ಟ್ ಡಿಸೈನ್, ವಾಟರ್ ಮ್ಯಾನೇಜ್ಮೆಂಟ್ ಬೋಧನೆಗೆ ಪಿಎಚ್ಡಿ ಆಗಿರಬೇಕು.
* ಆಯ್ಕೆ ಪ್ರಕ್ರಿಯೆ ಹೀಗಿರಲಿದೆ
ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳು, ಸಾಧನೆ, ಸಂಶೋಧನೆ ಆಧಾರದಲ್ಲಿ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ನಂತರ ಬೋಧನೆಗೆ ಸಂಬಂಧಿಸಿದಂತೆ ಪ್ರೆಸೆಂಟೇಷನ್ ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಅಧಿಸೂಚನೆಗೆ: https://bit.ly/3BrTY1f
ಮಾಹಿತಿಗೆ: http://www.manit.ac.in/
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.15, 2021
ಅರ್ಜಿಗಳನ್ನು ಸಂಸ್ಥೆಯ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಕೈಬರಹ ಅಥವಾ ಟೈಪಿಂಗ್ ಮೂಲಕ ಭತಿರ್ ಮಾಡಿ ಸಂಸ್ಥೆ ವಿಳಾಸಕ್ಕೆ ಕೊನೆಯ ದಿನಕ್ಕೆ ತಲುಪುವಂತೆ ಕಳುಹಿಸತಕ್ಕದ್ದು.
ವಿಳಾಸ: “The Registrar, MANIT, Bhopal – 462003”