

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಖಾಲಿ ಇರುವ 241 ಸೆಕ್ಯುರಿಟಿ ಗಾರ್ಡ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
10ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಬಹುದು. ಜನವರಿ 1, 2021ರ ಅನ್ವಯ 25 ರಿಂದ 45 ವರ್ಷ ವಯೋಮಿತಿ ಇರುವವರು ಈ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.
ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10,940ರೂ ವೇತನವನ್ನು ನೀಡಲಾಗುವುದು. ಅರ್ಜಿದಾರರು 50 ರೂ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಿರುತ್ತದೆ.
ಜನರಲ್ ಮೆರಿಟ್- 113, ಒಬಿಸಿ- 45, ಇಡಬ್ಲ್ಯುಎಸ್-18, ಎಸ್ಸಿ-32 ಮತ್ತು ಎಸ್ಟಿ-33 ಮೀಸಲಾತಿ ಇದೆ.
ಅರ್ಹ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅಧಿಕೃತ ವೆಬ್ಸೈಟ್ https://www.rbi.org.in/ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ನಂತರ ಭರ್ತಿ ಮಾಡುವ ಮೂಲಕ ಫೆಬ್ರವರಿ 12,2021ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.
ಎಲ್ಲೆಲ್ಲಿ ಹುದ್ದೆ?
ಬೆಂಗಳೂರು- 12; ಅಹಮದಾಬಾದ್-7; ಭೋಪಾಲ್-10; ಭುವನೇಶ್ವರ-8; ಚಂಡೀಗಢ-2; ಚೆನ್ನೈ-22; ಗುವಾಹಟಿ-11; ಹೈದರಾಬಾದ್ 3; ಜೈಪುರ 10; ಜಮ್ಮು-4; ಕಾನ್ಪುರ-5, ಕೋಲ್ಕತಾ-15; ಲಖನೌ-5; ಮುಂಬೈ 84; ನಾಗ್ಪುರ-12; ನವದೆಹಲಿ- 17; ಪಟ್ನಾ-11; ತಿರುವನಂತಪುರಂ-3.
ರಿಜಿಸ್ಟರ್ ಮಾಡಿಕೊಳ್ಳಲು https://ibpsonline.ibps.in/rbirpsgdec20/
ಹೆಚ್ಚಿನ ಮಾಹಿತಿಗೆ: https://bit.ly/367Lpvu
ಹೆಚ್ಚಿನ ಉದ್ಯೋಗ ಮಾಹಿತಿಗೆ ನೋಡಿ https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/