ಹೈಸ್ಕೂಲ್​ ಪಾಸಾದವರಿಗೂ ಇಲ್ಲಿದೆ ಉದ್ಯೋಗ: ಬುಕ್​ ಟ್ರಸ್ಟ್​ನಲ್ಲಿವೆ ಅವಕಾಶ

udyoga
Published on

ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ (ಎನ್‍ಬಿಟಿಐ) ದೇಶದಲ್ಲಿ ಪುಸ್ತಕಗಳ ಪ್ರಕಾಶನ ಹಾಗೂ ಪುಸ್ತಕಗಳ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಪ್ರಸ್ತುತ ದೆಹಲಿಯಲ್ಲಿರುವ ಎನ್‍ಬಿಟಿ ಇಂಡಿಯಾದ ಮುಖ್ಯ ಕಚೇರಿ ಹಾಗೂ ಪ್ರಾದೇಶಿಕ ಕಚೇರಿಗಳಾದ ಕೋಲ್ಕತ್ತ, ಮುಂಬೈ, ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಒಟ್ಟು ಹುದ್ದೆಗಳು: 26. ಎನ್‍ಬಿಟಿಐನಲ್ಲಿನ ಹುದ್ದೆಗಳು 2 ವರ್ಷದ ಒಪ್ಪಂದಕ್ಕೆ ಒಳಪಟ್ಟಿವೆ. ಮೀಸಲಾತಿ ಅನ್ವಯ ನೇಮಕಾತಿ ನಡೆಯಲಿದೆ. ಸಂದರ್ಶನ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಾಗುತ್ತದೆ.

ಹುದ್ದೆ, ಸಂಖ್ಯೆ ವಿವರ

* ಅಸಿಸ್ಟೆಂಟ್ ಡೈರೆಕ್ಟರ್ - 2

* ಅಸಿಸ್ಟೆಂಟ್ ಡೈರೆಕ್ಟರ್ (ಪ್ರೊಡಕ್ಷನ್) - 1

* ಅಸಿಸ್ಟೆಂಟ್ ಎಡಿಟರ್ - 2

*ಪ್ರೊಡಕ್ಷನ್ ಅಸಿಸ್ಟೆಂಟ್ - 1

* ಎಡಿಟೋರಿಯಲ್ ಅಸಿಸ್ಟೆಂಟ್ - 3

* ಅಕೌಂಟೆಂಟ್ - 3

* ಸೀನಿಯರ್ ಸ್ಟೆನೋಗ್ರ್ರಾಫರ್ - 2

* ಅಸಿಸ್ಟೆಂಟ್ - 4

* ಲೈಬ್ರರಿಯನ್ - 1

* ಜೂನಿಯರ್ ಟ್ರಾನ್ಸ್‍ಲೇಟರ್ (ಹಿಂದಿ) - 1

* ಲೈಬ್ರರಿ ಅಸಿಸ್ಟೆಂಟ್ - 2

* ಜೂನಿಯರ್ ಆರ್ಟಿಸ್ಟ್ - 1

* ಡ್ರೈವರ್ - 3

ಶೈಕ್ಷಣಿಕ ಅರ್ಹತೆ: 8ನೇ ತರಗತಿ, ಎಸ್ಸೆಸ್ಸೆಲ್ಸಿ, ಪದವಿ, ಸ್ನಾತಕೋತ್ತರ ಪದವಿ, ಪುಸ್ತಕ ಪ್ರಕಾಶನದಲ್ಲಿ ಡಿಪ್ಲೋಮಾ, ಶಾರ್ಟ್‍ಹ್ಯಾಂಡ್ ಮತ್ತು ಟೈಪಿಂಗ್ ಕೋರ್ಸ್, ಕಮರ್ಷಿಯಲ್/ ಅಪ್ಲೈಡ್ ಆರ್ಟ್ ಕೋರ್ಸ್.

ಇತರ ಅರ್ಹತೆ: ಹುದ್ದೆಗೆ ಅನುಗುಣವಾಗಿ ಕನ್ನಡ/ ಹಿಂದಿ/ ಇಂಗ್ಲಿಷ್‍ನಲ್ಲಿ ಪ್ರಾವೀಣ್ಯತೆ, ಟೈಪೋಗ್ರಫಿ ಆ್ಯಂಡ್ ಲೇಔಟ್ ಕೌಶಲ, ಭಾರತೀಯ ಸಾಹಿತ್ಯ ಮತ್ತು ಸಂಸ್ಕತಿ ಬಗ್ಗೆ ಜ್ಞಾನ, ಸರ್ಕಾರದ ಆರ್ಥಿಕ ನಿಯಮಗಳ ಬಗ್ಗೆ ಜ್ಞಾನ ಹೊಂದಿರಬೇಕು.

ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 18 ವರ್ಷ, ಗರಿಷ್ಠ 25, 30, 35 ವರ್ಷ. ಇದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ಅರ್ಜಿ ಶುಲ್ಕ:ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯವರ್ಗದ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 15.2.2021

ಅರ್ಜಿ ಸಲ್ಲಿಸುವ ವಿಳಾಸ: Deputy Director (Establishment), National Book Trust, India, Nehru Bhawan, 5, Institutional Area, Phase-ll, Vasant Kunj, New Delhi -110 070

ಅಧಿಸೂಚನೆಗೆ: https://bit.ly/2XZz33L

ಮಾಹಿತಿಗೆ: http://www.nbtindia.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net