More

    ಕಾನೂನು ಪದವಿ ಕಲಿತಿರುವಿರಾ? ನ್ಯಾಷನಲ್ ಲಾ ಕಾಲೇಜಿನಲ್ಲಿ ಇವೆ ಉದ್ಯೋಗಾವಕಾಶ

    ಬೆಂಗಳೂರು: ಬೆಂಗಳೂರಿನ ನಾಗರಬಾವಿಯಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್​ ಇಂಡಿಯಾ ವಿಶ್ವವಿದ್ಯಾಲಯದಲ್ಲಿ (ಎನ್‍ಎಲ್‍ಎಸ್‍ಐಯು) ವಿವಿಧ ಬೋಧಕ ಹಾಗೂ ಬೋಧಕೇತರ ಹುದ್ದೆಗೆ ಅರ್ಜಿ ಅಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು ಹುದ್ದೆಗಳು: 12.

    ಪ್ರಾಪರ್ಟಿ ಲಾ, ಅಂತಾರಾಷ್ಟ್ರೀಯ ಕಾನೂನು, ಬಿಜಿನೆಸ್/ ಕಮರ್ಷಿಯಲ್/ ಕಂಪನಿ ಕಾನೂನು, ಲೇಬರ್ ಕಾನೂನು, ಜೂರಿಸ್​ಪ್ರುಡೆನ್ಸ್ ಆ್ಯಂಡ್ ಫಿಲಾಸಫಿ ಆಫ್​ ಲಾ, ಲಿಟಿಗೇಷನ್ ಅಡ್ವೊಕೆಸಿ, ಆಲ್ಟ್ರನೇಟೀವ್ ಡಿಸ್‍ಪ್ಯೂಟ್ ರೆಸಲ್ಯೂಷನ್, ಅಡ್ಮಿನಿಸ್ಟ್ರೇಟೀವ್ ಕಾನೂನು, ಇಂಟೆಲೆಕ್ಚುವಲ್ ಪ್ರಾಪರ್ಟಿ ಕಾನೂನು, ಎನ್ವಿರಾನ್‍ಮೆಂಟಲ್ ಕಾನೂನು ಮತ್ತು ಕಾನ್‍ಸ್ಟಿಟ್ಯೂಷನಲ್ ಕಾನೂನು ಕುರಿತು ಭೋಧನೆ ಮಾಡಲು ಅರ್ಹರಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಅಭ್ಯರ್ಥಿಯು ಕೆಲಸಕ್ಕೆ ದಾಖಲಾಗಿ 2 ವರ್ಷಗಳ ನಂತರ ಅವರ ಕಾರ್ಯಕ್ಷಮತೆ ಆಧರಿಸಿ ಶಾಶ್ವತ ಆಧಾರದ ಮೇಲೆ ಅಂದರೆ ಅಭ್ಯರ್ಥಿಗೆ 65 ವರ್ಷ ಆಗುವವರೆಗೆ ಕೆಲಸದಲ್ಲಿ ಇಟ್ಟುಕೊಳ್ಳಲಾಗುವುದು. ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಮೇಲ್ ಮೂಲಕ ಮಾಹಿತಿ ನೀಡಲಾಗುವುದು.

    ಹುದ್ದೆ, ಸಂಖ್ಯೆ ವಿವರ
    * ಪ್ರೊಫೆಸರ್ (ಕಾನೂನು) – 1
    * ಅಸಿಸ್ಟೆಂಟ್ ಪ್ರೊಫೆಸರ್ ಆಫ್​ ಲಾ – 6
    * ಅಸಿಸ್ಟೆಂಟ್ ಪ್ರೊಫೆಸರ್ (ಸೋಷಿಯಲ್ ಸೈನ್ಸ್) – 1
    * ಅಸೋಸಿಯೇಟ್ ಪ್ರೊಫೆಸರ್ – 1
    * ಪ್ರೊಫೆಸರ್- 1
    * ರಿಜಿಸ್ಟ್ರಾರ್ – 1
    * ಫೈನಾನ್ಸ್​ ಆಫೀಸರ್ – 1

    ವಿದ್ಯಾರ್ಹತೆ: ಕಾನೂನು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು (ಮೀಸಲಾತಿ ಅಭ್ಯರ್ಥಿಗೆ ಶೇ.5 ಅಂಕ ವಿನಾಯಿತಿ ಇದೆ)/ ಪಿಎಚ್‍ಡಿ, ನೆಟ್, ಸ್ಲೆಟ್/ಸೆಟ್ ಉತ್ತೀರ್ಣರಾದವರಿಗೆ ಮೊದಲ ಆದ್ಯತೆ. ಫೈನಾನ್ಸ್​ ಆಫೀಸರ್ ಹುದ್ದೆಗೆ ಪದವಿಯಲ್ಲಿ ಶೇ.60 ಅಂಕ ಪಡೆದಿರಬೇಕು.

    ವೇತನ: ಹುದ್ದೆಗಳಿಗೆ ಅನುಗುಣವಾಗಿ 7ನೇ ವೇತನ ಶ್ರೇಣಿ 10, 13 ಎ, 14, 14ಎ ಹಂತದ ವೇತನ ನಿಗದಿಯಾಗಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 24.1.2021
    ಅಧಿಸೂಚನೆಗೆ: http://bit.ly/39zBtvq
    ಮಾಹಿತಿಗೆ: https://www.nls.ac.in

    ಹೆಚ್ಚಿನ ಉದ್ಯೋಗ ಮಾಹಿತಿಗೆ ನೋಡಿ   https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಪದವೀಧರರು ಪಡೆಯಬಹುದು ₹62 ಸಾವಿರ ವೇತನ- ಇಸಿಜಿಸಿನಲ್ಲಿ ಪ್ರೊಬೇಷನರಿ ಆಫೀಸರ್ಸ್​ ನೇಮಕ

    ಎಚ್‍ಎಎಲ್ ಶಿಕ್ಷಣ ಸಂಸ್ಥೆಯಲ್ಲಿ ಬೋಧಕ- ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಅಂಗನವಾಡಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ- 81 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts