More

    ಎಚ್‍ಎಎಲ್ ಶಿಕ್ಷಣ ಸಂಸ್ಥೆಯಲ್ಲಿ ಬೋಧಕ- ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಹೆಲಿಕಾಪ್ಟರ್ ಕಾಂಪ್ಲೆಕ್ಸ್ ನಡೆಸುತ್ತಿರುವ ಎಚ್‍ಎಎಲ್ ಎಜುಕೇಷನ್ ಕಮಿಟಿಯು ಬೆಂಗಳೂರಿನಲ್ಲಿರುವ ಎಚ್‍ಎಎಲ್ ಶಾಲೆಗೆ ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಒಟ್ಟು ಹುದ್ದೆಗಳು: 27.

    ಬೆಂಗಳೂರಿನಲ್ಲಿರುವ ಎಚ್‍ಎಎಲ್ ಸ್ಕೂಲ್‍ಗೆ (ಸಿಬಿಎಸ್‍ಇ/ಐಸಿಎಸ್‍ಇ) 2020-21ರ ಶೈಕ್ಷಣಿಕ ವರ್ಷಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು 5 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ, ಸಂಸ್ಥೆಯ ಅವಶ್ಯಕತೆಗೆ ತಕ್ಕಂತೆ ಅವಧಿ ವಿಸ್ತರಿಸಲಾಗುವುದು.

    ವಿಷಯ ಸಂಖ್ಯೆ
    * ಕನ್ನಡ: ಪಿಆರ್​ಟಿ-2
    * ಹಿಂದಿ: ಟಿಜಿಟಿ-1, ಪಿಆರ್‍ಟಿ – 3
    * ಇಂಗ್ಲಿಷ್: ಟಿಜಿಟಿ-1, ಪಿಆರ್​ಟಿ-1
    * ಗಣಿತ: ಟಿಜಿಟಿ-2, ಪಿಆರ್​ಟಿ -3
    * ವಿಜ್ಞಾನ: ಟಿಜಿಟಿ-2, ಪಿಆರ್​ಟಿ -2
    * ಸೋಷಿಯಲ್ ಸ್ಟಡೀಸ್: ಟಿಜಿಟಿ – 2
    * ಕೆಮಿಸ್ಟ್ರಿ : ಪಿಜಿಟಿ – 1
    * ಕಂಪ್ಯೂಟರ್ ಸೈನ್ಸ್: ಪಿಆರ್​ಟಿ – 1
    * ಫಿಜಿಕಲ್ ಎಜುಕೇಷನ್ : ಪಿಆರ್​ಟಿ – 2
    * ಸಂಗೀತ : ಪಿಆರ್​ಟಿ – 1
    * ಆರ್ಟ್ ಆ್ಯಂಡ್ ಕ್ರಾಫ್ಟ್​: ಪಿಆರ್​ಟಿ – 1
    * ಲೈಬ್ರರಿಯನ್ : ಪಿಆರ್​ಟಿ – 1
    * ಕೌನ್ಸೆಲರ್: ಪಿಆರ್​ಟಿ – 1
    * ಜೂನಿಯರ್ ಆಫೀಸ್ ಅಸಿಸ್ಟೆಂಟ್ (ಜೆಒಎ)- 1
    (ಪಿಆರ್‍ಟಿ- ಪ್ರಾಥಮಿಕ ಶಿಕ್ಷಕಿ, ಟಿಜಿಟಿ-ಟ್ರೇನ್ಡ್ ಗ್ರಾಜುಯೇಟ್ ಟೀಚರ್, ಪಿಜಿಟಿ-ಪೋಸ್ಟ್ ಗ್ರಾಜುಯೇಟ್ ಟೀಚರ್)

    ವಿದ್ಯಾರ್ಹತೆ: ಬೋಧನ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, 3 ವರ್ಷದ ಬಿ.ಇಡಿ ಪದವಿ. ಜೂನಿಯರ್ ಆಫೀಸರ್ ಅಸಿಸ್ಟೆಂಟ್ ಹುದ್ದೆಗೆ ಬಿಕಾಂ ಪದವಿ ಜತೆ ಕಂಪ್ಯೂಟರ್ ಜ್ಞಾನ, ಟ್ಯಾಲಿ ತಿಳಿದಿರಬೇಕು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಹಾಗೂ ಬರವಣಿಗೆ ತಿಳೀದಿರಬೇಕು. ವೃತ್ತಿ ಅನುಭವ ಅವಶ್ಯ. ಪದವಿಗಳಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು.

    ವಯೋಮಿತಿ: ಪಿಜಿಟಿಗೆ ಗರಿಷ್ಠ 50 ವರ್ಷ, ಟಿಜಿಟಿ, ಪಿಆರ್‍ಟಿಗೆ 45, ಜೆಒಎಗೆ ಗರಿಷ್ಠ 35 ವರ್ಷ.

    ಆಯ್ಕೆ ಪ್ರಕ್ರಿಯೆ: ಬೋಧಕ ಹುದ್ದೆಗೆ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ನಂತರ ಡೆಮೋ ಪರೀಕ್ಷೆ ಹಾಗೂ ಸಂದರ್ಶನ ನಡೆಸಲಾಗುವುದು. ಬೋಧಕೇತರ ಹುದ್ದೆಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯ ಸ್ಥಳ, ದಿನಾಂಕವನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಮೇಲ್ ಮೂಲಕ ತಿಳಿಸಲಾಗುವುದು.

    ವೇತನ: ಪಿಜಿಟಿಗೆ ಮಾಸಿಕ 71,000 ರೂ., ಟಿಜಿಟಿಗೆ 67,500 ರೂ., ಪಿಆರ್‍ಟಿಗೆ 54,000 ರೂ., ಜೆಒಎಗೆ 30,000 ರೂ. ವೇತನ ಇದೆ.

    ಅರ್ಜಿ ಶುಲ್ಕ: ಅಭ್ಯರ್ಥಿಗಳು 200 ರೂ. ಪಾವತಿಸಬೇಕು. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೂ ಪ್ರತ್ಯೇಕ ಶುಲ್ಕ ಪಾವತಿಸತಕ್ಕದ್ದು.

    ಅರ್ಜಿ ಸಲ್ಲಿಸಲು ಕೊನೇ ದಿನ: 30.1.2021
    ಅರ್ಜಿ ಸಲ್ಲಿಸುವ ವಿಳಾಸ: http://Secretary, HAL Gnanajyoti School, HAL East Extension Township, GBJ Colony, Marathahalli Post, Bangalore – 560037
    ಅಧಿಸೂಚನೆಗೆ: https://bit.ly/3if1HqZ
    ಮಾಹಿತಿಗೆ:http://www.halec.co.in

    ಹೆಚ್ಚಿನ ಉದ್ಯೋಗ ಮಾಹಿತಿಗೆ ನೋಡಿ   https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಪದವೀಧರರು ಪಡೆಯಬಹುದು ₹62 ಸಾವಿರ ವೇತನ- ಇಸಿಜಿಸಿನಲ್ಲಿ ಪ್ರೊಬೇಷನರಿ ಆಫೀಸರ್ಸ್​ ನೇಮಕ

    ಅಂಗನವಾಡಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ- 81 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts