More

    ಪದವೀಧರರು ಪಡೆಯಬಹುದು ₹62 ಸಾವಿರ ವೇತನ- ಇಸಿಜಿಸಿನಲ್ಲಿ ಪ್ರೊಬೇಷನರಿ ಆಫೀಸರ್ಸ್​ ನೇಮಕ

    ಎಕ್ಸ್​ಪೋರ್ಟ್​ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್​ ಆಫ್ ಇಂಡಿಯಾ (ಇಸಿಜಿಸಿ) ಲಿಮಿಟೆಡ್ ಪ್ರೊಬೇಷನರಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಅಧಿಸೂಚನೆ ಹೊರಡಿಸಿದೆ. ಒಟ್ಟು ಹುದ್ದೆಗಳು: 59.

    ಇಸಿಜಿಸಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ 59 ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 25 ಸ್ಥಾನ, ಎಸ್ಸಿಗೆ 9, ಎಸ್ಟಿಗೆ 4, ಇತರ ಹಿಂದುಳಿದ ವರ್ಗಕ್ಕೆ 16, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 5 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ 4 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಕರೊನಾ ಮಾರ್ಗಸೂಚಿ ಪಾಲಿಸಬೇಕೆಂದು ಸೂಚನೆ ನೀಡಲಾಗಿದೆ.

    ಶೈಕ್ಷಣಿಕ ಅರ್ಹತೆ: ಯಾವುದೇ ಪದವಿ ಹೊಂದಿರಬೇಕು. ವ್ಯಾಸಂಗ ಮಾಡುತ್ತಿದ್ದಲ್ಲಿ ಫಲಿತಾಂಶವು 31.1.2021ರ ಒಳಗೆ ಪ್ರಕಟವಾಗಿರಬೇಕು.

    ವಯೋಮಿತಿ: 1.1.2021ಕ್ಕೆ ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳಿಗೆ ಬೆಂಗಳೂರು ಸೇರಿ ನಿಗದಿ ಪಡಿಸಿರುವ 20 ನಗರಗಳಲ್ಲಿ ಆನ್‍ಲೈನ್ ಪರೀಕ್ಷೆ ನಡೆಸಲಾಗುವುದು. ಆನ್‍ಲೈನ್ ಪರೀಕ್ಷೆಯಲ್ಲಿ ರೀಸನಿಂಗ್ ಎಬಿಲಿಟಿ, ಇಂಗ್ಲಿಷ್ ಭಾಷೆ, ಕಂಪ್ಯೂಟರ್ ಜ್ಞಾನ, ಸಾಮಾನ್ಯ ಜ್ಞಾನ, ಕ್ವಾಂಟಿಟೇಟೀವ್ ಆಪ್ಟಿಟ್ಯೂಡ್ ಸಂಬಂಧಿತ ಪ್ರಶ್ನೆಗಳನ್ನು ಕೇಳಲಾಗುವುದು. 2ನೇ ಪತ್ರಿಕೆಯಲ್ಲಿ ಪ್ರಬಂಧ ಲೇಖನ ಹಾಗೂ ಸಂಕ್ಷಿಪ್ತ ಬರವಣಿಗೆ ಬಗ್ಗೆ ಪ್ರಶ್ನೆಗಳಿರುತ್ತವೆ. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕ ಇರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಮುಂಬೈನಲ್ಲಿ ನಡೆಯುವ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 125 ರೂ. ಶುಲ್ಕವಿದ್ದು, ಇತರ ಉಳಿದ ಅಭ್ಯರ್ಥಿಗಳು 700 ರೂ. ಶುಲ್ಕವನ್ನು ಆನ್‍ಲೈನ್ ಮೂಲಕ ಪಾವತಿಸತಕ್ಕದ್ದು.

    ವೇತನ: ಪ್ರೊಬೆಷನರಿ ಅಧಿಕಾರಿಗಳಿಗೆ ಮಾಸಿಕ 32,795 ರೂ.ನಿಂದ 62,315 ರೂ. ವೇತನ ಜತೆ ಡಿಎ, ಮನೆ ಬಾಡಿಗೆ ಭತ್ಯೆ, ಪ್ರವಾಸ ಭತ್ಯೆ, ವೈದ್ಯಕೀಯ, ದಿನಪತ್ರಿಕೆ, ಊಟ, ಮೊಬೈಲ್, ಪೀಠೋಪಕರಣ ಹಾಗೂ ಇತರ ಹಲವು ಭತ್ಯೆಗಳನ್ನು ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 31.1.2021
    ಅಧಿಸೂಚನೆಗೆ: https://bit.ly/3oNdkIm
    ಮಾಹಿತಿಗೆ: http://www.ecgc.in

    ಹೆಚ್ಚಿನ ಉದ್ಯೋಗ ಮಾಹಿತಿಗೆ ನೋಡಿ   https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಅಂಗನವಾಡಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ- 81 ಹುದ್ದೆಗಳಿಗೆ ಆಹ್ವಾನ

    ಎಸ್​ಎಸ್​ಎಲ್​ಸಿ ಕಲಿತವರಿಗೂ ಗುಡ್​ನ್ಯೂಸ್​: ಬೆಂಗಳೂರಿನ ಮಿಲಿಟರಿ ಶಾಲೆಯಲ್ಲಿದೆ ಉದ್ಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts