ರಸಗೊಬ್ಬರ ಕಂಪನಿಯಲ್ಲಿ 358 ಹುದ್ದೆಗಳು: ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆ ದಿನ

udyoga
Published on

ದೇಶದ ಪ್ರಮುಖ ರಸಗೊಬ್ಬರ ಮತ್ತು ರಾಸಾಯನಿಕ ಉತ್ಪಾದನಾ ಕಂಪನಿಯಾಗಿರುವ ಮುಂಬೈ ರಾಷ್ಟ್ರೀಯ ಕೆಮಿಕಲ್ ಆ್ಯಂಡ್ ಫರ್ಟಿಲೈಸರ್ಸ್ ಲಿಮಿಟೆಡ್‍ನಲ್ಲಿ (ಆರ್​ಸಿಎಫ್) ಟ್ರೇಡ್ ಅಪ್ರೆಂಟೀಸ್ ಸ್ಥಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 358 ಹುದ್ದೆಗಳು ಇವೆ.

ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಆಯ್ದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುವುದು. 10ನೇ ತರಗತಿ ಅಭ್ಯರ್ಥಿಗಳಿಗೆ ಮಾಸಿಕ 7,000 ರೂ., ಟೆಕ್ನಿಷಿಯನ್ ಅಪ್ರೆಂಟೀಸ್/ ಡಿಪೆÇ್ಲಮಾ ಮಾಡಿದವರಿಗೆ ಮಾಸಿಕ 8,000 ರೂ., ಪದವಿ ಅಪ್ರೆಂಟೀಸ್‍ಗೆ ಮಾಸಿಕ 9,000 ರೂ. ಸ್ಟೈಪೆಂಡ್ ನೀಡಲಾಗುವುದು.

- ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಪ್ರಾದೇಶಿಕ ನಿರ್ದೇಶನಾಲಯದ (ಆರ್‍ಡಿಎಸ್‍ಡಿಇ) ಅಧೀನದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ 291 ಟ್ರೇಡ್ ಅಪ್ರೆಂಟೀಸ್‍ಗಳ ವಿವರ ಹಾಗೂ ಸ್ಥಾನಗಳು.

* ಅಟೆಂಡೆಂಟ್ ಆಪರೇಟರ್ ಕೆಮಿಕಲ್ ಪ್ಲಾಂಟ್ (ಎಒಸಿಎಫ್​) - 98

* ಲ್ಯಾಬೊರೇಟರಿ ಅಟೆಂಡೆಂಟ್ ಕೆಮಿಕಲ್ ಪ್ಲಾಂಟ್ (ಎಲ್‍ಎಸಿಎಫ್​) - 7

* ಇನ್‍ಸ್ಟ್ರುಮೆಂಟ್ ಮೆಕ್ಯಾನಿಕ್ ಕೆಮಿಕಲ್ ಪ್ಲಾಂಟ್ (ಐಎಂಸಿಎಫ್​) - 7

* ಮೈಂಟೇನೆನ್ಸ್ ಮೆಕ್ಯಾನಿಕ್ ಕೆಮಿಕಲ್ ಪ್ಲಾಂಟ್ (ಎಂಎಂಸಿಪಿ) - 7

* ಎಲೆಕ್ಟ್ರಿಷಿಯನ್ - 3

* ಬಾಯ್ಲರ್ ಅಟೆಂಡೆಂಟ್ - 4

* ಮಷಿನಿಸ್ಟ್ - 1

* ವೆಲ್ಡರ್ (ಗ್ಯಾಸ್ ಆ್ಯಂಡ್ ಎಲೆಕ್ಟ್ರಿಕ್) - 1

* ಸ್ಟೆನೋಗ್ರಾಫರ್ (ಇಂಗ್ಲಿಷ್) - 40

* ಸಕ್ರೇಟರಿಯಲ್ ಅಸಿಸ್ಟೆಂಟ್ - 50

* ಹಾರ್ಟಿಕಲ್ಚರ್ ಅಸಿಸ್ಟೆಂಟ್ - 8

* ಹೌಸ್‍ಕೀಪರ್ (ಆಸ್ಪತ್ರೆ) - 8

* ಫುಡ್​ ಪ್ರೊಡಕ್ಷನ್ (ಜನರಲ್) - 1

* ಎಕ್ಸಿಕ್ಯೂಟೀವ್ (ಹ್ಯುಮನ್ ರಿಸೋರ್ಸ್, ಮಾರ್ಕೇಟಿಂಗ್ ಟ್ರೈನೀ, ಫೈನಾನ್ಸ್ ಆ್ಯಂಡ್ ಅಕೌಂಟ್ ಟ್ರೈನೀ) - 36

* ಅಕೌಂಟೆಂಟ್ - 10

* ರಿಕ್ರೂಟ್‍ಮೆಂಟ್ ಎಕ್ಸಿಕ್ಯೂಟೀವ್ (ಹ್ಯೂಮನ್ ರಿಸೋರ್ಸ್ ಟ್ರೈನೀ) - 8

* ಮೆಡಿಕಲ್ ಲ್ಯಾಬ್ ಟೆಕ್ನೀಷಿಯನ್ (ಪಾಥೋಲಜಿ) - 2

- ಬೋರ್ಡ್ ಆಫ್​ ಅಪ್ರೆಂಟೀಸ್ ಟ್ರೈನಿಂಗ್ (ಬಿಒಎಟಿ) ಅನ್ವಯ ನೇಮಕ ಮಾಡಿಕೊಳ್ಳಲಾಗುತ್ತಿರುವ 67 ಡಿಪ್ಲೋಮಾ ಟ್ರೇಡ್ ಅಪ್ರೆಂಟೀಸ್‍ಗಳೂ.

* ಕೆಮಿಕಲ್ - 19

* ಮೆಕ್ಯಾನಿಕಲ್ - 18

* ಎಲೆಕ್ಟ್ರಿಕಲ್ - 12

* ಇನ್‍ಸ್ಟ್ರುಮೆಂಟೇಷನ್ - 8

* ಸಿವಿಲ್ - 3

* ಕಂಪ್ಯೂಟರ್ - 2

* ಮೆಡಿಕಲ್ ಲ್ಯಾಬ್ ಟೆಕ್ನೀಷಿಯನ್ - 5

ವಿದ್ಯಾರ್ಹತೆ:

ಹುದ್ದೆಗೆ ಅನುಗುಣವಾಗಿ 8ನೇ ತರಗತಿ, ಎಚ್‍ಎಸ್‍ಸಿ, ಎಸ್‍ಎಸ್‍ಸಿ, ಎಸ್ಸೆಸ್ಸೆಲ್ಸಿ, ಡಿಪೆÇ್ಲಮಾ, ಪದವಿ, ಬಿಎಸ್‍ಸಿ, ಎಂಬಿಎ, ಎಂಎಸ್‍ಡಬ್ಲ್ಯು

ವಯೋಮಿತಿ:

ಹುದ್ದೆಗೆ ಅನುಗುಣವಾಗಿ ಕನಿಷ್ಠ 18 ರಿಂದ ಗರಿಷ್ಠ 21 ರಿಂದ 25 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 22.12.2020

ಅಧಿಸೂಚನೆಗೆ: https://bit.ly/3gsrhIb

ಮಾಹಿತಿಗೆ: http://www.rcfltd.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net