More

    ನೀವು ಪದವೀಧರರಾ? ಹಾಗಿದ್ದರೆ ಏರ್​ಪೋರ್ಟ್​ ಅಥಾರಿಟಿಯಲ್ಲಿವೆ 368 ಹುದ್ದೆಗಳು

    ಏರ್​ಪೋರ್ಟ್​ ಅಥಾರಿಟಿ ಆಫ್​ ಇಂಡಿಯಾ (ಎಎಐ)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 368 ಹುದ್ದೆಗಳಿವೆ.

    ಎಎಐನ 368 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 155 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 35, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 98, ಎಸ್‍ಸಿಗೆ 56, ಎಸ್‍ಟಿಗೆ 24 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಜೂನಿಯರ್ ಎಕ್ಸಿಕ್ಯೂಟೀವ್ ಹುದ್ದೆಗಳಲ್ಲಿ 8 ಸ್ಥಾನಗಳನ್ನು ಶ್ರವಣದೋಷ ಇರುವ (ಅಂಗವಿಕಲ) ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಮ್ಯಾನೇಜರ್ ಹುದ್ದೆಗೆ ಮಾಸಿಕ 60 ಸಾವಿರ ರೂ. ಹಾಗೂ ಜೂನಿಯರ್ ಎಕ್ಸಿಕ್ಯೂಟೀವ್ ಹುದ್ದೆಗೆ ಮಾಸಿಕ 40,000 ರೂ. ವೇತನ ಜತೆ ಎಎಐ ನಿಯಮದಂತೆ ಡಿಎ, ಬಾಡಿಗೆ ಮನೆ ಭತ್ಯೆ, ವೈದ್ಯಕೀಯ ಭತ್ಯೆ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು. ಮ್ಯಾನೇಜರ್ ಹುದ್ದೆಗೆ ಕನಿಷ್ಠ 5 ವರ್ಷದ ವೃತ್ತಿ ಅನುಭವ ಅವಶ್ಯ.

    ಹುದ್ದೆ, ಸಂಖ್ಯೆ ವಿವರ
    * ಮ್ಯಾನೇಜರ್ ಫೈರ್ ಸರ್ವಿಸ್ – 11
    * ಮ್ಯಾನೇಜರ್ ಟೆಕ್ನಿಕಲ್ – 2
    * ಜೂನಿಯರ್ ಎಕ್ಸಿಕ್ಯೂಟೀವ್ (ಏರ್​ಟ್ರಾಫಿಕ್ ಕಂಟ್ರೋಲರ್) – 264
    * ಜೂನಿಯರ್ ಎಕ್ಸಿಕ್ಯೂಟೀವ್ (ಏರ್​ಪೋರ್ಟ್​ ಆಪರೇಷನ್ಸ್) – 83
    * ಜೂನಿಯರ್ ಎಕ್ಸಿಕ್ಯೂಟೀವ್ (ಟೆಕ್ನಿಕಲ್) – 8

    ವಿದ್ಯಾರ್ಹತೆ:
    ಫೈರ್, ಮೆಕ್ಯಾನಿಕಲ್, ಆಟೋಮೊಬೈಲ್ ಇಂಜಿನಿಯರಿಂಗ್‍ನಲ್ಲಿ ಬಿಇ, ಬಿ.ಟೆಕ್ ಪದವಿ, ಫಿಜಿಕ್ಸ್, ಮ್ಯಾಥಮೆಟಿಕ್ಸ್‍ನಲ್ಲಿ ಬಿಎಸ್‍ಸಿ ಪದವಿ, ಎಂಬಿಎ.

    ವಯೋಮಿತಿ:
    30.11.2020ಕ್ಕೆ ಅನುಗುಣವಾಗಿ ಮ್ಯಾನೇಜರ್ ಹುದ್ದೆಗೆ ಗರಿಷ್ಠ 32 ವರ್ಷ, ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಗರಿಷ್ಠ 27 ವರ್ಷ. ಸರ್ಕಾರದ ನಿಯಮದನ್ವಯ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ, ಎಸ್ಸಿ, ಎಸ್‍ಟಿ ಅಭ್ಯರ್ಥಿಗಳಿಗೆ 5, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3ವರ್ಷ ಹಾಗೂ ಎಎಐನ ಸಿಬ್ಬಂದಿಗೆ 10 ವರ್ಷ ವಯೋ ಸಡಿಲಿಕೆ ಇದೆ.

    ಆಯ್ಕೆ ಪ್ರಕ್ರಿಯೆ:
    ಅಭ್ಯರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿರುತ್ತದೆ. ಆನ್‍ಲೈನ್ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ, ಸಂದರ್ಶನ, ದೈಹಿಕ ಪರೀಕ್ಷೆ, ಎಂಡ್ಯೂರನ್ಸ್, ಚಾಲನಾ, ಧ್ವನಿ ಪರೀಕ್ಷೆಗಳನ್ನು ನಡೆಸಲಾಗುವುದು.

    ಅರ್ಜಿ ಶುಲ್ಕ:
    ಎಸ್‍ಸಿ, ಎಸ್‍ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 170 ರೂ., ಇತರ ಅಭ್ಯರ್ಥಿಗಳು 1000 ರೂ. ಪಾವತಿಸತಕ್ಕದ್ದು. ಎಎಐನಲ್ಲಿ ಅಪ್ರೆಂಟೀಸ್ ತರಬೇತಿ ಪಡೆದ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂಧ ವಿನಾಯಿತಿ ಇದೆ.

    ಸೂಚನೆ:
    ಆಯ್ಕೆಯಾದ ಅಭ್ಯರ್ಥಿಗಳು 3 ವರ್ಷ ಎಎಐನಲ್ಲಿ ಕಾರ್ಯ ನಿರ್ವಹಿಸುವುದಾಗಿ ಹುದ್ದೆಗೆ ಅನುಗುಣವಾಗಿ 7 ಹಾಗೂ 5 ಲಕ್ಷ ರೂ. ಬಾಂಡ್ ನೀಡಬೇಕು. ಅಭ್ಯರ್ಥಿಗಳನ್ನು ದೇಶದಾದ್ಯಂತ ಯಾವ ಸ್ಥಳಕ್ಕೆ ಬೇಕಾದರೂ ನಿಯೋಜಿಸಬಹುದಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 14.1.2021

    ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ :https://bit.ly/3p8m37B

    ಮಾಹಿತಿಗೆಇಲ್ಲಿ ಕ್ಲಿಕ್ಕಿಸಿ : http://www.aai.aero

    ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ

    ಎಸ್​ಎಸ್​ಎಲ್​ಸಿಯಿಂದ ಬಿಇ ಪದವೀಧರರವರೆಗೆ ಎಚ್‍ಎಲ್‍ಎಲ್​ನಲ್ಲಿ ಉದ್ಯೋಗಾವಕಾಶ

    ಎಸ್​ಎಸ್​ಎಲ್​ಸಿ, ಡಿಪ್ಲೋಮಾ, ಪದವೀಧರರಿಗೆ ಕೇಂದ್ರ ಸರ್ಕಾರದ 74 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts