ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡಲು ಇಲ್ಲಿದೆ ಸುವರ್ಣಾವಕಾಶ

jobs1
Published on

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ಜಿಲ್ಲೆಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಟ್ಟು ಹುದ್ದೆಗಳು: 13.

ಒಟ್ಟು ಎಂಟು ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ದೂರ ಶಿಕ್ಷಣದ ಮೂಲಕ ಪಡೆದಿದ್ದರೆ ಅಂತಹವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಆಯ್ದ ಅಭ್ಯರ್ಥಿಗಳಿಗೆ ದೂರವಾಣಿ ಮುಖಾಂತರ ಸಂದರ್ಶನ ದಿನಾಂಕ ತಿಳಿಸಲಾಗುವುದು. ಸಂದರ್ಶನವನ್ನು ಕೇಂದ್ರ ಕಚೇರಿ ಅಥವಾ ಆಯಾ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ವಿಡಿಯೋ ಸಂವಾದದ ಮೂಲಕ ನಡೆಸಲಾಗುವುದು. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು.

ಎಲ್ಲೆಲ್ಲಿ ಉದ್ಯೋಗಾವಕಾಶ?

ಬೆಂಗಳೂರು ನಗರ

ಬೆಂಗಳೂರು ಗ್ರಾಮೀಣ

ಕೋಲಾರ

ರಾಮನಗರ

ಚಿಕ್ಕಬಳ್ಳಾಪುರ

ಚಿತ್ರದುರ್ಗ

ಬೀದರ್

ಹಾವೇರಿ

ಹುದ್ದೆ ಸಂಖ್ಯೆ ವಿವರ

* ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು - 2

- ಜಿಲ್ಲಾ ಪಂಚಾಯಿತಿ ಕಚೇರಿ - ಜಲ ಜೀವನ ಮಿಷನ್

* ಜಿಲ್ಲಾ ಯೋಜನಾ ವ್ಯವಸ್ಥಾಪಕ - 1

* ಜಿಲ್ಲಾ ಎಂಐಎಸ್ ಸಮಾಲೋಚಕರು - 5

- ಜಿಲ್ಲಾ ಪಂಚಾಯಿತಿ ಕಚೇರಿ - ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)

* ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು (ಐಇಸಿ) - 1

* ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು - 4

ವಿದ್ಯಾರ್ಹತೆ: ಎನ್ವಿರಾನ್‍ಮೆಂಟಲ್/ ಸಿವಿಲ್ ಇಂಜಿನಿಯರಿಂಗ್, ಸೋಷಿಯಲ್ ಸೈನ್ಸ್, ಮ್ಯಾನೇಜ್‍ಮೆಂಟ್, ಸೋಷಿಯಲ್ ವರ್ಕ್, ಮಾಸ್ ಕಮ್ಯುನಿಕೇಷನ್, ಜರ್ನಲಿಸಂನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ, ಎಂಸಿಎ, ಎಂಎಸ್ಸಿ ಜತೆ ವೃತ್ತಿ ಅನುಭವ ಅವಶ್ಯ.

ವಯೋಮಿತಿ: 23.12.2020ಕ್ಕೆ ಗರಿಷ್ಠ 45 ವರ್ಷ.

ವೇತನ: ಹುದ್ದೆಗೆ ಅನುಗುಣವಾಗಿ ಮಾಸಿಕ 22,000 ರೂ.ನಿಂದ 45,000 ರೂ. ವರೆಗೆ ಇದೆ.

ಗುತ್ತಿಗೆ / ಹೊರಗುತ್ತಿಗೆ ಅವಧಿ: ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕ ಹುದ್ದೆಗಳಾಗಿದ್ದು, ಒಂದು ವರ್ಷದ ಅವಧಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಅವಧಿ ನವೀಕರಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: 20.2.2021

ಅರ್ಜಿ ಸಲ್ಲಿಕೆ ವಿಳಾಸ: ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆಎಚ್‍ಬಿ ಕಟ್ಟಡ, ಕಾವೇರಿ ಭವನ, ಕೆಜಿ ರಸ್ತೆ, ಬೆಂಗಳೂರು-5600009

ಅಧಿಸೂಚನೆಗೆ: https://bit.ly/39LUaNN

ಮಾಹಿತಿಗೆ: https://rdpr.karnataka.gov.in

ಹೆಚ್ಚಿನ ಉದ್ಯೋಗ ಸುದ್ದಿಗೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net